Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಹೊಸಂಗಡಿ ಇನ್ಫೆಟ್ ಜೀಸಸ್ ಚರ್ಚ್ ನಲ್ಲಿ 11 ನೇ ವರ್ಷದ ವಾರ್ಷಿಕ ಹಬ್ಬಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ.

ಹೊಸಂಗಡಿ ಇನ್ಫೆಟ್ ಜೀಸಸ್ ಚರ್ಚ್ ನಲ್ಲಿ 11 ನೇ ವರ್ಷದ ವಾರ್ಷಿಕ ಹಬ್ಬಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ.
ಮಂಜೇಶ್ವರ: ಹೊಸಂಗಡಿ ಬಳಿಯ ದುರ್ಗಿಪಳ್ಳದಲ್ಲಿರುವ ಬಾಲ ಏಸುವಿನ ದೇವಾಲಯ (ಇನ್ಫೆನ್ಟ್ ಜೀಸಸ್ ಚರ್ಚ್) ದಲ್ಲಿ 11 ನೇ ವರ್ಷದ ವಾರ್ಷಿಕ ಹಬ್ಬಕ್ಕೆ ಚರ್ಚ್ ನ ಧರ್ಮಗುರು ಲೂಯಿಸ್ ಮಾರಿಯಾದಾಸ್ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಚರ್ಚ್ ನ ಆಡಳಿತ ಮಂಡಳಿಯ ಟ್ರಸ್ಟಿ ಪದಾಧಿಕಾರಿಗಳಾದ: ವಿಜಿ ಅತ್ತಿಕುಳಂ, ಸನ್ನಿ ವೆಲಿಯಪರಂಬಿಲ್, ಚರ್ಚಿನ ಕೋರ್ಡಿನೆಟರ್: ಥೋಮಸ್ ಪನಕಲ್, ಕಾರ್ಯಕ್ರಮ ಸಂಯೋಜಕರಾದ: ಜೋಯಿ ವೆಟಿಕಾ, ಪ್ರಧಾನ ಕಾರ್ಯದರ್ಶಿ ಜೋಯಿ ಥೋಮಸ್ ಕೆಲಕೆಡತ್, ಸೇರಿದಂತೆ ಚರ್ಚ್ ನ ಆಡಳಿತ ಸಮಿತಿ ಸದಸ್ಯರು ಭಾಗವಹಿಸಿದ್ದರು. ಬಳಿಕ
ಚರ್ಚ್ ನ ಧರ್ಮಗುರುಗಳಾದ ರೆವ. ಫಾ. ಲೂಯಿ ಮರಿಯಾದಾಸ್ ನೊವೇನಾ ಪ್ರಾರ್ಥನೆಯನ್ನು ನೆರೆವೇರಿಸಿದರು.
ತಲಚ್ಚೇರಿ ಮಹಾಧರ್ಮ ಪ್ರಾಂತ್ಯದ ವೈಸ್ ಚಾನ್ಸಲರ್, ರೆವ. ಫಾ. ಸುಬಿನ್ ರಾತ್ತಪಳ್ಳಿ ಪವಿತ್ರ ಬಲಿ ಪೂಜೆಯನ್ನು ನೆರೆವೇರಿಸಿದರು. ಇದೇ ವೇಳೆ
ಸಂಡೆ ಸ್ಕೂಲ್, ಸಂಯುಕ್ತ ಭಕ್ತ ಸಂಘಟನೆಯ ವಾರ್ಷಿಕೋತ್ಸವ ನಡೆಯಿತು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೇರೋ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ವಿವಿಧ ನೃತ್ಯ ವೈಭವ, ಕಲಾ ಪ್ರಕಾರಗಳು ನಡೆಯಿತು.
ವಾರ್ಷಿಕ ಉತ್ಸವದಂಗವಾಗಿ ವಿದ್ಯುತ್ ದೀಪಗಳ ಅಲಂಕಾರದಿಂದ ಚರ್ಚ್ ಕಂಗೊಳಿಸುತ್ತಿತ್ತು. ಚಿತ್ರಗಳು: ದೀಪಕ್ ರಾಜ್ ಉಪ್ಪಳ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.