ವರ್ಕಾಡಿ ಪಂಚಾಯತ್ ಕುಟುಂಬಶ್ರೀ ಕಚೇರಿಯಲ್ಲಿ ಬಿಜೆಪಿ ಪಂಚಾಯತ್ ಸದಸ್ಯೆಯ ಪತಿ ಹಾಗೂ ಪಂಚಾಯತ್ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷನ ನೇತೃತ್ವದಲ್ಲಿ ದಾಂದಲೆ ಸಿಪಿಎಂ ಆರೋಪ.
ಆಗಸ್ಟ್ 02, 2025
0
ವರ್ಕಾಡಿ ಪಂಚಾಯತ್ ಕುಟುಂಬಶ್ರೀ ಕಚೇರಿಯಲ್ಲಿ ಬಿಜೆಪಿ ಪಂಚಾಯತ್ ಸದಸ್ಯೆಯ ಪತಿ ಹಾಗೂ ಪಂಚಾಯತ್ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷನ ನೇತೃತ್ವದಲ್ಲಿ ದಾಂದಲೆ
ಸಿಪಿಎಂ ಆರೋಪ.
ಮಂಜೇಶ್ವರ: ವರ್ಕಾಡಿ ಪಂಚಾಯತ್ ನ ಕುಟುಂಬ ಶ್ರೀ ಕಚೇರಿಗೆ ಅತಿಕ್ರಮವಾಗಿ ಪ್ರವೇಶಿಸಿದ ಪಂಚಾಯತ್ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷನ ನೇತೃತ್ವದ BJP ಕಾರ್ಯಕರ್ತರ ತಂಡವು ಅನಗತ್ಯ ಕಾರಣಗಳನ್ನು ಮುಂದಿಟ್ಟುಕೊಂಡು CDS ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಯವರಿಗೆ ಜೀವ ಬೆದರಿಕೆ ನೀಡಿದ ಘಟನೆ ಮೊನ್ನೆ (ತಾ: 31-7-2025) ರಂದು ಮಧ್ಯಾಹ್ನ ವರ್ಕಾಡಿ ಪಂಚಾಯತ್ ನಲ್ಲಿ ನಡೆದಿದೆ. CDS ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ ಜೀವಬೆದರಿಕೆಯನ್ನು ನೀಡಿದ ಬಿಜೆಪಿ ತಂಡದ ವಿರುದ್ಧ ಶ್ರೀಮತಿ ವಿಜಯಲಕ್ಷ್ಮಿ ಯವರು ಮಂಜೇಶ್ವರ ಪೊಲೀಸರಿಗೆ ದೂರನ್ನು ಕೊಟ್ಟಿದ್ದು ರಕ್ಷಣೆ ಒದಗಿಸಬೇಕೆಂದು ಕೋರಿದ್ದಾರೆ. ಮಹಿಳೆಯರ ಹಾಗೂ ಮಾತೆಯರ ರಕ್ಷಣೆ ಮಾಡುವುದಾಗಿ ಕೊಚ್ಚಿ ಕೊಳ್ಳುತ್ತಿರುವ ಬಿಜೆಪಿ ಪಕ್ಷದ ಬಣ್ಣ ಬಯಲಾಗಿದ್ದು, ಈ ದುಸ್ಕೃತ್ಯವನ್ನು CPI(M) ಪಕ್ಷವು ತೀವ್ರವಾಗಿ ಖಂಡಿಸಿದೆ. ಈ ಅತಿಕ್ರಮಿ ತಂಡದಲ್ಲಿ ವರ್ಕಾಡಿ ಪಂಚಾಯತ್ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜ್ ಕುಮಾರ್ ಮುಟ್ಲ, ಪಂಚಾಯತ್ ಸದಸ್ಯೆಯ ಪತಿ ಭಾಸ್ಕರ್ ಪೊಯ್ಯೆ, ಮಣಿಕಂಠ ರೈ ಕಾರ್ಯಕರ್ತರಾದ ರಕ್ಷಣ್ ಪರಿವಾರ ಅಡೆಕಳ, ಉದಯ ಪೂಜಾರಿ ಸುಳ್ಯಮೆ, ಯತಿರಾಜ್ ಕೆದುಂಬಾಡಿ ಮುಂತಾದವರಿದ್ದು, ಇವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು CPI(M) ವರ್ಕಾಡಿ ಮತ್ತು ಕೊಡ್ಲಮೊಗರು ಲೋಕಲ್ ಸಮಿತಿ ಅಗ್ರಹಿಸಿದೆ.


