ಬಂಡಿತ್ತಡ್ಕ ಶಾಲೆಯ ಹಳೆ ವಿದ್ಯಾರ್ಥಿ ಸಂಘಕ್ಕೆ ಪುನರ್ಜನ್ಮ ನೀಡಿದ ಇಸ್ಮಾಯಿಲ್ ಕುಕ್ಕಾಜೆಗೆ ಸನ್ಮಾನ.
ಮಂಗಳೂರು: ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಕರ್ನಾಟಕ ಇದರ ವತಿಯಿಂದ ನಡೆದ 75 ನೇ ರಾಜ್ಯ ಸಮಾವೇಶದಲ್ಲಿ ಬಂಡಿತ್ತಡ್ಕ ಶಾಲೆಗೆ ಹಳೆ ವಿದ್ಯಾರ್ಥಿ ಮತ್ತು ಊರವರನ್ನು ಒಟ್ಟುಗೂಡಿಸಿ ಪುನರ್ಜನ್ಮ ಕೊಟ್ಟ ಅಲ್ಲಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕುಕ್ಕಾಜೆಯವರನ್ನು ಮಂಗಳೂರು ಪುರಭವನದಲ್ಲಿ ಸನ್ಮಾನಿಸಲಾಯಿತು.