ಬಾಯಾರು ಪೆರ್ವೋಡಿ ರಸ್ತೆ ಕುಸಿತ ಕೆಲಸ ಕಾಮಗಾರಿ ಶೀಘ್ರದಲ್ಲೆ ಆರಂಭಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು - ಸಿ.ಪಿ.ಐ (ಎಂ).
ಜುಲೈ 04, 2024
0
ಬಾಯಾರು ಪೆರ್ವೋಡಿ ರಸ್ತೆ ಕುಸಿತ ಕೆಲಸ ಕಾಮಗಾರಿ ಶೀಘ್ರದಲ್ಲೆ ಆರಂಭಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು - ಸಿ.ಪಿ.ಐ (ಎಂ).
ಮಂಜೇಶ್ವರ: ಬಾಯಾರು - ಮುಳಿಗದ್ದೆಯಿಂದ ಬೇರಿಪದವು ವರೆಗೆ ಇರುವ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ರಸ್ತೆಯಲ್ಲಿ ಪೆರ್ವೋಡಿಯಲ್ಲಿ ರಸ್ತೆ ಕುಸಿದು ಬಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟುಮಾಡಿದೆ. ಲೋಕಪಯೋಗಿ ಇಲಾಖೆ ಸಚಿವ ಮುಹಮ್ಮದ್ ರಿಯಾಸ್ ಅವರಿಗೆ ಸಿ ಪಿ.ಐ ಎಂ ಬಾಯಾರು ಲೋಕಲ್ ಸಮಿತಿ ನೀಡಿದ ದೂರಿನ ಆಧಾರದಲ್ಲಿ ಅಧಿಕಾರಿಗಳು ಸಂಭಂದಪಟ್ಟ ಸ್ಥಳವನ್ನು ಸಂದರ್ಶಿಸಿ ಕುಸಿದು ಬಿದ್ದ ಪ್ರದೇಶವನ್ನು ಸರಿಪಡಿಸಲು ಬೇಕಾಗಿರುವ ಕಾಮಗಾರಿ ಆರಂಭಿಸಲು ಟೆಂಡರ್ ಕ್ರಮಗಳನ್ನು ಪೂರ್ತಿಮಾಡಿದ್ದಾರೆ. ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದ ರಸ್ತೆಯು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಶೀಘ್ರದಲ್ಲೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಟೆಂಡರ್ ತೆಗೆದಿರುವ ವ್ಯಕ್ತಿಯೂ ಕಾಮಗಾರಿ ಆರಂಭಿಸಲು ಮುಂದಾಗಬೇಕು ಹಾಗೂ ವಾಹನ ಸಂಚಾರಕ್ಕೆ ಬರುವ ತೊಂದರೆಯನ್ನು ಸರಿಪಡಿಸಬೇಕು ಎಂದು ಸಿ.ಪಿ ಐ.ಎಂ ಬಾಯಾರು ಲೋಕಲ್ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

