ಬೋಳದಪದವು ಶ್ರೀ ಬ್ರಹ್ಮ ಮುಗೇರ ಮತ್ತು ಕೊರಗಜ್ಜ ಗುಳಿಗ ದೈವಗಳ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 50,000 ರೂಪಾಯಿ ಅನುದಾನ.
ಅಕ್ಟೋಬರ್ 28, 2024
0
ಬೋಳದಪದವು ಶ್ರೀ ಬ್ರಹ್ಮ ಮುಗೇರ ಮತ್ತು ಕೊರಗಜ್ಜ ಗುಳಿಗ ದೈವಗಳ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 50,000 ರೂಪಾಯಿ ಅನುದಾನ.
ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ. )ಮಂಜೇಶ್ವರ ತಾಲೂಕು ಸುಂಕದಕಟ್ಟೆ ವಲಯದ ವರ್ಕಾಡಿ ಕಾರ್ಯಕ್ಷೇತ್ರದ ಶ್ರೀ ಬ್ರಹ್ಮ ಮುಗೇರ ಮತ್ತು ಕೊರಗಜ್ಜ ಗುಳಿಗ ದೈವಗಳ ಸಾನಿಧ್ಯ ಬೋಳದಪದವು ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಅನುದಾನದ ಮನವಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಲ್ಲಿಸಿದ್ದು, ಸಲ್ಲಿಸಿದ ಮನವಿಗೆ ಶ್ರೀ ಕ್ಷೇತ್ರದ ಸಮುದಾಯ ಅಭಿವೃದ್ಧಿಯಿಂದ ಪೂಜ್ಯ ಖಾವಂದರು ಪ್ರಸಾದ ರೂಪದಲ್ಲಿ ದೈವಸ್ಥಾನದ ಅಭಿವೃದ್ಧಿಗೆ ರೂ 50,000/- (ಐವತ್ತು ಸಾವಿರ) ರೂ ಮಂಜೂರು ಮಾಡಿದ್ದಾರೆ. ಮಂಜೂರಾದ ಅನುದಾನದ ಡಿ.ಡಿಯನ್ನು ಇಂದು ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಕಾಸರಗೋಡು ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರು ಗೋಪಾಲ ಶೆಟ್ಟಿ ಅರಿಬೈಲ್, ಮಂಜೇಶ್ವರ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಸುವರ್ಣ , ವರ್ಕಾಡಿ ಒಕ್ಕೂಟ ಅಧ್ಯಕ್ಷರು ಶ್ರೀಮತಿ ಪೂರ್ಣಿಮಾ ಬೇರಿಂಜರವರು ಸೇರಿ ಐವತ್ತು ಸಾವಿರ ರೂಪಾಯಿಯ ಡಿ.ಡಿಯನ್ನು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ರವಿಮುಡಿಮಾರ್, ಮುಗೆರ ಸೇವಾ ಸಮಿತಿ ಅಧ್ಯಕ್ಷರಾದ ಸೀನ ಬೋಳದಪವು ಜೀರ್ಣೋದ್ಧಾರ ಸಮಿತಿಯ ಸಲಹೆಗಾರರಾದ ಮೋಹನ್ ದಾಸ್, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಐಯ್ತಪ್ಪ ಶೆಟ್ಟಿ ದೇವಂದಪಡ್ಫು, ಉಪಾಧ್ಯಕ್ಷರಾದ ಮೋಹನ್ ದಾಸ್ ಶೆಟ್ಟಿ ನೆತ್ತಿಲ್ಲ ಸೇವಾ ಸಮಿತಿಯ ಕಾರ್ಯದರ್ಶಿ ಶಿವರಾಜ್ ಹಾಗೂ ಸಮಿತಿಯ ಪದಾಧಿಕಾರಿಗಳಿಗೆ ಡಿ. ಡಿ ಯನ್ನು ನೀಡಲಾಯಿತು. ಪತ್ರವನ್ನು ನೀಡಿದ ಜನಜಾಗೃತಿ ವೇದಿಕೆ ಅಧ್ಯಕ್ಷರು ಹಾಗೂ ಸ್ಥಾಪಕ ಅಧ್ಯಕ್ಷರು ಕ್ಷೇತ್ರದಿಂದ ನಮ್ಮ ಕಾಸರಗೋಡು ಭಾಗಕ್ಕೆ ದೇವಸ್ಥಾನ ಇತರೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನಗಳನ್ನು ಪೂಜ್ಯ ಖಾವಂದರು ನೀಡುತ್ತಿದ್ದಾರೆ ಇದೆಲ್ಲ ನಮಗೆ ತುಂಬಾ ಸಂತೋಷದ ವಿಷಯ ನಾವು ಪೂಜ್ಯರಿಗೆ ಋಣಿಯಾಗಿರಬೇಕು ಎಂದು ಶುಭಾಶಯವನ್ನು ನೀಡಿದರು ಮತ್ತು ಯೋಜನೆಯ ಬಗ್ಗೆ ಹಿತನುಡಿಗಳನ್ನು ನುಡಿದರು ತಾಲೂಕಿನ ಯೋಜನಾಧಿಕಾರಿಯವರು ಯೋಜನೆಯ ಕಾರ್ಯವೈಖರಿಯ ಬಗ್ಗೆ ಕ್ಷೇತ್ರದಿಂದ ನೀಡುವ ಅನುದಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಡಿ. ಡಿ ಯನ್ನು ಪಡೆದುಕೊಂಡ ಪದಾಧಿಕಾರಿಗಳು ಧರ್ಮಸ್ಥಳ ಕ್ಷೇತ್ರದಿಂದ ನೀಡಿದ ಈ ಅನುದಾನ ನಮಗೆ ತುಂಬಾ ಸಂತೋಷವಾಗಿದೆ ಎಂದು ಕ್ಷೇತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಕೃಷ್ಣಪ್ಪ, ಸೇವಾಪ್ರತಿನಿಧಿ ಮಲ್ಲಿಕಾ, ಒಕ್ಕೂಟದ ಜೊತೆ ಕಾರ್ಯದರ್ಶಿಯಾದವ, ಊರಿನ ಸದಸ್ಯರು ಗಣ್ಯರು ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ, ರವಿ ಮುಡಿಮಾರ್ ನಿರೂಪಿಸಿ, ಸ್ವಾಗತಿಸಿ, ಧನ್ಯವಾದ ನೀಡಿದರು.



