ಮಂಜೇಶ್ವರ ಗೋವಿಂದ ಪೈ ಕಾಲೇಜ್ ಬಳಿ ಬೈಕ್ ಸ್ಕಿಡ್ ರಸ್ತೆಯಿಂದ ತೋಡಿಗೆ ಎಸೆಯಲ್ಪಟ್ಟ ಯುವಕ ಮೃತ್ಯು.
ಅಕ್ಟೋಬರ್ 07, 2024
0
ಮಂಜೇಶ್ವರ ಗೋವಿಂದ ಪೈ ಕಾಲೇಜ್ ಬಳಿ ಬೈಕ್ ಸ್ಕಿಡ್ ರಸ್ತೆಯಿಂದ ತೋಡಿಗೆ ಎಸೆಯಲ್ಪಟ್ಟ ಯುವಕ ಮೃತ್ಯು.
ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಕಾಲೇಜ್ ಹತ್ತಿರದ ಕಾಕುಂಜೆ ಹೋಟೆಲ್ ಬಳಿ ಶನಿವಾರ ರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಉದ್ಯವರ ಗುತ್ತು ನಿವಾಸಿ ಇಲೆಕ್ಟ್ರಿಷಿಯನ್ ರಾಜೇಶ್ (40) ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾಗಿದ್ದಾರೆ. ಮೊನ್ನೆ ರಾತ್ರಿ ಘಟನೆ ನಡೆದಿತ್ತು. ಉದ್ಯಾವರ ಗುತ್ತು ನಿವಾಸಿ ದಿ. ಸೋಮಯ್ಯ - ಸುಂದರಿ ದಂಪತಿಗಳ ಪುತ್ರನಾಗಿರುವ ರಾಜೇಶ್ ಕೆಲಸ ಮುಗಿಸಿ, ತನ್ನ ಬೈಕ್ ನಲ್ಲಿ ಮನೆಗೆ ತೆರಳುತ್ತಿರುವ ವೇಳೆ ಕಾಕುಂಜೆ ಹೋಟೆಲ್ ಬಳಿ ಬರುತ್ತಿದ್ದಂತೆ ಬೈಕ್ ಸ್ಕಿಡ್ ಆಗಿ ರಸ್ತೆ ಪಕ್ಕ ಇರುವ ತೋಡಿಗೆ ಬಿದ್ದರು. ಕೂಡಲೇ ಸ್ಥಳೀಯರು ಗಾಯಗೊಂಡ ರಾಜೇಶ್ ರನ್ನು ಹೊಸಂಗಡಿ ಹಾಗೂ ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾಗಿದ್ದಾರೆ. ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ನಿನ್ನೆ ಅಪರಾಹ್ನ ಮನೆಗೆ ತರಲಾಯಿತು. ಬಳಿಕ ಹೊಸಬೆಟ್ಟು ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಮೃತರು ತಾಯಿ, ಪತ್ನಿ ಜಯಶ್ರೀ, ಇಬ್ಬರು ಮಕ್ಕಳು, ಸಹೋದರ ಸಹೋದರಿಯರಾದ: ವಿಜಯ, ಪ್ರವೀಣ್, ವಿನೋದ್, ರವಿ, ಸಂದೀಪ್, ಬೇಬಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

