Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಎಡರಂಗ ಸರಕಾರ ಕೇರಳವನ್ನು ಸ್ಮಾರ್ಟನ್ನಾಗಿಸಿದೆ - ಇ.ಚಂದ್ರಶೇಖರನ್.

ಎಡರಂಗ ಸರಕಾರ ಕೇರಳವನ್ನು ಸ್ಮಾರ್ಟನ್ನಾಗಿಸಿದೆ - ಇ.ಚಂದ್ರಶೇಖರನ್.
ಮಂಜೇಶ್ವರ: ಎರಡನೇ ಎಡರಂಗ ಸರಕಾರ ಕೇರಳವನ್ನು ಸ್ಮಾರ್ಟಾಗಿಸಿದೆ ಎಂದು ಸಿಪಿಐ ರಾಜ್ಯ ಸಹ ಕಾರ್ಯದರ್ಶಿ, ಶಾಸಕ ಇ. ಚಂದ್ರಶೇಖರನ್ ಹೊಸಂಗಡಿ ಬಿ.ವಿ ರಾಜನ್ ವೇದಿಕೆಯಲ್ಲಿ ಇಂದು ನಡೆದ ಸಿಪಿಐ ಮಂಜೇಶ್ವರ ಮಂಡಲ ಸಮ್ಮೇಳನದ "ಪ್ರತಿನಿಧಿ ಸಮ್ಮೇಳನ" ವನ್ನು ಉದ್ಘಾಟಿಸಿ ಮಾತನಾಡಿದರು.
ಎಡರಂಗ ಸರಕಾರಕ್ಕೆ ಎಲ್ಲಾ ವಲಯಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಯಿತು. ಕೇರಳವು ಅತೀ ಬಡವರಿಲ್ಲದ ರಾಜ್ಯವಾಗುವ ಗುರಿಯತ್ತ ಸಾಗುತ್ತಿದೆ. 600 ಗ್ರಾಮ ಕಚೇರಿಗಳು ಸ್ಮಾರ್ಟ್ ಆಗಿದೆ. ಪಡಿತರ ಅಂಗಡಿಗಳು ಕೆ. ಸ್ಟೋರ್ ಆಗಿ ಬದಲಾಗುತ್ತಿವೆ. ಈಗಾಗಲೇ 1959 ಪಡಿತರ ಅಂಗಡಿಗಳನ್ನು ಸ್ಮಾರ್ಟ್ ಮಾಡಲಾಗಿದೆ. ಆರೋಗ್ಯ ರಂಗದಲ್ಲಿ ಸರಕಾರಿ ಆಸ್ಪತ್ರೆಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ. ವಯನಾಡ್ ಟೌನ್ ಶಿಫ್ ಯೋಜನೆಗಾಗಿ ರಾಜ್ಯ ಸರಕಾರ 351 ಕೊಟಿ ರೂಪಾಯಿ ಖರ್ಚು ಮಾಡುತ್ತಿದೆ. ಕೇಂದ್ರ ಸರಕಾರ ಕೇರಳವನ್ನು ಆರ್ಥಿಕವಾಗಿ ತುಳಿದಾಗಲೂ ನಾವು ಹಿಂಜರಿಯಲಿಲ್ಲ ಎಂದು ಚಂದ್ರಶೇಖರನ್ ಹೇಳಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು, ಎಐಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಕೆ.ವಿ ಕೃಷ್ಣನ್, ಮಹಿಳಾ ಸಂಘ NFIW ಜಿಲ್ಲಾ ಕಾರ್ಯದರ್ಶಿ ಪಿ. ಭಾರ್ಗವಿ, ಜಿಲ್ಲಾ ಸಮಿತಿ ಸದಸ್ಯರಾದ ಸುಂದರಿ ಆರ್. ಶೆಟ್ಟಿ, ಮೊದಲಾದವರು ಮಾತನಾಡಿದರು. ರಾಮಕೃಷ್ಣ ಕಡಂಬಾರ್, ಚಿತ್ರಾವತಿ ಅಂಜರೆ, ಅಜಿತ್ ಎಂ.ಸಿ ಲಾಲ್ ಬಾಗ್ ಒಳಗೊಂಡ ನಿಯಂತ್ರಣ ಮಂಡಳಿ ಸಮ್ಮೇಳನವನ್ನು ನಿಯಂತ್ರಿಸಿದೆ.
ಮೊದಲಿಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಹಿರಿಯ ನೇತಾರ ಎಂ. ಸಂಜೀವ ಶೆಟ್ಟಿ ಧ್ವಜಾರೋಹಣಗೈದರು. ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಸ್ವಾಗತಿಸಿ, ಎಸ್. ರಾಮಚಂದ್ರ ಬಡಾಜೆ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.