Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ ಜಮ್ಮದಮನೆಯ ಚಿಂತನ್ ಎಸ್. ಶೆಟ್ಟಿಗೆ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ 5 ಚಿನ್ನದ ಪದಕ.

ಮಂಜೇಶ್ವರ ಜಮ್ಮದಮನೆಯ ಚಿಂತನ್ ಎಸ್. ಶೆಟ್ಟಿಗೆ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ 5 ಚಿನ್ನದ ಪದಕ.
ಮಂಂಜೇಶ್ವರ: ಗುಜರಾತ್ ನ ರಾಜ್ ಕೋಟ್ ನಲ್ಲಿ ನವೆಂಬರ್ 21 ರಿಂದ ಪ್ರಾರಂಭಗೊಂಡು 30 ರ ತನಕ ನಡೆದ 68 ನೇ ಎಸ್.ಜಿ. ಎಫ್.ಐ (ಸ್ಕೂಲ್ ಗೇಮ್ಸ್) ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಅಂಡರ್ 19 ಬಾಲಕರ ವಿಭಾಗದ 50 ಮತ್ತು 100 ಮೀಟರ್ ಬಟರ್ ಫ್ಲೈ, 50 ಮೀಟರ್ ಫ್ರಿಸ್ಟೈಲ್, 4 x 100 ಫ್ರಿಸ್ಟೈಲ್ ರಿಲೇ, 4 x 100 ಮಿಡ್ಲೆ ರಿಲೇ ಈಜು ಸ್ಪರ್ಧೆಯಲ್ಲಿ ಮಂಗಳೂರಿನಿಂದ ಮಂಗಳಾ ಈಜು ಕ್ಲಬ್ ನ ಸದಸ್ಯ, ಮಂಜೇಶ್ವರ ಹೊಸಬೆಟ್ಟುವಿನ ಜಮ್ಮದಮನೆ ನಿವಾಸಿ ಚಿಂತನ್ ಎಸ್. ಶೆಟ್ಟಿ ಇವರು 5 ಚಿನ್ನದ ಪದಕಗಳನ್ನುಗಳಿಸಿ ರಾಜ್ಯ ಹಾಗೂ ಉಭಯ ಜಿಲ್ಲೆಗಳಿಗೆ ಕೀರ್ತಿಯನ್ನು ತಂದಿರುತ್ತಾರೆ. ಇವರು ಮಂಗಳೂರಿನ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುತ್ತಾರೆ. ಇವರು ಮಂಗಳ ಈಜು ಕ್ಲಬ್ಬಿನ ಹಿರಿಯ ಈಜು ತರಬೇತುದಾರರಾದ ಎಂ. ಶಿವಾನಂದ ಗಟ್ಟಿ ಇವರ ಮಾರ್ಗದರ್ಶನದಲ್ಲಿ ಮುಖ್ಯ ತರಬೇತುದಾರರಾದ ಶಿಶಿರ್ ಎಸ್. ಗಟ್ಟಿ (ಎನ್.ಐ.ಎಸ್), ತರಬೇತುದಾರರಾದ ಕೀರ್ತನ್ ಎಸ್. ಶೆಟ್ಟಿ, ಚೇತನ್ ಎಸ್. ಶೆಟ್ಟಿ, ರಾಜೇಶ್ ಖಾರ್ವಿ ಬೆಂಗ್ರೆ ಹಾಗೂ ಪ್ರಥಮ್ ಕುಂದರ್ ಇವರಿಂದ ಎಮ್ಮೆಕೆರೆ ಸ್ಮಾರ್ಟ್ ಸಿ.ಟಿ ಅಂತರಾಷ್ಟ್ರೀಯ ಈಜು ಕೊಳ ಹಾಗೂ ಮಂಗಳೂರು ಮಹಾನಗರಪಾಲಿಕೆ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪ್ರಸ್ತುತ ಬೆಂಗಳೂರು ಲಕ್ಷ್ಮಿ ಸ್ಪೋಟ್ಸ್೯ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಚಿಂತನ್ ಶೆಟ್ಟಿ ಅವರು ಮಂಜೇಶ್ವರ ಹೊಸಬೆಟ್ಟುವಿನ ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿ ಶಶಿಧರ ಶೆಟ್ಟಿ ಮತ್ತು ಹರಿಣಾಕ್ಷಿ ಎಸ್. ಶೆಟ್ಟಿ ದಂಪತಿಗಳ ಪುತ್ರಭಾಗಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.