Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಗಡಿಯಲ್ಲಿ ಸೈನಿಕರಿದ್ದಾರೆ ದೇಶದ ಒಳಗಿರುವ ದೇಶದ್ರೋಹಿಗಳನ್ನು ದೇಶಪ್ರೇಮಿಗಳು ನಾಶ ಮಾಡಬೇಕು - ಮಾಜಿ ಸೈನಿಕ ವಿಜಯ್ ಕುಮಾರ್.

ಗಡಿಯಲ್ಲಿ ಸೈನಿಕರಿದ್ದಾರೆ ದೇಶದ ಒಳಗಿರುವ ದೇಶದ್ರೋಹಿಗಳನ್ನು ದೇಶಪ್ರೇಮಿಗಳು ನಾಶ ಮಾಡಬೇಕು - ಮಾಜಿ ಸೈನಿಕ ವಿಜಯ್ ಕುಮಾರ್.
ಮಂಜೇಶ್ವರ: ಪಾಕಿಸ್ತಾನವನ್ನು ನಾಶ ಮಾಡಲು ಭಾರತಕ್ಕೆ ಒಂದು ದಿನವೂ ಬೇಡ ಆದರೆ ದೇಶದ ಒಳಗಿರುವ ದೇಶದ್ರೋಹಿಗಳನ್ನು ನಿಗ್ರಹ ಮಾಡಬೇಕಾದದ್ದು ದೇಶಪ್ರೇಮಿಗಳ ಕರ್ತವ್ಯ ಎಂದು ನಿವೃತ್ತ ಕಮಂಡರ್ ವಿಜಯ ಕುಮಾರ್ ಕಣ್ವತೀರ್ಥ ಹೇಳಿದರು. ಅವರು ಇಂದು ಸಂಜೆ ಹೊಸಂಗಡಿಯಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಹಮ್ಮಿಕೊಂಡ "ಭಾರತ್ ಶೌರ್ಯ ತಿರಂಗ ಯಾತ್ರೆ" ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಜೆಪಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ರೈ ಉದ್ಘಾಟಿಸಿದರು. ಅವರು ಮಾತನಾಡಿ, ಆಧುನಿಕ ಜಗತ್ತಿನಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತ ಬಲಿಷ್ಠ ಸೈನಿಕ ಶಕ್ತಿಯನ್ನು ಹೊಂದಿದೆ, ಪಾಕಿಸ್ತಾನದ ಒಂದೇ ಒಂದು ಡ್ರೋನ್ ಗಳು ಭಾರತದ ಮಣ್ಣನ್ನು ಸ್ಪರ್ಶ ಮಾಡಲು ಸಾಧ್ಯವಾಗಿಲ್ಲ. ಆಪರೇಷನ್ ಸಿಂಧೂರ್ ದೇಶದ ಸೈನಿಕ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ. ಭಾರತದ ಆಯುಧಗಳಿಗೆ ಜಗತ್ತಿನ ವಿವಿಧ ದೇಶಗಳಿಂದ ಬೇಡಿಕೆ ಬಂದಿದೆ ಎಂದು ಅವರು ಹೇಳಿದರು.
ನ್ಯಾಯವಾದಿ ನವೀನ್ ರಾಜ್ ಕೆ.ಜೆ ಮಾತನಾಡಿ, ದೃಢ ನಿರ್ಧಾರದ ಪ್ರಧಾನಿ ಇದ್ದರಲ್ಲಿ ಶತ್ರುಗಳ ನಾಶಕ್ಕೆ ಆಪರೇಷನ್ ಸಿಂಧೂರ ಉದಾಹರಣೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಸ್ವಾಗತಿಸಿದರು. ಮುಖಂಡರಾದ ಎ.ಕೆ ಕಯ್ಯಾರ್, ಪದ್ಮನಾಭ ಕಡಪ್ಪರ, ಯಾದವ ಬಡಾಜೆ, ಸದಾಶಿವ ಚೇರಾಲ್, ಯತೀರಾಜ್ ಶೆಟ್ಟಿ, ತುಳಸಿ ಕುಮಾರಿ, ಬಿ.ಎಂ ಆಶಾಲತಾ, ಸುಬ್ರಮಣ್ಯ ಭಟ್, ಸತ್ಯಶಂಕರ ಭಟ್, ಜಯರಾಮ ಕುಲಾಲ್, ಚಂದ್ರಹಾಸ ಶೆಟ್ಟಿ ಬೆಜ್ಜ, ಯಶ್ ಪಾಲ್ ಮಂಜೇಶ್ವರ ನೇತೃತ್ವ ನೀಡಿದರು. ಕೆ.ವಿ ರಾಧಾಕೃಷ್ಣ ಭಟ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.