ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮಂಜೇಶ್ವರದ ಶಾರದಾ ಆರ್ಟ್ಸ್ ಕಲಾವಿದರು. ಸಮಾರಂಭದ ಆಮಂತ್ರಣ ಬಿಡುಗಡೆ ನಾಳೆ.
ಡಿಸೆಂಬರ್ 01, 2024
0
ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮಂಜೇಶ್ವರದ ಶಾರದಾ ಆರ್ಟ್ಸ್ ಕಲಾವಿದರು. ಸಮಾರಂಭದ ಆಮಂತ್ರಣ ಬಿಡುಗಡೆ ನಾಳೆ.
ಮಂಜೇಶ್ವರ: ಶಾರದಾ ಆರ್ಟ್ಸ್ ಕಲಾವಿದರು (ರಿ.) ಮಂಜೇಶ್ವರ ತಂಡಕ್ಕೆ 25 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ಈ ಹುಟ್ಟುಹಬ್ಬವನ್ನು ಅವಿಸ್ಮರಣೀಯವಾಗಿ ಆಚರಿಸಲು ಪರಮಪೂಜ್ಯ ಸ್ವಾಮೀಜಿಗಳವರ, ಗುರುಹಿರಿಯರ, ಕಲಾ ಸಂಘಟಕರ, ಕಲಾಪೋಷಕರ, ಕಲಾಭಿಮಾನಿಗಳ ಮತ್ತು ಸಂಘ ಸಂಸ್ಥೆಗಳ ಸಹಕಾರದೊದಿಗೆ 2025 ಜನವರಿ ತಿಂಗಳ 17,18,19 ರಂದು ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ವಠಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಗಳ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ನಾಳೆ (03/12/2024 ಮಂಗಳವಾರದಂದು) ಸಂಜೆ 5 ಗಂಟೆಗೆ ಸರಿಯಾಗಿ ಉದ್ಯಾವರ ಮಾಡದ ಸಾಂಸ್ಕೃತಿಕ ವೇದಿಕೆಯಲ್ಲಿ ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಿರುವರು. ಈ ವೇಳೆ ನಡೆಯುವ ಸಮಾರಂಭದಲ್ಲಿ ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ಆಶೀರ್ವಚನ ನೀಡಲಿರುವರು,
ಶ್ರೀ ಕೃಷ್ಣ ಭಟ್ ಪವಿತ್ರಪಾಣಿ ಕಣ್ವತೀರ್ಥ, ಶ್ರೀ ಬೀರು ಚೌಟರು, ಶ್ರೀ ರಾಜ ಬೆಳ್ಚಪಾಡರು, ಶ್ರೀ ತಿಮಿರಿ ಬೆಳ್ಚಪಾಡರು,ಶ್ರೀ ಮಂಜು ಬೆಳ್ಚಪಾಡರು, ಶ್ರೀ ಅರಸು ದೈವಗಳ ಕ್ಷೇತ್ರ ಮಾಡ ದಿವ್ಯ ಉಪಸ್ಥಿತರಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ಳಿಹಬ್ಬ ಸಂಭ್ರಮ ಸಮಿತಿ ಅಧ್ಯಕ್ಷ ಸಂಪತ್ ಸುವರ್ಣ ಬೆಳ್ತಂಗಡಿ ವಹಿಸಲಿರುವರು.
ಮುಖ್ಯ ಅಥಿತಿಗಳಾಗಿ ಜಯಂತ್ ನಡುಬೈಲು, ಭುವನೇಶ್ ಪಚ್ಚಿನಡ್ಕ, ಅನಿಲ್ ಪಂಡಿತ್ ಬ್ರಹ್ಮರಕೂಟ್ಲು, ಮೋಹನ್ ಶೆಟ್ಟಿ ತೂಮಿನಾಡು, ಕಿರಣ್ ಶೆಟ್ಟಿ ಮಾಡ, ದಯಾಕರ್ ಮಾಡ, ಡಾ.ಮಮತಾ ಶೆಟ್ಟಿ (ಅಭಿಮತ ಟಿವಿ) ಡಾ. ಅರುಣ್ ಉಳ್ಳಾಲ್, ಹರೀಶ್ ಶೆಟ್ಟಿ ಮಾಡ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಶಾರದಾ ಆರ್ಟ್ಸ್ ಕಲಾವಿದರು ಸಂಸ್ಥೆಯ ಕೃಷ್ಣ ಜಿ. ಮಂಜೇಶ್ವರ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

