Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮುರತ್ತನೆ ಬಳಿಯ ಬಟ್ಟಿಪದವು ನ "ಎಂ. ಎ. ಫ್ರೇಮ್ ವರ್ಕ್ಸ್" ಪ್ಲೈವುಡ್ ಮಿಲ್ಲಿನಲ್ಲಿ ಅಗ್ನಿ ಅವಘಡ.

ಮುರತ್ತನೆ ಬಳಿಯ ಬಟ್ಟಿಪದವು ನ "ಎಂ. ಎ. ಫ್ರೇಮ್ ವರ್ಕ್ಸ್" ಪ್ಲೈವುಡ್ ಮಿಲ್ಲಿನಲ್ಲಿ ಅಗ್ನಿ ಅವಘಡ.
ಮಂಜೇಶ್ವರ: ಮೀಂಜ ಗ್ರಾಮ ಪಂಚಾಯತ್ ಗೊಳಪಟ್ಟ ಮುರತ್ತನೆ ಬಳಿಯ ಬಟ್ಟಿಪದವು ಎಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ. ಎ. ಫ್ರೇಮ್ ವರ್ಕ್ಸ್ ಎಂಬ ಪ್ಲೈವುಡ್ ಮಿಲ್ಲಿನಲ್ಲಿ ನಿನ್ನೆ ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಪ್ಲೈವುಡ್ ನ ಹುಡಿ ಶೇಖರಣೆಯಾಗುವ ಘಟಕದಲ್ಲಿ "ಡಸ್ಟ್ ಕಲೆಕ್ಟರ್" ಇದ್ದು, ಇಲ್ಲಿಗೆ ಬೆಂಕಿ ತಗುಲಿ ಸಂಪೂರ್ಣ ಹುರಿದು ನಾಶಗೊಂಡಿದೆ.
ಈ ವೇಳೆ ಕಾರ್ಮಿಕರಿದ್ದು, ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಸಾಧ್ಯವಾಗದ ಕಾರಣ ಕೂಡಲೇ ಉಪ್ಪಳದ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಎರಡು ವಾಹನಗಳಲ್ಲಿ ಆಗಮಿಸಿದ ಅಗ್ನಿಶಾಮಕ ದಳದವರು ಊರವರ ನೆರವಿನೊಂದಿಗೆ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿ, ಶಮನಗೊಳಿಸಿದರು. ಮಂಗಳೂರು ನಿವಾಸಿ ಎ.ಕೆ ನಿಯಾಜ್ ರ ಮಾಲಕತ್ವದಲ್ಲಿರುವ ಪ್ಲೈವುಡ್ ಫ್ಯಾಕ್ಟರಿ ಕಳೆದ 25 ವರ್ಷಗಳಿಂದ ಬಟ್ಟಿಪದವಿನಲ್ಲಿ ಕಾರ್ಯಾಚರಿಸುತ್ತಿದ್ದು, ಹೊರ ರಾಜ್ಯದ ಸುಮಾರು 50 ಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದಾರೆ. ನಿನ್ನೆ ರಾತ್ರಿ 8 ಗಂಟೆಗೆ ಕೆಲಸ ಮುಗಿಸಲು ಅನುವಾಗುತ್ತಿದ್ದಂತೆ 7.30 ರ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಓರ್ವ ಕಾರ್ಮಿಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಕೂಡಲೇ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ. ಫ್ಯಾಕ್ಟರಿಗೆ ಹೊಂದಿಕೊಂಡಿರುವ ಡಸ್ಟ್ ಕಲೆಕ್ಟರ್ ನ ಶೆಡ್ ನಲ್ಲಿ ಹುಡಿ ಮಾಡುವ ಲಕ್ಷಾಂತರ ಮೌಲ್ಯದ ಯಂತ್ರಗಳಿದ್ದವು ಹಾಗೂ ಅದಕ್ಕೆ ಹೊಂದಿಕೊಂಡೇ ಹಲವು ಪೈಪುಗಳು, ಉಪಕರಣಗಳು ಇದ್ದವು ಇವೆಲ್ಲಾ ಸಂಪೂರ್ಣ ಉರಿದು ಭಷ್ಮವಾದುದರಿಂದ ಸುಮಾರು 8 ಲಕ್ಷ ರೂಪಾಯಿ ನಾಶ ನಷ್ಟ ಸಂಭವಿಸಿದೆ ಎಂದು ಫ್ಯಾಕ್ಟರಿ ಮಾಲಿಕ ನಿಯಾಜ್ ರವರು "ನಮ್ಮ ಮಂಜೇಶ್ವರ ನ್ಯೂಸ್" ಗೆ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.