Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ವರ್ಕಾಡಿ ಗ್ರಾಮ ಪಂಚಾಯತ್ ದಾರಿದೀಪ ದುರಸ್ತಿಗೊಳಿಸಬೇಕು, ಕೃಷಿಕರ ಸವಲತ್ತುಗಳನ್ನು ಕೂಡಲೇ ನೀಡಬೇಕು - ಮುಸ್ಲಿಂ ಲೀಗ್.

ವರ್ಕಾಡಿ ಗ್ರಾಮ ಪಂಚಾಯತ್ ದಾರಿದೀಪ ದುರಸ್ತಿಗೊಳಿಸಬೇಕು, ಕೃಷಿಕರ ಸವಲತ್ತುಗಳನ್ನು ಕೂಡಲೇ ನೀಡಬೇಕು - ಮುಸ್ಲಿಂ ಲೀಗ್.
ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತ್ ನ ವಿವಿಧ ವಾರ್ಡ್ಗಳ ವಿವಿಧ ಪ್ರದೇಶಗಳಲ್ಲಿ ಸ್ಥಾಪಿಸಿದ ಬೀದಿ ದೀಪಗಳು, ಹೈಮಾಸ್ಟ್, ಲೋಮಾಸ್ಟ್ ಲೈಟ್ ಕೆಟ್ಟುಹೋಗಿ ತಿಂಗಳುಗಳೇ ಕಳೆಯಿತು. ಸಾರ್ವಜನಿಕರಿಗೆ ರಾತ್ರಿ ವೇಳೆಯಲ್ಲಿ ಕತ್ತಲೆ ಆವರಿಸಿದರಿಂದ ಬಾರಿ ತೊಂದರೆಗಳಾಗಿದೆ. ಇದರ ಬಗ್ಗೆ ವರ್ಕಾಡಿ ಗ್ರಾಮ ಪಂಚಾಯತ್ ಆಡಳಿತ ಸಮಿತಿಗೆ ಮನವಿ ನೀಡಿದರೂ ಸ್ಪಂದಿಸಲಿಲ್ಲ. ಕೂಡಲೇ ಆಡಳಿತ ಸಮಿತಿಯು ಇದನ್ನು ದುರಸ್ತಿಗೊಳಿಸುವ ಕ್ರಮ ಕೈಗೊಳ್ಳಬೇಕು. ಹಾಗೂ ತೆಂಗು ಕೃಷಿಕರು, ಕಂಗು ಕೃಷಿಕರು, ಹಾಗೂ ಭತ್ತ ಕೃಷಿಕರಿಗೆ ನೀಡಬೇಕಾದ ಸವಲತ್ತುಗಳು, ಗೊಬ್ಬರ, ಸಕಾಲದಲ್ಲಿ ನೀಡದೆ ಎಡರಂಗ ವರ್ಕಾಡಿ ಪಂಚಾಯತ್ ಆಡಳಿತ ಸಮಿತಿಯು ಕೃಷಿಕರನ್ನು ಸತಾಯಿಸುತ್ತಿದೆ. ಕೃಷಿ ಆಫೀಸಿನಲ್ಲಿ ವಿಚಾರಿಸುವಾಗ ಪಂಚಾಯತ್ ಅಂಗೀಕರಿಸಿದ ಲಿಸ್ಟ್ ಸಿಗಲಿಲ್ಲ ಎಂದು ಆಕ್ಷೇಪಣೆ ತಿಳಿಸುತ್ತಾರೆ. ಕೂಡಲೇ ದಾರಿದೀಪ ದುರಸ್ತಿ ಮತ್ತು ಕೃಷಿಕರಿಗೆ ಬೇಕಾದ ಸವಲತ್ತುಗಳನ್ನು ವಿತರಿಸಲು ಪಂಚಾಯತ್ ಆಡಳಿತ ಸಮಿತಿ ಮುಂದಾಗಬೇಕು ಎಂದು IUML ವರ್ಕಾಡಿ ಪಂಚಾಯತ್ ಪದಾಧಿಕಾರಿಗಳ ಸಭೆಯು ಆಗ್ರಹಪಡಿಸಿದೆ. ಕೆ. ಮುಹಮ್ಮದ್ ಪಾವೂರು ಸಭೆಯ ಅಧ್ಯಕ್ಷತೆ ವಹಿಸಿದರು, ಅಬ್ದುಲ್ ಮಜೀದ್ B.A ಸ್ವಾಗತಿಸಿದರು. ಈ ವೇಳೆ ಪಿ.ಬಿ. ಅಬೂಬಕ್ಕರ್ ಪಾತೂರು, ಟಿ ಎಂ ಮೂಸಕುಞ್ಞಿ ಹಾಜಿ ತೋಕೆ, ವಿ ಎಸ್ ಮುಹಮ್ಮದ್ ಧರ್ಮನಗರ, ಉಮರಬ್ಬ ಆನೆಕಲ್, ಬಾವ ಹಾಜಿ ಸೂಫಿನಗರ, ಮೂಸ ಕೆದುಂಬಾಡಿ, ಅಹ್ಮದ್ ಕುಂಞಿ ಕುಣಿಬೈಲು, ಇಬ್ರಾಹಿಂ ಕಜೆ, ಸಿದ್ದೀಕ್ ಧರ್ಮನಗರ, ಇಬ್ರಾಹಿಂ ಧರ್ಮನಗರ, ಹಾರಿಸ್ ಪಾವೂರು, ಝುಬೈರ್ ಮಾಸ್ಟರ್ ಭಾಗವಹಿಸದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.