ವಯನಾಡು ಸಂತ್ರಸ್ತರಿಗೆ ಶೇಖರಿಸಿದ್ದ ಆಹಾರ ಕಿಟ್ ಗಳ ಮಾರಾಟ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿರುವ ಅಪಪ್ರಚಾರ ಸುಳ್ಳು; ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧಿಕೃತರಿಂದ ಸ್ಪಷ್ಟನೆ.
ಡಿಸೆಂಬರ್ 30, 2024
0
ವಯನಾಡು ಸಂತ್ರಸ್ತರಿಗೆ ಶೇಖರಿಸಿದ್ದ ಆಹಾರ ಕಿಟ್ ಗಳ ಮಾರಾಟ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿರುವ ಅಪಪ್ರಚಾರ ಸುಳ್ಳು; ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧಿಕೃತರಿಂದ ಸ್ಪಷ್ಟನೆ.
ಕುಂಬಳೆ: ವಯನಾಡು ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗೆ ಹಂಚಲು ಮಂಗಲ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಸಂಗ್ರಹಿಸಿದ್ದ ಆಹಾರ ವಸ್ತುಗಳ ಕಿಟ್ ಅನ್ನು ಮಾರಾಟ ಮಾಡಲಾಗಿದೆ ಎಂಬ ವಾರ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವದಂತಿ ಸುಳ್ಳಾಗಿದೆ,ಮತ್ತು ಸಂಪೂರ್ಣವಾಗಿ ಆಧಾರ ರಹಿತವಾಗಿದೆ ಎಂದು ಪಂಚಾಯತ್ ಆಡಳಿತ ಸಮಿತಿ ಸ್ಪಷ್ಟನೆ ನೀಡಿದೆ. ನ.24 ರಂದು ಪಂಚಾಯತ್ ಸದಸ್ಯರಾದ ಮಜೀದ್ ಪಚ್ಚಂಬಳ, ಅಬ್ದುಲ್ ರಹ್ಮಾನ್ ನೇತೃತ್ವದ ತಂಡ ವಯನಾಡಿನ ಮೇಪ್ಪಾಡಿಗೆ ತೆರಳಿದ್ದು, ಸಾರ್ವಜನಿಕರಿಂದ ಸಂಗ್ರಹಿಸಿದ್ದ ಆಹಾರ ಸಾಮಗ್ರಿಗಳು ಮತ್ತು ಬಟ್ಟೆ ಬರೆಗಳನ್ನು ಮೇಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಬೀನಾ ನೌಫಾಲ್ ಕುಂಬಳೆಯಲ್ಲಿ ಇಂದು ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ . ಉಪಾಧ್ಯಕ್ಷ ಯೂಸುಫ್ ಹೇರೂರು, ಸ್ಥಾಯೀ ಸಮಿತಿ ಅಧ್ಯಕ್ಷ ಇರ್ಫಾನ್ ಇಕ್ಬಾಲ್, ಪಂಚಾಯತ್ ಸದಸ್ಯ ಮಜೀದ್ ಪಚ್ಚಂಬಳ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.


