Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕುಂಜತ್ತೂರಿನಲ್ಲಿ ಸ್ಕೂಟರ್ ಹಾಗೂ ಮಿನಿ ಲಾರಿ ಡಿಕ್ಕಿ ಸ್ಕೂಟರ್ ಸವಾರ ಐಲ ನಿವಾಸಿ ಕಲ್ಪೆಶ್ (35) ನಿಧನ.

ಕುಂಜತ್ತೂರಿನಲ್ಲಿ ಸ್ಕೂಟರ್ ಹಾಗೂ ಮಿನಿ ಲಾರಿ ಡಿಕ್ಕಿ ಸ್ಕೂಟರ್ ಸವಾರ ಐಲ ನಿವಾಸಿ ಕಲ್ಪೆಶ್ (35) ನಿಧನ.
ಮಂಜೇಶ್ವರ: ಕುಂಜತ್ತೂರಿನಲ್ಲಿ ಇಂದು ಬೆಳಗ್ಗೆ ಸ್ಕೂಟರ್ ಹಾಗೂ ಮಿನಿ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಉಪ್ಪಳ ಬಳಿಯ ಐಲ ನಿವಾಸಿ ಯುವಕ ಮೃತಪಟ್ಟ ಘಟನೆ ನಡೆದಿದೆ. ಸ್ಕೂಟರ್ ಸವಾರನಾದ ಐಲ ನಿವಾಸಿ ಕಲ್ಪೆಶ್ (35) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇಂದು ಕೆಲಸ ನಿಮ್ಮಿತ ಮಂಗಳೂರು ಭಾಗಕ್ಕೆ ತೆರಳುವ ವೇಳೆ ಕುಂಜತ್ತೂರಿನಲ್ಲಿ ಮಿನಿ ಲಾರಿ ಡಿಕ್ಕಿ ಹೊಡೆಡಿದ್ದು, ಗಂಭೀರ ಗಾಯಗೊಂಡ ಕಲ್ಪೆಶ್ ರನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿಸುವ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ತಂದೆ ಉಮೇಶ್, ತಾಯಿ ಸರಯು ಟೀಚರ್, ಪತ್ನಿ ಸ್ವಾತಿ, ಸಹೋದರಿ ಪೂರ್ಣಿಮ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.