Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಬಸ್ - ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವರ್ಕಾಡಿ ನಿವಾಸಿ ಯುವಕ ಇಂದು ಬೆಳಗ್ಗೆ ಮೃತ್ಯು.

ಬಸ್ - ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವರ್ಕಾಡಿ ನಿವಾಸಿ ಯುವಕ ಇಂದು ಬೆಳಗ್ಗೆ ಮೃತ್ಯು.
ಮಂಜೇಶ್ವರ: ರೈಲು ನಿಲ್ದಾಣದಿಂದ ಬರುತ್ತಿದ್ದ ಕಾರಿಗೆ ಕಾಸರಗೋಡು ಭಾಗದಿಂದ ತಲಪಾಡಿಗೆ ತೆರಳುತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಾವಳ ತೋಕೆ ನಿವಾಸಿ ಕೆಲ್ವಿನ್ ಡಿ' ಸೋಜಾ (21) ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಇನ್ನಿಬ್ಬರ ಪೈಕಿ ವರ್ಕಾಡಿ ದೇವಸ್ಥಾನ ಬಳಿಯ ನಿವಾಸಿ ಪ್ರೀತಂ (20) ಚಿಕಿತ್ಸೆ ಪಡೆದು ಚೇತರಿಸುತ್ತಿದ್ದಾನೆ. ಮತ್ತೋರ್ವ ತಿಮ್ಮ0ಗೂರು ಅಣೆ ನಿವಾಸಿ ಪ್ರಜ್ವಲ್ (21) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಈ ಮೂವರ ಪೈಕಿ ಕೆಲ್ವಿನ್ ಡಿ' ಸೋಜಾರವರಿಗೆ ತಲೆಗೆ ಗಂಭೀರ ಹೊಡೆತ ಬಿದ್ದಿದ್ದುದರಿಂದ ಮಂಗಳೂರಿನ ಯುನಿಟಿ ಅಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಮನೆಗೆ ತರಲಾಗುವುದು. ನಂತರ ವರ್ಕಾಡಿ ಸೀಕ್ರೆಟ್ ಹಾರ್ಟ್ ಚರ್ಚ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ವರ್ಕಾಡಿ ತೋಕೆಯ ಕೃಷಿಕ ಸಿಪ್ರಿಯನ್ ಡಿ' ಸೋಜಾ - ಪ್ರಿಸಿಲ ಡಿ' ಸೋಜಾ ದಂಪತಿಯ ಪುತ್ರನಾದ ಕೆಲ್ವಿನ್ ಡಿ' ಸೋಜಾ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪೂರೈಸಿ ಇದೀಗ ಐಟಿಐ ಕಲಿಯಲು ನಿರ್ಧರಿಸಿದ್ದನು. ಮೃತನು ತಂದೆ, ತಾಯಿ, ಏಕ ಸಹೋದರಿ ಕ್ರಿಶಾಲ್ ಡಿ' ಸೋಜಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೆಲ್ವಿನ್ ಡಿ' ಸೋಜಾ ಇತ್ತೀಚೆಗೆ ಸುರಿಯುತ್ತಿರುವ ಗಾಳಿ ಮಳೆಯ ನಡುವೆ ವರ್ಕಾಡಿಯಲ್ಲಿ ಮನೆಯೊಂದರ ಸೀಟ್ ಹಾರಿ ಹೋದ ಸಮಯದಲ್ಲಿ ಇತರರೊಂದಿಗೆ ಸೇರಿಕೊಂಡು ಸರಿಪಡಿಸಿ ನೀಡುವಲ್ಲಿ ಸಹಕಾರಿಯಾಗಿದ್ದನು.
ಇವನು ತನ್ನ ಇಬ್ಬರು ಸ್ನೇಹಿತರೊಂದಿಗೆ ಕಾರು ಖರೀದಿಸಲೆಂದು ಮಂಗಳೂರಿಗೆ ಮೇ 30 ರಂದು ಬೆಳಗ್ಗೆ ತೆರಳುವಾಗ ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ಹೊಸಬೆಟ್ಟುವಿನಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಮೂವರು ಮಂಗಳೂರಿಗೆ ರೈಲಿನಲ್ಲಿ ತೆರಳಳಿದ್ದು, ಅದಕ್ಕಾಗಿ ಕಾರಿನಲ್ಲಿ ಮಂಜೇಶ್ವರ ರೈಲ್ವೆ ಸ್ಟೇಷನ್ ಗೆ ಬಂದಿದ್ದರು. ಆವಾಗಲೇ ರೈಲು ತೆರಳಿದ್ದರಿಂದ ಹಿಂದಿರುಗಿ ತಮ್ಮ ಕಾರಿನಲ್ಲಿ ಊರಿನ ಕಡೆ ಬರುತ್ತಿದ್ದಂತೆ ಎದುರಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.