Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ನಿವೃತ್ತ ಜಿಲ್ಲಾ, ಉಪಜಿಲ್ಲಾ ವಿದ್ಯಾಧಿಕಾರಿ, ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ, ಹೊಸಂಗಡಿ ನಿವಾಸಿ ದಿನೇಶ್ ವಿ. (56) ಇಲಿ ಜ್ವರ ಬಾಧಿಸಿ ಮೃತ್ಯು.

ನಿವೃತ್ತ ಜಿಲ್ಲಾ, ಉಪಜಿಲ್ಲಾ ವಿದ್ಯಾಧಿಕಾರಿ, ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ, ಹೊಸಂಗಡಿ ನಿವಾಸಿ ದಿನೇಶ್ ವಿ. (56) ಇಲಿ ಜ್ವರ ಬಾಧಿಸಿ ಮೃತ್ಯು.
ಮಂಜೇಶ್ವರ: ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರಾಗಿ ನಿವೃತ್ತಿ ಹೊಂದಿ ಇದೀಗ ಕಳೆದ 10 ದಿನದಿಂದ ವಿಶ್ರಾಂತ ಜೀವನ ನಡೆಸುತ್ತಿದ್ದ ಹೊಸಂಗಡಿ ಬಳಿಯ ವಾಮಂಜೂರು, ಅಂಗಡಿಪದವು ನಿವಾಸಿ ನಿವೃತ್ತ ಅಧ್ಯಾಪಕ, ಮುಖ್ಯ್ಯೊಪಾದ್ಯಾಯರಾದ ದಿನೇಶ್ ವಿ. (56) ಇಲಿ ಜ್ವರ ಬಾಧಿಸಿ, ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಇಂದು (13-06-2025) ಅಪರಾಹ್ನ 3.00 ಗಂಟೆಗೆ ನಿಧನರಾದರು. ಮೃತರು ದಿವಂಗತರಾದ ಕುನ್ನಿರಾಮನ್ - ಅಮ್ಮಣಿ ದಂಪತಿಗಳ ಪುತ್ರರಾಗಿದ್ದು, ಪತ್ನಿ: ಶ್ರೀಲೇಖ.ಕೆ, ಮಕ್ಕಳಾದ: ಶ್ರೀಷ್ಮ, ದೇವಪ್ರಿಯ, ಅಭಿರಾಮ್, ಸಹೋದರಿಯರಾದ: ಅಹಲ್ಯ, ಶೀಲಾವತಿ ಹಾಗೂ ಅಪಾರ ಬಂಧು ಬಳಗವನ್ನು, ಅಧ್ಯಾಪಕ ವೃಂದ, ಶಿಷ್ಯವೃಂದವನ್ನು ಅಗಲಿದ್ದಾರೆ. ದಿನೇಶ್.ವಿ ಯವರು 16 ವರ್ಷಗಳ ಸುದೀರ್ಘ ಕಾಲ ಕುಂಜತ್ತೂರು ಸರಕಾರಿ ಹೈಸ್ಕೂಲ್ ನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಬಂಗ್ರ ಮಂಜೇಶ್ವರ ಸರಕಾರಿ ಶಾಲೆ, ಎಡನೀರು ಸರಕಾರಿ ಹೈಸ್ಕೂಲ್ ನಲ್ಲಿ ಮುಖ್ಯ್ಯೊಪಾಧ್ಯಯಾರಾಗಿ, ಬಳಿಕ ಆರು ವರ್ಷಗಳ ಕಾಲ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ, ಎರಡು ವರ್ಷಗಳ ಕಾಲ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಯಾಗಿ, ಕೊನೆಗೆ ಕಾಸರಗೋಡು ಜಿಲ್ಲಾ (ಡೆಪುಟಿ ಡೈರೆಕ್ಟರ್) ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಮೊನ್ನೆ ಮೇ 31 ರಂದು ನಿವೃತ್ತಿ ಹೊಂದಿದರು. ಈ ನಡುವೆ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಿವೃತ್ತಿ ಹೊಂದಿ ಕೇವಲ 10 ದಿನಗಳು ಕಳೆದಿದ್ದು, ಪತ್ನಿ ಮಕ್ಕಳ ಜೊತೆ ವಿಶ್ರಾಂತ ಜೀವನ ಸಾಗಿಸುವ ನಡುವೆ ಕಳೆದೆರಡು ದಿನಗಳ ಹಿಂದೆ ಇಲಿ ಜ್ವರ ಭಾದಿಸಿ ಕುಂಬಳೆಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಜ್ವರ ಉಲ್ಬನಿಸಿದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತಿತ್ತು. ಈ ವೇಳೆ ನಿಧನರಾದರು. ಇದೀಗ ಮೃತದೇಹ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದು, ನಾಳೆ (14-06-2025 ಶನಿವಾರ) ಬೆಳಗ್ಗೆ 9.00 ಗಂಟೆಗೆ ಮೃತದೇಹವನ್ನು ತರಲಾಗುವುದು. ಮೊದಲಿಗೆ ಹೊಸಂಗಡಿ ಬಳಿಯ ವಾಮಂಜೂರು ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗುವುದು. ಬಳಿಕ ಮನೆಗೆ ಸಾಗಿಸಿ, ನಂತರ ಹೊಸಂಗಡಿ ಬಳಿಯ ರಾಮತ್ತಮಜಾಲ್ ಸಾರ್ವಜನಿಕ ರುಧ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆಯವರು "ನಮ್ಮ ಮಂಜೇಶ್ವರ" ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. ಮೃತರ ನಿಧನಕ್ಕೆ ಕೇರಳ ತುಳು ಅಕಾಡೆಮಿ ಅಧ್ಯಕ್ಷ: ಕೆ. ಆರ್. ಜಯಾನಂದ, ಶಾಶಕರಾದ: ಸಿ. ಎಚ್ ಕುನ್ಯoಬು, ಎ. ಕೆ. ಎಂ ಅಶ್ರಫ್, ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷರಾದ: ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ: ಜಾರ್ಜ್ ಕ್ರಾಸ್ತ, ವಿವಿಧ ಸಂಘಟನೆಗಳ ಪಧಾಧಿಕಾರಿಗಳಾದ: ಶ್ಯಾಮ್ ಭಟ್ ಪೈವಳಿಕೆ, ಅರವಿಂದಾಕ್ಷ ಬಂಡಾರಿ ದಡ್ಡoಗಡಿ, ಸುಖೇಶ್, ರವೀಂದ್ರ ಎನ್, ರಾಮಕೃಷ್ಣ ಕಡಂಬಾರ್, ಮಧು ಮಾಸ್ತರ್, ವಿಜಯ ಸಿ. ಎಚ್, ಸಿರಾಜುದ್ದೀನ್, ಇಸ್ಮಾಯಿಲ್, ಶಿವರಾಮ ಭಟ್ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.