ಮೀನು ಕಾರ್ಮಿಕರ ಅವಗಣನೆ ವಿರುದ್ಧ ಮಂಜೇಶ್ವರ ಗ್ರಾಮ ಪಂಚಾಯತ್ ಕಚೇರಿಗೆ ಮೀನು ಕಾರ್ಮಿಕರ ಸಂಘ "ಸ್ವತಂತ್ರ ತೋಯಿಳಾಲಿ ಯೂನಿಯನ್" (STU) ಪ್ರತಿಭಟನಾ ಮಾರ್ಚ್.
ಜೂನ್ 21, 2025
0
ಮೀನು ಕಾರ್ಮಿಕರ ಅವಗಣನೆ ವಿರುದ್ಧ ಮಂಜೇಶ್ವರ ಗ್ರಾಮ ಪಂಚಾಯತ್ ಕಚೇರಿಗೆ ಮೀನು ಕಾರ್ಮಿಕರ ಸಂಘ "ಸ್ವತಂತ್ರ ತೋಯಿಳಾಲಿ ಯೂನಿಯನ್" (STU) ಪ್ರತಿಭಟನಾ ಮಾರ್ಚ್.
ಮಂಜೇಶ್ವರ: ಮಂಜೇಶ್ವರದ ಮೀನು ಕಾರ್ಮಿಕರನ್ನು ಮತ್ತು ಸಂಘಟನೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಆಡಳಿತ ಸಮಿತಿ ಕಡೆಗಣಿಸುತ್ತಿದೆ. ತಾರತಮ್ಯವನ್ನ ಮಾಡುತ್ತಿದೆ ಎಂದು ಆರೋಪಿಸಿ ಮಂಜೇಶ್ವರ ಪಂಚಾಯತ್ ನ ವ್ಯಾಪ್ತಿ ಪ್ರದೇಶದಲ್ಲಿರುವ ಮೀನು ಕಾರ್ಮಿಕರ ಸಂಘಟನೆಯಾದ ಸ್ವತಂತ್ರ ತೋಯಿಳಾಲಿ ಯೂನಿಯನ್" (STU) ಎಸ್. ಟಿ.ಯು ವತಿಯಿಂದ ಮಂಜೇಶ್ವರ ಗ್ರಾಮ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಲಾಯಿತು. ನೂರಾರು ಮಂದಿ ಸೇರಿದ ಈ ಮಾರ್ಚ್ ನ್ನು ಮಂಜೇಶ್ವರ ಶಾಸಕ ಎ.ಕೆ. ಎಂ ಅಶ್ರಫ್ ಉದ್ಘಾಟಿಸಿ ಮಾತನಾಡಿದರು. ಅವರು ಮಾತನಾಡಿ "ಕಳೆದ ನಾಲ್ಕು ವರ್ಷಗಳಿಂದ ಮೀನು ಕಾರ್ಮಿಕರು ಅನುಭವಿಸುವ ಸಂಕಷ್ಟ ವನ್ನು ಹಲವು ಬಾರಿ ಅಧ್ಯಕ್ಷರ ಗಮನಕ್ಕೆ ತಂದರೂ ಪ್ರತಿ ಸಲ ತಿರಸ್ಕರಿಸುವ ಮನೋಭಾವ ತೋರಿಸಿದ ಕಾರಣ ಲೀಗ್ ಸದಸ್ಯರ ಒತ್ತಡಕ್ಕೆ ಮಣಿದು ಪದ್ಧತಿಯಲ್ಲಿ ಒಳಗೊಡಿಸಿದ ಭವನ ಪದ್ದತಿಯ 10 ಲಕ್ಷ ರೂಪಾಯಿಯನ್ನು 5 ಲಕ್ಷವಾಗಿ ಕಡಿತಗೊಳಿಸಲಾಗಿದೆ. ಮತ್ಸ್ಯ ಕಾರ್ಮಿಕ ವಿಭಾಗಕ್ಕೆ ಫಂಡ್ ಬಿಡುಗಡೆಗೊಳಿಸದೆ ಅನುಕೂಲವನ್ನು ನಿಷೇಧಗೊಳಿಸಿದೆ ಎಂಬುದಾಗಿ ಅವರು ಆರೋಪಿಸಿದರು. ಈ ಕ್ರಮವನ್ನು ಪ್ರತಿಭಟಿಸಿ ಮೀನು ಕಾರ್ಮಿಕರ ಸಂಘಟನೆಯಾದ ಎಸ್. ಟಿ. ಯು ಹೊಸಬೆಟ್ಟು, ಬಂಗ್ರಮಂಜೇಶ್ವರ ಯೂನಿಟ್ ಕಮಿಟಿ ಜಂಟಿಯಾಗಿ ಪಂಚಾಯತ್ ಗೆ ಪ್ರತಿಭಟನಾ ಮಾರ್ಚ್ ಮತ್ತು ಧರಣಿ ನಡೆಸುತ್ತಿದೆ ಎಂದರು. ಪ್ರತಿಭಟನೆಯಲ್ಲಿ ನೂರಾರು ಮತ್ಸ್ಯ ಕಾರ್ಮಿಕರು ಭಾಗವಹಿಸಿದರು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಜಿಜ್ ಮಂಜೇಶ್ವರ ಅಧ್ಯಕ್ಷ ವಹಿಸಿದರು. ಎಸ್. ಟಿ. ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಪಿ ಮೊಹಮ್ಮದ್ ಅಶ್ರಫ್, ಕಾರ್ಯದರ್ಶಿ ಶೆರೀಫ್ ಕೊಡುವಂಜಿ, ಮುಸ್ಲಿಂಲೀಗ್ ಮಂಡಲ ಕೋಶಧಿಕಾರಿ ಸೈಫುಲ್ಲ ತಂಗಳ್, ಮಂಜೇಶ್ವರ ಪಂಚಾಯತ್ ಲೀಗ್ ಅಧ್ಯಕ್ಷ ಅಜಿಜ್ ಹಾಜಿ, ಕಾರ್ಯದರ್ಶಿ ಅಬ್ದುಲ್ಲ ಕಜೆ, ಸಂಘಟನೆಯ ಜಿಲ್ಲಾಧ್ಯಕ್ಷೆ ಮುಂತಾಜ್ ಸಮೀರಾ, ಮಂಡಲ ಅಧ್ಯಕ್ಷ ಉಮ್ಮರ್ ಅಪ್ಪೋಳೋ, ಕೆ. ಎಂ. ಕೆ ಅಬ್ದುಲ್ ರಹಿಮಾನ್ ಹಾಜಿ, ಮುಸ್ಲಿಂಲೀಗ್, ಯೂತ್ ಲೀಗ್, ಎಸ್. ಟಿ. ಯು ನೇತಾರರು ಮತ್ತು ಜನ ಪ್ರತಿನಿಧಿಗಳು ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮ ಮುಂಚಿತವಾಗಿ ಮೀನು ಕಾರ್ಮಿಕ ಯೂನಿಯನ್ ಹೊಸಬೆಟ್ಟು, ಬಂಗ್ರಮಂಜೇಶ್ವರ ಯೂನಿಟ್ ನೇತಾರರ ನೇತೃತ್ವದಲ್ಲಿ ಮಾರ್ಚ್ ಮತ್ತು ಧರಣಿ ನಡೆಸಲಾಯಿತು.









