ವರ್ಕಾಡಿ ಗ್ರಾಮ ಪಂಚಾಯತ್ ಕುಟುಂಬ ಶ್ರೀ ಅಧ್ಯಕ್ಷೆಯ ದಬ್ಬಾಳಿಕೆ ಖಂಡನಿಯ - ಬಿಜೆಪಿ.
ಆಗಸ್ಟ್ 03, 2025
0
ವರ್ಕಾಡಿ ಗ್ರಾಮ ಪಂಚಾಯತ್ ಕುಟುಂಬ ಶ್ರೀ ಅಧ್ಯಕ್ಷೆಯ ದಬ್ಬಾಳಿಕೆ ಖಂಡನಿಯ - ಬಿಜೆಪಿ.
ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತ್ ಕುಟುಂಬ ಶ್ರೀ ಚೇರ್ ಪರ್ಸನ್ ಪಂಚಾಯತ್ ನಲ್ಲಿ ಬರುವ ನಾಗರಿಕರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಮತ್ತು ರಾಜಕೀಯವಾಗಿ ತನ್ನ ಪಕ್ಷದವರು ಅಲ್ಲದವರ ಮೇಲೆ ವಿರೋಧ ಮಾಡುವುದು, ಹಾಗೂ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ನಕಲಿ ಕೇಸ್ ದಾಖಲಿಸಿ ಬೆದರಿಸುವುದು ಜನ ವಿರೋಧಿನೀತಿ,
ಪಂಚಾಯತ್ ಕಚೇರಿ ಜನತೆಯ ಬೇಡಿಕೆಗಳಿಗೆ ಸ್ಪಂದಿಸಲು ಇರುವಂತದ್ದು ಅಲ್ಲದೆ ಸಹಾಯ ಕೇಳಿ ಬರುವ ಜನರಿಗೆ ಬೇಧರಿಸಲು ಇರುವುದಲ್ಲ ಎಂದು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಆರೋಪಿಸಿದೆ. ಪಂಚಾಯತ್ ನ ವೆಲ್ಫೇರ್ ಸ್ಥಾಯಿ ಸಮಿತಿ ಅಡಿಯಲ್ಲಿ ಬರುವ ಕುಟುಂಬ ಶ್ರೀ ವಿವರಗಳನ್ನು, ಸಭೆ ಸೇರುವಾಗ, ಮೀಟಿಂಗ್ ಮಾಡುವಾಗ ವೆಲ್ಫೇರ್ ಸ್ಥಾಯಿ ಸಮಿತಿಗೆ ತಿಳಿಸಬೇಕಾದದ್ದು ಕುಟುಂಬ ಶ್ರೀ ಚೇರ್ ಪರ್ಸನ್ ರವರ ಕರ್ತವ್ಯ. ಅಧ್ಯಕ್ಷರಾದ ರಾಜ್ ಕುಮಾರ್ ಮುಟ್ಲ ಕುಟುಂಬ ಶ್ರೀ ನೀಡಬೇಕಾದ ಲೋನ್ ತಡ ಆಗುವ ಬಗ್ಗೆ ಹಾಗೂ ಕುಟುಂಬ ಶ್ರೀ ಕಚೇರಿಗೆ ಬರುವ ನಾಗರಿಕರನ್ನು ಬೆದರಿಸುವ ಹೌಹಾರುವ ವಿಜಯಲಕ್ಷ್ಮಿಯ ಕ್ರಮವನ್ನು ಪ್ರಶ್ನೆಸಿದಕ್ಕೆ ರಾಜ್ ಕುಮಾರ್ ಸಹಿತ ಬಿಜೆಪಿ ನೇತಾರರ ಹೆಸರು ಸೇರಿಸಿ ನಕಲಿ ಪೊಲೀಸ್ ಕೇಸ್ ನೀಡುರುವ ದುರುದ್ದೇಶ ರಾಜಕೀಯ ಪ್ರೇರಿತವಾಗಿದೆ. ವೆಲ್ಫೇರ್ ಅದಿನದಲ್ಲಿ ಬರುವ ಕುಟುಂಬ ಶ್ರೀ ವಿಚಾರವನ್ನು ವೆಲ್ಫೇರ್ ಅಧ್ಯಕ್ಷರು ಕೇಳಬಾರದು ಎಂದು ಹೇಳುವ ಸಿಡಿಎಸ್ ಮುಖ್ಯಸ್ಥೆಯ ಉದ್ದಾಟತನ ಅಹಂಕಾರದ ಪರಮಾವಾದಿ, ದಬ್ಬಾಳಿಕೆಗೆ ಬೆಂಬಲ ನೀಡುವ ಪಂಚಾಯತ್ ಅಧ್ಯಕ್ಷರ ಕಾರ್ಯವೈಖರಿಯನ್ನು ಬಿಜೆಪಿ ಪ್ರಶ್ನೆಸಿದೆ. ಅಲ್ಲದೆ ಕುಟುಂಬ ಶ್ರೀ ವರ್ಕಾಡಿ ಪಂಚಾಯತ್ ನಲ್ಲಿ ಕೂಡಲೇ ಲೋನ್ ವಿತರಣೆ ಮಾಡದಿದ್ದರೆ ಪ್ರತಿಭಟನೆ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



