Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮುಲ್ಕಿಯಿಂದ ನಾಪತ್ತೆಯಾದ ಆಟೋ ಚಾಲಕನ ಮೃತದೇಹ ಕುಂಜತ್ತೂರು ಪದವು ಬಳಿ ಬಾವಿಯಲ್ಲಿ ಪತ್ತೆ.

ಮುಲ್ಕಿಯಿಂದ ನಾಪತ್ತೆಯಾದ ಆಟೋ ಚಾಲಕನ ಮೃತದೇಹ ಕುಂಜತ್ತೂರು ಪದವು ಬಳಿ ಬಾವಿಯಲ್ಲಿ ಪತ್ತೆ.
ಮಂಜೇಶ್ವರ: ಮುಲ್ಕಿಯಿಂದ ನಾಪತ್ತೆಯಾದ ಆಟೋ ಚಾಲಕನ ಮೃತದೇಹ ಕೇರಳ - ಕರ್ಣಾಟಕ ಗಡಿ ಪ್ರದೇಶವಾದ ಮಂಜೇಶ್ವರ ಗ್ರಾಮ ಪಂಚಾಯತ್ ಗೊಳಪಟ್ಟ ಕುಂಜತ್ತೂರು ಪದವು ಬಳಿ ಬಾವಿಯಲ್ಲಿ ನಿನ್ನೆ ರಾತ್ರಿ ಪತ್ತೆಯಾಗಿದೆ. ಮುಲ್ಕಿ ನಿವಾಸಿ ಶರೀಫ್ ಮೃತಪಟ್ಟ ವ್ಯಕ್ತಿ.
ಇವರ ಆಟೋ ಬಾವಿಯ ಹತ್ತಿರ ನಿಲ್ಲಿಸಲಾಗಿದೆ. ಬಾವಿಯ ಬಳಿ ರಕ್ತದ ಕಲೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಪೊಲೀಸರು ಆಗಮಿಸಿದ್ದು ಪರಿಶೋಧನೆ ನಡೆಸಿದಾಗ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಬುದವಾರ ಬೆಳಗ್ಗಿನಿಂದ ಶರೀಫ್ ನಾಪತ್ತೆಯಾಗಿದ್ದರು. ಅಂದು 11 ಗಂಟೆಗೆ ಕಂಡವರಿದ್ದಾರೆ. ಇವರ ಸಂಬಂಧಿಕರು ಮೊಬೈಲಿಗೆ ಕರೆ ಮಾಡಿದ್ದರೂ ಅದು ಸ್ವಿಚ್ ಆಫ್ ಆಗಿತ್ತು. ಮೃತದೇಹವನ್ನು ಇಂದು (ಶುಕ್ರವಾರ) ಮೇಲಕೆತ್ತಿ ಅನಂತರ ಪೋಸ್ಟ್ ಮಾರ್ಟಂ ನಡೆಸಲಾಗುವುದು. ಮುಲ್ಕಿ ನಿವಾಸಿ ಈ ಪ್ರದೇಶಕ್ಕೆ ಬರಲು ಕಾರಣವೇನು ಎಂದು ತನಿಖೆಯಲ್ಲಿ ತಿಳಿಯಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.