ವರ್ಕಾಡಿ: ಯೂತ್ ಕಾಂಗ್ರೆಸ್ ಬಲ್ಬ್ ಚಾಲೆಂಜ್ ಉದ್ಘಾಟನೆ.
ಆಗಸ್ಟ್ 17, 2024
0
ವರ್ಕಾಡಿ: ಯೂತ್ ಕಾಂಗ್ರೆಸ್ ಬಲ್ಬ್ ಚಾಲೆಂಜ್ ಉದ್ಘಾಟನೆ.
ಮಂಜೇಶ್ವರ: ವಯನಾಡಿನ ಸಂತ್ರಸ್ತರಿಗೆ ನೆರವಾಗುವ ಸದುದ್ದೇಶದಿಂದ ಇಂಡಿಯನ್ ಯೂತ್ ಕಾಂಗ್ರೆಸ್ ಹಮ್ಮಿಕೊಂಡ "ಬಲ್ಬ್ ಚಾಲೆಂಜ್" ನ ವರ್ಕಾಡಿ ಪಂಚಾಯತು ಮಟ್ಟದ ಉದ್ಘಾಟನೆಯನ್ನು ಕಾಸರಗೋಡು ಜಿ.ಪಂ.ಸದಸ್ಯೆ ಶ್ರೀಮತಿ ಕಮಲಾಕ್ಷಿ.ಕೆ. ಪಾವೂರು ಉದ್ಘಾಟಿಸಿದರು. ಯೂತ್ ಕಾಂಗ್ರೆಸ್ ವರ್ಕಾಡಿ ಮಂಡಲ ಸಮಿತಿ ಅಧ್ಯಕ್ಷೆ ಶ್ರೀಮತಿ ಶರ್ಮಿಳಾ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತು ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ವರ್ಕಾಡಿ ಮಂಡಲ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಅರಿಬೈಲು, ಮೊಹಮ್ಮದ್ ಮಜಾಲು, ಎಸ್ ಅಬ್ದುಲ್ ಖಾದರ್ ಹಾಜೀ, ರೋನಿ ಡಿ ಸೋಜ, ಯೂತ್ ಕಾಂಗ್ರೆಸ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಮುರತ್ತಣೆ, ರಾಜೇಶ್ ಡಿ'ಸೋಜ, ಫಿಲೋಮಿನಾ ಮೊಂತೇರೋ ಉಪಸ್ಥಿತರಿದ್ದರು.


