ಎಡನೀರು ಮಠಾಧೀಶರ ಕಾರಿನ ಮೇಲೆ ದಾಳಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ. ಹಿಂದೂ ಮುಖಂಡರಿಂದ ಖಂಡನೆ.
ನವೆಂಬರ್ 05, 2024
0
ಎಡನೀರು ಮಠಾಧೀಶರ ಕಾರಿನ ಮೇಲೆ ದಾಳಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ. ಹಿಂದೂ ಮುಖಂಡರಿಂದ ಖಂಡನೆ.
ಕಾಸರಗೋಡು: ಬೋವಿಕ್ಕಾನ- ಇರಿಯಣ್ಣಿ ರಾಜ್ಯ ಹೆದ್ದಾರಿಯಲ್ಲಿ ಎಡನೀರು ಮಠಾಧೀಶರಾದ ಶ್ರೀಮದ್ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಸಂಚರಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಹಾನಿ ಉಂಟುಮಾಡಿದ ಘಟನೆ ಈಗ ಬಾರಿ ಪ್ರತಿಭಟನೆಗೆ ಕಾರಣವಾಗಿದೆ. ಹಿಂದೂಪರ ಸಂಘಟನೆಗಳು ದೃಷ್ಕೃತ್ಯ ಮಾಡಿದವರ ವಿರುದ್ಧ ಪ್ರತಿಭಟಿಸುತ್ತಿದ್ದು, ಹಿಂದೂ ಮುಖಂಡರು ಖಂಡನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮೊನ್ನೆ ರವಿವಾರ ಅಪರಾಹ್ನ ಕಾರ್ಯಕ್ರಮ ಮುಗಿಸಿಕೊಂಡು ಸ್ವಾಮೀಜಿಯವರು ತಮ್ಮ ಕಾರಿನಲ್ಲಿ ಇರಿಯಣ್ಣಿ ರಸ್ತೆ ಮೂಲಕ ಎಡನೀರು ಮಠದತ್ತ ಬರುತ್ತಿದ್ದ ದಾರಿ ಮಧ್ಯೆ ಯುವಕನೋರ್ವ ಆ ಕಾರನ್ನು ತಡೆದು ನಿಲ್ಲಿಸಿ, ಅದರ ಗಾಜಿಗೆ ಹಾನಿಗೊಳಿ ಸಿದ್ದಾನೆ. ಬೋವಿಕ್ಕಾನ- ಇರಿಯಣ್ಣಿ ರಸ್ತೆಯಲ್ಲಿ ರಾಜ್ಯ ಹೆದ್ದಾರಿ ಸೈಕ್ಲಿಂಗ್ ಸ್ಪರ್ಧೆ ನಡೆಯುತ್ತಿದ್ದ ವೇಳೆ ಆ ರಸ್ತೆಯಲ್ಲಿ ವಾಹನಗಳಿಗೆ ನಿಯಂತ್ರಣ ಹೇರಿತ್ತಾದರೂ, ಸ್ವಾಮೀಜಿಯವರ ಕಾರನ್ನು ಆ ಮೂಲಕ ಸಾಗಲು ಅನುಮತಿ ನೀಡಲಾಗಿತ್ತು. ಅದರಂತೆ ಕಾರು ಬೋವಿಕ್ಕಾನ ಬಳಿ ತಲುಪಿದಾಗ ಯುವಕನೋರ್ವ ಆ ಕಾರನ್ನು ತಡೆದು ನಿಲ್ಲಿಸಿ ಅದರ ಗಾಜಿಗೆ ಬಡಿದು ಹಾನಿಗೊಳಿಸಿದ್ದಾನೆ. ಅದು ಈಗ ಭಾರೀ ಪ್ರತಿಭಟನೆಗೂ ದಾರಿ ಮಾಡಿಕೊಟ್ಟಿದೆ. ಈ ಮಧ್ಯೆ ಸೈಕ್ಲಿಂಗ್ ಸ್ಪರ್ಧೆ ಏರ್ಪಡಿಸಿದ ಸಂಘದ ಸಂಘಟನೆಯ ಪದಾಧಿಕಾರಿಗಳು ಎಡನೀರು ಮಠಕ್ಕೆ ಸಂಜೆ ಬಂದು ಸ್ವಾಮೀಜಿಯವರಲ್ಲಿ ಕ್ಷಮೆಯಾಚಿಸಿದ್ದರು. ಬಳಿಕ ಸರ್ವಪಕ್ಷಗಳ ಮುಖಂಡರು ಎಡನೀರಿನಲ್ಲಿ ಸ್ವಾಮೀಜಿಯವರ ಕಾರಿನ ಮೇಲೆ ನಡೆಸಿದ ಆಕ್ರಮಣ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಎಡನೀರು ಮಠದ ಸ್ವಾಮೀಜಿಯವರ ಕಾರಿನ ಮೇಲೆ ದಾಳಿ ಖಂಡನೀಯ: ಅಶ್ವಿನಿ ಎಂ.ಎಲ್.
ಕಾಸರಗೋಡು: ಬೋವಿಕ್ಕಾನ - ಇರಿಯಣ್ಣಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಎಡನೀರು ಮಠದ ಶ್ರೀಮದ್ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಸಂಚರಿಸುತ್ತಿದ್ದ ಕಾರಿನ ಮೇಲೆ ನಡೆದ ದಾಳಿ ಖಂಡನೀಯವಾಗಿದ್ದು, ಈ ಭಾಗದ ಶಾಂತಿಯುತ ವಾತಾವರಣಕ್ಕೆ ಭಂಗ ತರುವಂತಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್. ಆರೋಪಿಸಿದ್ದಾರೆ.
ಸುಮಾರು 400 ವರ್ಷಗಳ ಪರಂಪರೆಯನ್ನು ಹೊಂದಿರುವ ಎಡನೀರು ಮಠವು ರಾಜಕೀಯ, ಧಾರ್ಮಿಕ ಅಥವಾ ಸಮುದಾಯದ ವ್ಯತ್ಯಾಸಗಳನ್ನು ಲೆಕ್ಕಿಸದೆ ಎಲ್ಲರಿಗೂ ಸ್ಥಾನವನ್ನು ಕಲ್ಪಿಸಿಕೊಟ್ಟ ಧಾರ್ಮಿಕ ಆರಾಧನಾ ಕ್ಷೇತ್ರಗಳಲ್ಲಿ ಒಂದಾಗಿದೆ. ಕಲೆ, ಸಂಸ್ಕೃತಿ ಮತ್ತು ಶಿಕ್ಷಣಕ್ಕೆ ಅಪಾರವಾಗಿ ಒತ್ತು ನೀಡಿ ಸಾಮಾಜಿಕ ವಲಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ಪರಂಪರೆಯ ಧಾರ್ಮಿಕ ಕೇಂದ್ರವಾಗಿ ಬೆಳೆದಿದೆ. ಈ ಮಠವು ದೇಶದ ಅತ್ಯಂತ ಗಮನಾರ್ಹವಾದ ಕಾನೂನು ಹೋರಾಟಗಳಲ್ಲಿ ಒಂದನ್ನು ಮುನ್ನಡೆಸಲು ಹೆಸರುವಾಸಿಯಾಗಿದೆ. ಆದ್ದರಿಂದ ಈ ಪ್ರತಿಷ್ಠಿತ ಸಂಸ್ಥೆಯ ಮುಖ್ಯಸ್ಥರಾದ ಸ್ವಾಮೀಜಿಯವರು ಹಾಗೂ ಅವರ ಕಾರಿನ ಮೇಲೆ ನಡೆಸಿದ ದಾಳಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸುವಂತೆ ಎಂ.ಎಲ್ ಅಶ್ವಿನಿ ಅವರು ಆಗ್ರಹಿಸಿದ್ದಾರೆ.
ಮಂಜೇಶ್ವರ: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಂಚರಿಸುತಿದ್ದ ವಾಹನಕ್ಕೆ ಕಿಡಿಗೇಡಿಗಳು ತಡೆಯೊಡ್ಡಿ ಕೃತ್ಯ ಎಸಗಿದ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಕಾಸರಗೋಡು ಜಿಲ್ಲಾ ಸಮಿತಿ ಬಲವಾಗಿ ಖಂಡಿಸಿದೆ. ಪೂಜ್ಯರಾದ ಸಾಧು ಸಂತರನ್ನು ಗುರಿಯಾಗಿಸಿಕೊಂಡು ನಡೆಸಿದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷದ್ ಕೇರಳ ಕಣ್ಣೂರು ವಿಭಾಗ ಸೇವಾ ಪ್ರಮುಖ ಸುರೇಶ್ ಶೆಟ್ಟಿ ಪರಂಕಿಲ ಕೇರಳ ಸರಕಾರಕ್ಕೆ ಆಗ್ರಹಿಸಿದ್ದಾರೆ. ಅವರಿಗೆ ತಕ್ಷಣದಿಂದಲೇ ಗನ್ ಮ್ಯಾನ್ ಭದ್ರತೆ ಮತ್ತು ಪೊಲೀಸ್ ರಕ್ಷಣೆ ನೀಡಬೇಕು ಎಂದು ಅವರು ತಮ್ಮ ಲಿಖಿತ ಮನವಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ.ಕಾಸರಗೋಡು: ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಛಿದಾನಂದ ಭಾರತೀ ತೀರ್ಥ ಸ್ವಾಮೀಜಿಗಳು ಸಂಚರಿಸುತ್ತಿದ್ದ ಕಾರನ್ನು ಸಮಾಜಘಾತುಕ ಶಕ್ತಿಗಳು ಅಡ್ಡಗಟ್ಟಿ ಹಾನಿಗೊಳಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದ್ದಾರೆ.
ಸರಿಸುಮಾರು ನಾಲ್ಕು ನೂರು ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಎಡನೀರು ಮಠದ ಪೀಠಾಧಿಪತಿಯಾಗಿರುವ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳನ್ನು ಪೊಲೀಸ್ ಅಧಿಕೃತರು ಕೂಡಲೇ ಬಂಧಿಸಿ ಇಂಥಹ ವಿಕೃತಿ ಮನಸ್ಥಿತಿಗಳನ್ನು ಮಟ್ಟ ಹಾಕುವ ಕೆಲಸವನ್ನು ಮಾಡಬೇಕು. ಶಾಂತಿ-ಸಾಮರಸ್ಯದ ಮೂಲಕ ಹಿಂದೂ ಸಮಾಜದ ಪರ ಕೆಲಸ ಮಾಡುತ್ತಿರುವ ಸ್ವಾಮೀಜಿ ಮೇಲೆಯೇ ಕಿಡಿಗೇಡಿಗಳು ನಡುರಸ್ತೆಯಲ್ಲೇ ಈ ರೀತಿ ಕಾನೂನು ಕೈಗೆತ್ತಿಕೊಂಡು ಹಲ್ಲೆಗೆ ಮುಂದಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ಹೇಳಿಕೆಯನ್ನು ನೀಡಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಿಂದ ಹಿಂದಿರುಗುವಾಗ ಕಾಸರಗೋಡಿನ ಬೋವಿಕ್ಕಾನ–ಇರಿಯಣ್ಣಿ ಮಾರ್ಗ ಮಧ್ಯೆ ಸ್ವಾಮೀಜಿಗಳು ಪ್ರಯಾಣಿಸುತ್ತಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದು ವಾಹನದ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿರುವುದು ಅಕ್ಷಮ್ಯ. ಲಕ್ಷಾಂತರ ಹಿಂದೂಗಳು ಭಕ್ತಿಯಿಂದ ಆರಾಧಿಸುವ ಹಾಗೂ ಹಿಂದೂ ಸಮಾಜದ ಆಧರಣೀಯರು, ಮಾರ್ಗದರ್ಶಕರಾಗಿರುವ, ಆಧ್ಯಾತ್ಮಿಕ ಗುರು ಎಡನೀರು ಸಂಸ್ಥಾನದ ಶ್ರೀಗಳ ಮೇಲೆ ನಡೆದಿರುವ ಈ ದಾಳಿಯು ಹಿಂದೂ ಸಮುದಾಯದವರ ಮೇಲೆ ನಡೆಸಿರುವ ದಾಳಿಯಾಗಿದೆ. ಇಂಥಹ ಜಿಹಾದಿ ಮನಸ್ಥಿತಿಯ ಘಟನೆಗಳನ್ನು ಇಡೀ ಹಿಂದೂ ಸಮಾಜವು ಒಟ್ಟಾಗಿ ಖಂಡಿಸಬೇಕು ಎಂಬುದಾಗಿ ನೇತಾರರು ಅಭಿಪ್ರಾಯಪಟ್ಟರು.
ಹೀಗಿರುವಾಗ, ಪೊಲೀಸ್ಅಧಿಕಾರಿಗಳು ಸ್ವಾಮೀಜಿ ಮೇಲಿನ ಹಲ್ಲೆ ಯತ್ನ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಎಡನೀರು ಶ್ರೀಗಳಿಗೆ ಸೂಕ್ತ ಭದ್ರತೆಯನ್ನು ಪೊಲೀಸ್ ಕಡೆಯಿಂದ ಕಲ್ಪಿಸಬೇಕೆಂದು ಹೇಳಿಕೆ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸತ್ಸಂಗ ಸಹ ಸಂಯೋಜಕರಾದ ಶ್ರೀ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಗೋಪಾಲ ಶೆಟ್ಟಿ ಅರಿಬೈಲು, ಜಿಲ್ಲಾ ಸಹ ಕಾರ್ಯದರ್ಶಿಗಳಾದ ಶ್ರೀ ಗಣೇಶ ಮಾವಿನಕಟ್ಟೆ, ಶ್ರೀ ಸುರೇಶ ಬಾಬು ಕಾನತ್ತೂರ್, ಜಿಲ್ಲಾ ಧರ್ಮ ಪ್ರಸಾರ ಪ್ರಮುಖರಾದ ಶ್ರೀ ವಾಮನ ಆಚಾರ್ಯ ಬೋವಿಕಾನ, ಜಿಲ್ಲಾ ಧರ್ಮಾಚಾರ್ಯ ಪ್ರಮುಖರಾದ ಡಾ. ಜಯಪ್ರಕಾಶ್ ತೊಟ್ಟೆತೋಡಿ, ಕಾಸರಗೋಡು ಗ್ರಾಮಾಂತರ ಪ್ರಖಂಡ ಉಪಾಧ್ಯಕ್ಷರಾದ ಶ್ರೀ ಕೃಷ್ಣನ್ ಅಮ್ಮಂಗೋಡು ಮುಂತಾದ ನೇತಾರುಗಳು ಸ್ವಾಮೀಜಿಗಳನ್ನು ಭೇಟಿಯನ್ನಿತ್ತು ಬೆಂಬಲ ಸೂಚಿಸಿದರು.
ವಿಶ್ವ ಹಿಂದೂ ಪರಿಷತ್, ಬದಿಯಡ್ಕ ನೇತೃತ್ವದಲ್ಲಿ ಎಡನೀರು ಸಂಸ್ಥಾನದ ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿಯವರ ವಾಹನದ ಮೇಲಿನ ದುಷ್ಕರ್ಮಿಗಳ ದಾಳಿಯನ್ನು ವಿರೋಧಿಸಿ ಬುಧವಾರ 6/11/2024 ರಂದು ಸಂಜೆ 6 ಗಂಟೆಗೆ ಸರಿಯಾಗಿ ಬದಿಯಡ್ಕ ಗಣೇಶ ಮಂದಿರ ಪರಿಸರದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬಳಿಕ ಬೃಹತ್ ಹಿಂದೂ ಕಾರ್ಯಕರ್ತರನ್ನು ಉದ್ದೇಶಿಸಿ ವಿಶ್ವಹಿಂದೂ ಪರಿಷತ್ ನ ಹಿರಿಯ ಮುಖಂಡರು ಘಟನೆಯನ್ನು ಖಂಡಿಸಿ ಮಾತನಾಡಲಿರುವರು ಎಂದು ವಿಶ್ವ ಹಿಂದೂ ಪರಿಷತ್ ಬದಿಯಡ್ಕದ ಸಂಚಾಲಕ ಸುನಿಲ್ ಶೆಟ್ಟಿ ತಿಳಿಸಿದ್ದಾರೆ.
ಮಂಜೇಶ್ವರ: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ,
ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಂಚರಿಸುತ್ತಿದ್ದ ವೇಳೆ ಅವರ ವಾಹನಕ್ಕೆ ಕಿಡಿಗೇಡಿಗಳು, ಮತಾಂದರು ಹಾನಿಗೊಳಿಸಿರುವ ಘಟನೆಯನ್ನು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಆದರ್ಶ ಬಿ.ಎಂ ತೀವ್ರವಾಗಿ ಖಂಡಿಸಿದ್ದಾರೆ. ಪೂಜ್ಯ ಸಾಧು ಸಂತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ರೀತಿಯ ದುಷ್ಕೃತ್ಯವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೂಡಲೇ ಮತಾಂಧರನ್ನು ಬಂಧಿಸಬೇಕು ಹಾಗೂ ಶ್ರೀಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಗ್ರಹಿಸಿದೆ. ಕೇರಳದ ಎಡರಂಗ ಪೊಲೀಸ್ ಇಲಾಖೆಯನ್ನ ನಿಸ್ಕ್ರಿಯಗೊಳಿಸಿದೆ, ಜಿಲ್ಲೆಯ ಪೊಲೀಸ್ ಇಲಾಖೆ ನಾಲಾಯಕ್ ಎಂದು ಬಿಜೆಪಿ ಬನ್ನಿಸಿದೆ. ಹಿಂದೂ ದೇಗುಲಗಳು ಜಿಲ್ಲೆಯಲ್ಲಿ ನಿರಂತರವಾಗಿ ಕಳ್ಳತನವಾಗುತ್ತಿದೆ ಆದರೂ ಪೊಲೀಸ್ ಇಲಾಖೆ ಇದುವರೆಗೂ ಯಾರನ್ನೂ ಬಂಧಿಸಿ ಶಿಕ್ಷೆ ನೀಡಿಲ್ಲ. ಇಂತಹ ಅನಸ್ತೇಗೆ ಕಾರಣ ಪತ್ತೆ ಹಚ್ಚಬೇಕೆಂದು ಇಲಾಖೆಯನ್ನು ಬಲಿಷ್ಠಗೊಳಿಸುವಂತೆ ಬಿಜೆಪಿ ಅಗ್ರಹಿಸಿದೆ.







