ಮಂಜೇಶ್ವರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದ "ಮೆಡ್ ಲ್ಯಾಬ್" ತಪಾಸಣಾ ಸಂಸ್ಥೆಯ ಉದ್ಘಾಟನೆ.
ಡಿಸೆಂಬರ್ 18, 2024
0
ಮಂಜೇಶ್ವರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದ "ಮೆಡ್ ಲ್ಯಾಬ್" ತಪಾಸಣಾ ಸಂಸ್ಥೆಯ ಉದ್ಘಾಟನೆ.
ಮಂಜೇಶ್ವರ: ಮಂಜೇಶ್ವರ ಒಳಪೇಟೆಯ ಹೃದಯಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಮೂಲಭೂತ ಸೌಕರ್ಯಗಳೊಂದಿಗೆ ಮೆಡ್ ಲ್ಯಾಬ್ ಸಂಸ್ಥೆಯ ಉದ್ಘಾಟನೆ ಇಂದು ಬೆಳಗ್ಗೆ ನಡೆಯಿತು. ಸಯ್ಯದ್ ಮುಕ್ತಾರ್ ತಂಗಲ್ ದುವಾ ಪ್ರಾರ್ಥನೆ ಮಾಡಿ ಸಂಸ್ಥೆಗೆ ಶುಭ ಹಾರೈಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ ಆಶ್ರಫ್ ರಿಬ್ಬನ್ ಕತ್ತರಿಸುವ ಮೂಲಕ ಲ್ಯಾಬ್ ನ ಕಚೇರಿಯನ್ನು ಉದ್ಘಾಟಿಸಿ, ರಕ್ತ ಪರೀಕ್ಷೆ ಮಾಡಿಸುವ ಮೂಲಕ ಸಂಸ್ಥೆಯ ಕಾರ್ಯಗಳಿಗೆ ಚಾಲನೆ ನೀಡಿದರು. ಈ ವೇಳೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಕೆ.ಪಾವೂರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಕ್, ಪತ್ರಕರ್ತ ಆರಿಫ್ ಮಚ್ಚಂಪ್ಪಾಡಿ, ಸಮಾಜ ಸೇವಕ ಅಜೀಜ್ ಕಲ್ಲೂರು ಶುಭಾಸಂಶನೆಗೈದರರು. ಸಂಸ್ಥೆಯ ಮಾಲಕರಾದ ಶ್ರೀಮತಿ ಸಾನ ರಫೀಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮೆಡ್ ಲ್ಯಾಬ್ ನಲ್ಲಿ ರಕ್ತ, ಕಫ, ಮೂತ್ರ, ದೇಹದ ಎಲ್ಲಾ ಭಾಗಗಳ ಪರಿಶೋಧನೆ ಮಾಡಲಾಗುವುದು.
ಶುಭಾರಂಭದ ನಿಮಿತ್ತ ಒಂದು ವಾರಗಳ ಕಾಲ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುವುದು







