Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸಂಭ್ರಮದಿಂದ ನಡೆದ ದೇಶದ 78 ನೇ ಸ್ವಾತಂತ್ರೋತ್ಸವ. ಮಂಗಳೂರಿನ ವಿವಿಧೆಡೆ ಧ್ವಜಾರೋಹಣ.

ಸಂಭ್ರಮದಿಂದ ನಡೆದ ದೇಶದ 78 ನೇ ಸ್ವಾತಂತ್ರೋತ್ಸವ. ಮಂಗಳೂರಿನ ವಿವಿಧೆಡೆ ಧ್ವಜಾರೋಹಣ.
ಮಂಗಳೂರು: 78 ನೇ ಸ್ವಾತಂತ್ರ ದಿನವನ್ನು ರೋಹನ್ ಕಾರ್ಪೋರೇಷನ್ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ಮಾಡಿದ ನಂತರ ಮಾತನಾಡಿದ ಕಾರ್ಮಿಕ ಅಧಿಕಾರಿ ವಿಲ್ಮಾ "ಕನಸಿನ ಕಟ್ಟಡದ ರೋಹನ್ ಕಾರ್ಪೊರೇಷನ್ ಜೊತೆ ಸೇರಿ ಹೊಸ ಭಾರತ ನಿರ್ಮಾಣ ಮಾಡೋಣ, ಕಾರ್ಮಿಕರಿಲ್ಲದೆ ನಮಗೆ ಸೂರಿಲ್ಲ ನಿಮ್ಮ ನಡುವಿನ ಸ್ವಾತಂತ್ರೋತ್ಸವ ನಿಜಕ್ಕೂ ನೆನಪಿನ ಬುತ್ತಿ," ಎಂದರು.
ಸ್ವಾತಂತ್ರೋತ್ಸವದ ಕುರಿತಾಗಿ ಮಾತನಾಡಿದ ಕಾರ್ಮಿಕ ಅಧಿಕಾರಿ ಕುಮಾರ್ "ಕಾರ್ಮಿಕರಿಗೆ ಇಂದು ರಜೆ ಘೋಷಣೆ ಮಾಡಿದ್ದೇವೆ, ಸ್ವಾತಂತ್ರಕ್ಕಾಗಿ ಮುಡಿಪಿರುವ ಈ ದಿನವನ್ನು ಕಾರ್ಮಿಕರು ಸ್ವತಂತ್ರವಾಗಿ ಆಚರಿಸಿ" ಎಂದು ಹೇಳಿದರು.
ರೋಹನ್ ಕಾರ್ಪೊರೇಶನ್‌ನ ದೈನಂದಿನ ಕಾರ್ಯಗಳಲ್ಲಿ ಒಗ್ಗಟ್ಟಿನ ಮೌಲ್ಯಗಳನ್ನು ಸಾಕಾರಗೊಳಿಸಿ, ವಿವಿಧತೆಯಲ್ಲಿನ ಏಕತೆಯನ್ನು ಗೌರವಿಸಿ ಪ್ರಗತಿಯತ್ತ ನಿರಂತರವಾಗಿ ಕೆಲಸ ಸಾಗಲಿ. ನಮ್ಮ ದೇಶವನ್ನು ಮತ್ತು ಸಂಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂದು ಪ್ರತಿಜ್ಞೆ ಮಾಡಿ. ಮುಂದಿನ ಪೀಳಿಗೆಗಳು ಹೆಮ್ಮೆಪಡುವಂತಹ ಭವಿಷ್ಯವನ್ನು ರಚಿಸುವಲ್ಲಿ ಒಂದಾಗೋಣ. ಎಂಬ ಆಶಯದೊಂದಿಗೆ ರೋಹನ್ ಕಾರ್ಪೊರೇಷನ್ನ ಕಾರ್ಯಕ್ರಮ ಯಶಸ್ವಿ ಕಂಡಿತು.
ಕಾರ್ಯಕ್ರಮದಲ್ಲಿ ರೋಹನ್ ಕಾರ್ಪೊರೇಷನ್ನ ಸದಸ್ಯರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.
ಬ್ಯಾಂಕ್ ಆಫ್ ಬರೋಡಾವು ತನ್ನ ಮಂಗಳೂರಿನ ವೀರಾಜ್ ಟವರ್ಸ್‌ನಲ್ಲಿರುವ ವಲಯ ಕಚೇರಿಯ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಿತು. ವಲಯ ಮುಖ್ಯಸ್ಥರಾದ ಶ್ರೀ ರಾಜೇಶ್ ಖನ್ನಾ ಅವರು ರಾಷ್ಟ್ರಧ್ವಜಾರೋಹಣ ನಡೆಸಿ, ಬ್ಯಾಂಕರ್‌ಗಳಾಗಿ ದೇಶ ಸೇವೆಗೆ ಮತ್ತು ಸುರಕ್ಷಿತ ಭವಿಷ್ಯ ನಿರ್ಮಾಣಕ್ಕೆ ಸಂಕಲ್ಪ ಮಾಡಿಕೊಳ್ಳುವಂತೆ ಸಿಬ್ಬಂದಿಗೆ ಪ್ರೇರೇಪಿಸಿದರು. ಶ್ರೀ ರಮೇಶ್ ಕಾನಡೆ, ಡಿಜಿಎಂ; ಶ್ರೀ ಅಶ್ವಿನಿ ಕುಮಾರ್, ಡಿಜಿಎಂ; ಶ್ರೀ ಸನೀಲ್ ಕುಮಾರ್, ಮಂಗಳೂರು ನಗರದ ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಹಿರಿಯ ಅಧಿಕಾರಿಗಳು, ಅಧಿಕಾರಿಗಳು ಮತ್ತು ಮಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಸ್ವಾತಂತ್ರ್ಯದ ಭಾವನೆಯನ್ನು ಪ್ರತಿಬಿಂಬಿಸುವ ಬಣ್ಣದ ಉಡುಗೆಗಳಲ್ಲಿ ಭಾಗವಹಿಸಿದರು.
ಸುರಕ್ಷತಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸೈನಿಕರು ಮತ್ತು ಸುರಕ್ಷತಾ ಸಿಬ್ಬಂದಿಯ ನಿಸ್ವಾರ್ಥ ತ್ಯಾಗವನ್ನು ಸ್ಮರಿಸಿದರು.
ಎಂ.ಸಿ.ಸಿ. ಬ್ಯಾಂಕಿನಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಿಲಾಗ್ರಿಸ್ ಚರ್ಚಿನ ಧರ್ಮಗುರುಗಳಾದ ವಂದನೀಯ ಬೊನವೆಂಚರ್ ನಜರೆತ್ ಇವರು ಪವಿತ್ರ ಬಲಿ ಪೂಜೆ ನೆರೆವೇರಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ್ ಗಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷ ಶ್ರೀ ಜೆರಾಲ್ ಜೂಡ್ ಡಿಸಿಲ್ವಾ, ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜಸ್ ವೇದಿಕೆಯಲ್ಲಿದ್ದರು.
ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಶ್ರೀ ಶ್ರೀ ತಾರಾನಾಥ್ ಗಟ್ಟಿ, ನಮ್ಮ ದೇಶದ 78ನೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆಯಲ್ಲಿ ಪ್ರಮುಖ ಸಹಕಾರಿ ಬ್ಯಾಂಕ್, ಎಂ.ಸಿ.ಸಿ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯೊಂದಿಗೆ ಭಾಗವಹಿಸಲು ಸಂತೋಷವಾಗುತ್ತಿದೆ. ಎಂ.ಸಿ.ಸಿ ಬ್ಯಾಂಕ್ ನೆಲೆ ನಿಂತಿರುವ ‘ಬಾವುಟಗಡ್ಡೆ’ ಪ್ರದೇಶ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪ್ರದೇಶವಾಗಿದ್ದು, ಇಲ್ಲಿನ ಅನೇಕ ಮಹನೀಯರು ತಮ್ಮ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ವಿವರಿಸಿದರು. ಭಾರತದ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬ ನಾಗರಿಕನೂ ಎತ್ತಿ ಹಿಡಿಯಬೇಕಾಗಿದೆ ಎಂದು ಕರೆ ನೀಡಿದರು. ಈ ಸಂಧರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಯವರು ದೇಶಭಕ್ತಿ ಗೀತೆಗಳನ್ನು ಹಾಡಿ ಸಭಿಕರಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸಿದರು.
ಬ್ಯಾಂಕಿನ ಭದ್ರತಾ ಸಿಬ್ಬಂದಿಯಾಗಿ ಸುಮಾರು ಎರಡು ವರ್ಷ ಸೇವೆ ಸಲ್ಲಿಸಿ ಆಕಾಲಿಕವಾಗಿ ನಿಧನರಾದ ದಿವಂಗತ ಗೋಪಾಲಕೃಷ್ಣ ಗಟ್ಟಿಯವರಿಗೆ ಶೃದ್ದಾಂಜಲಿಯನ್ನು ಸಮರ್ಪಿಸಲಾಯಿತು. ಬ್ಯಾಂಕಿನ ವತಿಯಿಂದ ರೂ.25,೦೦೦/- ಆರ್ಥಿಕ ನೆರವನ್ನು ಅವರ ಕುಟುಂಬಸ್ಥರಿಗೆ ನೀಡಲಾಯಿತು. ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೊ, ಆ್ಯಂಡ್ರು ಡಿಸೋಜ, ಅನಿಲ್ ಪತ್ರಾವೊ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ಡೇವಿಡ್ ಡಿಸೋಜ, ಜೆ.ಪಿ. ರೊಡ್ರಿಗಸ್, ಸುಶಾಂತ್ ಸಿ. ಎ. ಸಲ್ಡಾನ್ಹಾ ಮತ್ತು ಕ್ಲೆಮೆಂಟ್ ಜಿ. ಪಿಂಟೊ, ಆಲ್ವಿನ್ ಪ್ರಶಾಂತ್ ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಹೆರಾಲ್ಡ್ ಮೊಂತೇರೊ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಉಪ ಮಹಾಪ್ರಬಂಧಕ ರಾಜ್ ಎಫ್ ಮಿನೇಜಸ್ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರು. ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾದ ಡೆರಿಲ್ ಲಸ್ರಾದೊ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.