Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮೀಯಪದವಿನಲ್ಲಿ ಭಾರಿ ಗುಡ್ಡ ಕುಸಿತ. ವಿದ್ಯುತ್ ಕಂಬಗಳು ಧರಾಶಾಹಿ, ಮನೆ ಅಪಾಯದಲ್ಲಿ.

ಮೀಯಪದವಿನಲ್ಲಿ ಭಾರಿ ಗುಡ್ಡ ಕುಸಿತ. ವಿದ್ಯುತ್ ಕಂಬಗಳು ಧರಾಶಾಹಿ, ಮನೆ ಅಪಾಯದಲ್ಲಿ.
ಮಂಜೇಶ್ವರ: ಇಲ್ಲಿನ ಮೀಯಪದವಿನ ಕೆದುಂಗಾಡು ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿ ಭಾರಿ ನಾಶ ನಷ್ಟ ಉಂಟಾಗಿದೆ. ಕೆದುಂಗಾಡಿನ ಸುರೇಂದ್ರ ಬಾಬು ಎಂಬವರ ತೋಟದ ಒಂದು ಭಾಗ ಸಂಪೂರ್ಣ ಕುಸಿದು ಹೋಗಿದ್ದು, ಎಂಟು ವಿದ್ಯುತ್ ಕಂಬಗಳು ಧರಶಾಹಿಯಾಗಿದೆ. ಇದೀಗ ಮನೆಯೂ ಕುಸಿತದ ಭೀತಿಯಲ್ಲಿದ್ದು, ಕಂದಾಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನಿರ್ದೇಶಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಸಿದ್ದೀಕ್ ಮೀಯಪದವು, ಪಂಚಾಯತ್ ಅಧಿಕೃತರು ಭೇಟಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.