ಪೈವಳಿಕೆ: ಕೇರಳ ಸರಕಾರ ಉದ್ದೇಶ ಪೂರ್ವಕವಾಗಿ ಆಡಳಿತ ಭಾಷೆ ಮಲಯಾಳಂ ಕಡ್ಡಾಯಗೊಳಿಸಿ ಗಡಿನಾಡು ಭಾಷಾ ಅಲ್ಪಸಂಖ್ಯಾಕರ ಮೂಲಭೂತ ಹಕ್ಕುಗಳನ್ನು ಸದ್ದಿಲದೇ ದಮನಿಸುತ್ತಿದ್ದಾರೆ.
ಪಿನರಾಯಿ ಸರಕಾರ ಆಡಳಿತ ಭಾಷೆಯಾಗಿ ಮಲಯಾಳಂ ಕಡ್ಡಾಯಗೊಳಿಸುವಾಗ ನಿಯಮಸಭೆಯ ಚರ್ಚೆಯಲ್ಲಿ ಭಾಗವಹಿಸದ ಮಂಜೇಶ್ವರ ಶಾಸಕರ ಬೇಜವಾಬ್ದಾರಿ ತನ ಖಂಡನಿಯ ಮಾತ್ರವಲ್ಲ ಅಕ್ಷಮ್ಯ ಅಪರಾಧ ಕೂಡ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ. ಎಂ ಹೇಳಿದರು. ನಿಯಮ ಸಭೆಯಲ್ಲಿ ಮಲಯಾಳಂ ಕಡ್ಡಾಯಗೊಳಿಸುವ ಬಿಲ್ ಮೇಲೆ ಚರ್ಚಿಸದ ಮಂಜೇಶ್ವರ ಶಾಸಕ ಕನ್ನಡ ನಾಡಿಗೆ ಅಗತ್ಯವೇ ಎಂದು ಜನತೆ ತೀರ್ಮಾನಿಸಬೇಕು. ಕೇರಳದಲ್ಲಿ ಮಲಯಾಳಂ ಆಡಳಿತ ಭಾಷೆಯಾಗಿ ಕಡ್ಡಾಯ ಆದಕಾರಣ ಕೇರಳ ಚುನಾವಣಾ ಆಯೋಗ ನೀಡುವ SIR ಫಾರಂ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಅರ್ಜಿ ಕೂಡ ಮಲಯಾಳಂ ಭಾಷೆಯಲ್ಲಿ ಮಾತ್ರ ಲಭ್ಯವಾಗಿದೆ, ಸರಕಾರ ಹಾಗೂ ಶಾಸಕರ, ಚುನಾವಣ ಆಯೋಗದ ಕನ್ನಡ ವಿರೋಧಿ ನೀತಿಗೆ ಬಿಜೆಪಿ ಖಂಡಿಸುತ್ತಿದೆ.
ಜನತೆ ಗ್ರಾಮ ಗ್ರಾಮಗಳಲ್ಲಿ ಬಿಜೆಪಿಗೆ ಅಧಿಕಾರ ನೀಡಿದರೆ ಬಿಜೆಪಿ ಆಡಳಿತಕ್ಕೆ ಬರುವ ಪಂಚಾಯತ್ ಗಳಲ್ಲಿ ಕನ್ನಡ ಕಡ್ಡಾಯ ಆಡಳಿತ ಭಾಷೆಯಾಗಿ ಮೊದಲ ಸಭೆಯಲ್ಲೇ ತೀರ್ಮಾನ ಮಾಡಲಿದೆ. ಜನತೆಗೆ ಎಲ್ಲಾ ಅರ್ಜಿಗಳನ್ನು, ಕನ್ನಡದಲ್ಲೇ ನೀಡಲಿದೆ ಹಾಗೂ ಕನ್ನಡ ಬಲ್ಲವರನ್ನು ಮಾತ್ರ ನೇಮಕಾತಿಗೆ ಸಿಪಾರಸು ಮಾಡಲಿದೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.
ಬಿಜೆಪಿಗೆ ಮತ ನೀಡಿ ಅಧಿಕಾರ ನೀಡಿದರೆ ಕನ್ನಡವನ್ನು ಉಳಿಸಲು ಬಿಜೆಪಿ ಕನ್ನಡಿಗರೊಂದಿಗೆ ಇರಲಿದೆ ಎಂದು ಹೇಳಿದರು. ಮಂಜೇಶ್ವರ ಮಂಡಲದ ಎಲ್ಲಾ 4 ಪಂಚಾಯತ್ ಗಳಲ್ಲಿ ಬಿಜೆಪಿ ಯ ಎಲ್ಲಾ ಅಭ್ಯರ್ಥಿಗಳು ಕನ್ನಡಿಗರು ಎಂದು ಅವರು ಹೇಳಿದರು.
