Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ರಾಷ್ಟ್ರೀಯ ಹೆದ್ದಾರಿ ಉಪ್ಪಳದಲ್ಲಿ ಲಾರಿ ಹಾಗೂ ಕಾರು ಢಿಕ್ಕಿ ಹೊಡೆದು ಮಹಿಳೆ ಸಾವು.

ರಾಷ್ಟ್ರೀಯ ಹೆದ್ದಾರಿ ಉಪ್ಪಳದಲ್ಲಿ ಲಾರಿ ಹಾಗೂ ಕಾರು ಢಿಕ್ಕಿ ಹೊಡೆದು ಮಹಿಳೆ ಸಾವು.
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಉಪ್ಪಳದಲ್ಲಿ ಲಾರಿ ಹಾಗೂ ಕಾರು ಢಿಕ್ಕಿ ಹೊಡೆದು ಮಹಿಳೆ ಸಾವಿಗೀಡಾದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ. ಮಂಗಳೂರು ಪಡೀಲು ನಿವಾಸಿ ಪದ್ಮನಾಭ ಆಚಾರ್ಯರ ಧರ್ಮಪತ್ನಿ ನವ್ಯಾ ಆಚಾರ್ಯ (34) ಮೃತಪಟ್ಟವರಾಗಿದ್ದಾರೆ. ಪದ್ಮನಾಭ ಆಚಾರ್ಯರು ಪತ್ನಿ ಪುತ್ರನೊಂದಿಗೆ ತಮ್ಮ ಕಾರಿನಲ್ಲಿ ಕೆಲಸ ನಿಮ್ಮಿತ ಉಪ್ಪಳಕ್ಕೆ ಬಂದು ಮಧ್ಯಾಹ್ನ 2.30 ಕ್ಕೆ ಹಿಂತಿರುಗುವಾಗ ಘಟನೆ ನಡೆದಿದೆ. ಉಪ್ಪಳ ಗೇಟ್ ತಲುಪುತಿದ್ದಂತೆ ಎದುರು ಭಾಗದಿಂದ ಬಂದ ಲಾರಿ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು, ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೂ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವ ವೇಳೆ ನವ್ಯಾ ಆಚಾರ್ಯ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಪದ್ಮನಾಭ ಆಚಾರ್ಯರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪುತ್ರ ಚೇತರಿಸಿದ್ದಾನೆ. ಮೃತರು ಮೂಲತಃ ಮೀoಜ ಗ್ರಾಮ ಪಂಚಾಯತ್ ಗೊಳಪಟ್ಟ ಕೊಲ್ಯೂರು ಪದವು ನಿವಾಸಿ ಶಿವರಾಮ ಆಚಾರ್ಯ - ಮೀನಾಕ್ಷಿ ದಂಪತಿಗಳ ಪುತ್ರಿಯಾಗಿದ್ದು, ಮೃತರು ತಂದೆ, ತಾಯಿ, ಪತಿ, ಪುತ್ರ: ಗಹಾನ್, ಸಹೋದರ: ಸಂತೋಷ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಘಟನೆಯಲ್ಲಿ ಲಾರಿ ರಸ್ತೆಗೆ ಅಡ್ಡ ಮಗುಚಿ ಬಿದ್ದಿದೆ. ಲಾರಿ ಹಾಗೂ ಕಾರು ನಜ್ಜುಗುಜ್ಜಾಗಿದೆ. ಸುರಿಯುತ್ತಿರುವ ಮಳೆಯ ನಡುವೆ ಸ್ಥಳೀಯರು ಗಾಯಳುವನ್ನು ಆಸ್ಪತ್ರೆಗೂ, ವಾಹನ ಸಂಚಾರವನ್ನು ಸುಗಮಗೊಳಿಸಲು ಸಹಕರಿಸಿದರು. ಪ್ರಕರಣ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.