ಸುಳ್ಳು ಆರೋಪ ಹೋರಿಸಿ ಕ್ರೈಸ್ತ ಸನ್ಯಾಸಿಯಾರನ್ನು ಬಂಧಿಸಿ ಜೈಲಿಗಟ್ಟಿದ ಛತ್ತೀಸ್ ಘಡ್ ಬಿಜೆಪಿ ಸರಕಾರದ ವಿರುದ್ಧ ಮಜೀರ್ಪಳ್ಳದಲ್ಲಿ LDF ಪ್ರತಿಭಟನಾ ಸಭೆ.
ಆಗಸ್ಟ್ 04, 2025
0
ಸುಳ್ಳು ಆರೋಪ ಹೋರಿಸಿ ಕ್ರೈಸ್ತ ಸನ್ಯಾಸಿಯಾರನ್ನು ಬಂಧಿಸಿ ಜೈಲಿಗಟ್ಟಿದ ಛತ್ತೀಸ್ ಘಡ್ ಬಿಜೆಪಿ ಸರಕಾರದ ವಿರುದ್ಧ ಮಜೀರ್ಪಳ್ಳದಲ್ಲಿ LDF ಪ್ರತಿಭಟನಾ ಸಭೆ.
ವರ್ಕಾಡಿ: ಸುಳ್ಳು ಆರೋಪ ಹೋರಿಸಿ ಕ್ರೈಸ್ತ ಸನ್ಯಾಸಿಯಾರನ್ನು ಬಂಧಿಸಿ ಜೈಲಿಗಟ್ಟಿದ ಛತ್ತೀಸ್ ಘಡ್ ಬಿಜೆಪಿ ಸಂಘಪರಿವಾರ ಸರಕಾರದ ವಿರುದ್ಧ LDF ಪ್ರತಿಭಟನಾ ಸಭೆ ಮಜೀರ್ಪಳ್ಳ ಪೇಟೆಯಲ್ಲಿ ನಡೆಯಿತು. ಪ್ರತಿಭಟನಾ ಸಭೆಯಲ್ಲಿ LDF ಮಂಡಲ ಅಧ್ಯಕ್ಷ ಕೆ. ಆರ್. ಜಯಾನಂದ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ. ಪಿ. ಬಾಬು ಉದ್ಘಾಟಿಸಿದರು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, ಜೆಡಿಎಸ್ ನೇತಾರ ಡಾ. ಕೆ. ಎ. ಖಾದರ್, NCP ನೇತಾರ ಮೆಹಮೂದ್ ಕೈಕಂಬ, ಸಿದ್ಧಿಕ್ ಕೈಕಂಬ, ಸಿಪಿಎಂ ನೇತಾರೆ ಬೇಬಿ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತೀ, ಸಿಪಿಐ ನೇತಾರ ಎಸ್ ರಾಮಚಂದ್ರ ಮೊದಲಾದವರು ಸಭೆಯನ್ನು ಉದ್ದೇಸಿಸಿ ಮಾತಾಡಿದರು. LDF ಮಂಡಲ ಕನ್ವಿನರ್ ಜಯರಾಮ ಬಲ್ಲoಗುಡೇಲು ಸ್ವಾಗತಿಸಿ, ನವೀನ್ ಕುಮಾರ್ ತಚ್ಚಿರೆ ವಂದಿಸಿದರು.








