Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಈಗಲೋ ಎಂಬಂತೆ ಮುರಿದು ಬೀಳುವ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ, ಅಸೌಖ್ಯ ಪೀಡಿತ, ವಯೋವೃದ್ಧ ವರ್ಕಾಡಿ ತೌಡುಗೋಳಿ ನಿವಾಸಿ ಅಣ್ಣಪ್ಪ ನಾಯಕ್.

ಈಗಲೋ ಎಂಬಂತೆ ಮುರಿದು ಬೀಳುವ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ, ಅಸೌಖ್ಯ ಪೀಡಿತ, ವಯೋವೃದ್ಧ ವರ್ಕಾಡಿ ತೌಡುಗೋಳಿ ನಿವಾಸಿ ಅಣ್ಣಪ್ಪ ನಾಯಕ್.
ವರ್ಕಾಡಿ: ವರ್ಕಾಡಿ ಗ್ರಾಮ ಪಂಚಾಯತ್ ಬೇಜವಾಬ್ದಾರಿಯಿಂದ ಅಸಹಾಯಕ ಅಣ್ಣಪ್ಪ ನಾಯಕ್ ರನ್ನು ದೇವರೇ ಕಾಪಾಡಬೇಕು. ಎಂದು ಬಿಜೆಪಿ ಆರೋಪಿಸಿದೆ. ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ 3 ನೇ ವಾರ್ಡ್ ನಾಟೆಕಲ್ ಬಳಿಯ ತೌಡುಗೋಳಿ ಸಮೀಪ ವಾಸವಿರುವ ಕಿವಿ ಕೇಳದ ಅನಾರೋಗ್ಯ ಪೀಡಿತ 73 ವರ್ಷ ಪ್ರಾಯದ ವಯೋವೃದ್ಧ ಅಣ್ಣಪ್ಪ ನಾಯಕ್ ತನ್ನ ಅಸಹಾಯಕ ಸ್ಥಿತಿಯನ್ನು ಪಂಚಾಯತ್ ಅಧಿಕೃತರಿಗೆ ತಿಳಿಸಿದರೂ, ಊರ ನಾಗರೀಕರು ಮನವಿ ನೀಡಿದರೂ, ಪಂಚಾಯತ್ ಆಡಳಿತವಾಗಲಿ, ಆರೋಗ್ಯ ಇಲಾಖೆಯಾಗಲಿ, ಸಹಕರಿಸದೇ ಬೇಜವಾಬ್ದಾರಿತನ ಪ್ರದರ್ಶಸಿ ಉದ್ದಟತನ ತೋರುತ್ತಿದೆ ಎಂದು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಆರೋಪಿಸಿದೆ.
ವಯೋಸಹಜದಿಂದ, ಅಲ್ಪ ಕಾಲದ ಅಸೌಖ್ಯದಿಂದಲೂ ಬಳಲುತ್ತಿರುವ ಅಣ್ಣಪ್ಪ ನಾಯಕ್ ರವರ ಪರಿಸ್ಥಿತಿ ಕಂಗೆಟ್ಟಿದ್ದ. ಇವರು ವಾಸಿಸುವ ಮನೆ ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಇವರಿಗೆ ಸರಿಯಾಗಿ ಕಣ್ಣು ಕಾಣದೆ, ಏಕಾಂಗಿಯಾಗಿ ವಾಸಿಸುತ್ತಿದ್ದು, ಔಷದ ಖರೀದಿಗೂ, ಮನೆ ರಿಪೇರಿಗೆ, ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇವರದ್ದಾಗಿದೆ. ಇವರ ಮನೆಗೆ ಇದುವರೆಗೂ ವಿದ್ಯುತ್ ಸಂಪರ್ಕವು ಇಲ್ಲ. ಅತೀ ದಾರಿದ್ರ್ಯ ಪಟ್ಟಿಯಲ್ಲಿ ಸೇರಿಸದೇ, ಔಷದ ನೀಡದ ಪಾಲೇಟಿವ್ ಕೇರ್ ವಿಭಾಗ, ಸೋರುತ್ತಿರುವ ಮನೆ ರಿಪೇರಿಗೆ, ಸಾರಣೆಗೆ ಹಣ ನೀಡದ, ಕನಿಷ್ಠ ಮನೆ ಸಂಪರ್ಕಿಸದ ಆಶಾ ಕಾರ್ಯಕರ್ತೆ, ಮನೆ ಮುಂದೆ ಇರುವ ಬಾವಿಗೆ ತಡೆ ಗೋಡೆ ಇಲ್ಲದೆ ಅಪಾಯಕಾರಿ ಸ್ಥಿತಿಯಲ್ಲಿ ಇದ್ದರೂ ತಮಗೆ ಯಾವುದೇ ಸಂಬಂಧವೆ ಇಲ್ಲದಂತೆ ವರ್ತಿಸುವ ವರ್ಕಾಡಿ ಗ್ರಾಮ ಪಂಚಾಯತ್ ಆಡಳಿತ ಸಮಿತಿ ವಿರುದ್ಧ ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಕಿಡಿ ಕಾರಿದೆ. ಇನ್ನು ಮುಂದೆ ಹತ್ತು ದಿನಗಳ ಒಳಗಾಗಿ ಅಣ್ಣಪ್ಪ ನಾಯಕ್ ರಿಗೆ ವಾಸಿಸಲು ಸೂಕ್ತ ವ್ಯವಸ್ಥೆ, ಮನೆ ರಿಪೇರಿ, ವಿದ್ಯುತ್ ಸಂಪರ್ಕ, ಅತೀ ದಾರಿದ್ಯ ಪಟ್ಟಿಯಲ್ಲಿ, ಹಾಗೂ ಲೈಫ್ ಯೋಜನೆಯಲ್ಲಿ ಸೇರಿಸದೇ ಇದ್ದರೆ ವರ್ಕಾಡಿ ಗ್ರಾಮ ಪಂಚಾಯತ್ ಬೇಜವಾಬ್ದಾರಿಯ ವಿರುದ್ಧ ಬಿಜೆಪಿ ಹೊರಟ ನಡೆಸಲಿದೆ ಎಂದು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ತಿಳಿಸಿದೆ. ನಿನ್ನೆ ಸಂಜೆ ನಡೆದ ಬಿಜೆಪಿ ಕೋರ್ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಯಿತು. ಹಾಗೂ ನಾಟೆಕಲ್ ಅಣ್ಣಪ್ಪ ನಾಯಕ್ ರವರ ಮನೆಯನ್ನು ಸಂದರ್ಶಸಿ, ಬಿಜೆಪಿ ನಾಯಕರು ಮಾಹಿತಿ ಸಂಗ್ರಹಿಸಿದರು. ಇಂತಹ ಪರಿಸ್ಥಿತಿಯಲ್ಲಿ ಈಗಲೂ ನಾಗರಿಕ ಸಮಾಜದಲ್ಲಿ ಜೀವಿಸುವುದು, ತಲೆ ತಗ್ಗಿಸಬೇಕಾದ ಮಾನಹಾನಿಕರ ವಿಚಾರ ಎಂದು ಬಿಜೆಪಿ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ. ಬಿಜೆಪಿ ಮುಖಂಡರಾದ ಭಾಸ್ಕರ್ ಪೊಯ್ಯೇ, ಆದರ್ಶ ಬಿ.ಎಂ, ಮಣಿಕಂಠ ರೈ, ಯತೀರಾಜ್ ಶೆಟ್ಟಿ, ಎ.ಕೆ ಕಯ್ಯಾರ್, ವಿವೇಕಾನಂದ, ನಾಗೇಶ್ ಬಳ್ಳೂರ್, ರವಿರಾಜ್ ಮೊದಲಾದವರು ಮನೆಗೆ ಭೇಟಿ ನೀಡಿದ ನಿಯೋಗದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.