ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಉಪ್ಪಳ ಅಗ್ನಿಶಾಮಕ ಠಾಣೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತುರ್ತು ಅಗ್ನಿ ದುರಂತ ಹಾಗೂ ಆಪತ್ತು ನಿರ್ವಹಣೆಯ ಕುರಿತಾಗಿ ಮಾಹಿತಿ ಕಾರ್ಯಗಾರ.
ಜುಲೈ 03, 2024
0
ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಉಪ್ಪಳ ಅಗ್ನಿಶಾಮಕ ಠಾಣೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತುರ್ತು ಅಗ್ನಿ ದುರಂತ ಹಾಗೂ ಆಪತ್ತು ನಿರ್ವಹಣೆಯ ಕುರಿತಾಗಿ ಮಾಹಿತಿ ಕಾರ್ಯಗಾರ.
ಬಾಯಾರು:- ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಉಪ್ಪಳ ಅಗ್ನಿಶಾಮಕ ಠಾಣೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತುರ್ತು ಅಗ್ನಿ ದುರಂತ ಹಾಗೂ ಆಪತ್ತು ನಿರ್ವಹಣೆಯ ಕುರಿತಾಗಿ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
"ಮೂಲಭೂತ ಸೌಕರ್ಯಗಳಿದ್ದರೂ ಆಪತ್ತು ಬಂದಾಗ ರಕ್ಷಿಸಲು ಬರುವ ರಕ್ಷಣಾ ಕಾರ್ಯಕರ್ತರು ಯಾವ ರೀತಿ ಮುಂದಾಲೋಚನೆಯಿಂದ ಯಶಸ್ವಿಯಾಗಿ ಕಾರ್ಯಪ್ರವರ್ತರಾಗುತ್ತಾರೆ ಮತ್ತು ಪ್ರಥಮ ಚಿಕಿತ್ಸೆಯನ್ನು ಹೇಗೆ ಮಾಡಬೇಕೆಂಬುದನ್ನು ವಿದ್ಯಾರ್ಥಿಗಳಿಗೆ ಈ ಕಾರ್ಯಗಾರದಲ್ಲಿ ಅಗ್ನಿ ಶಾಮಕದಳದ ಠಾಣಾಧಿಕಾರಿಯಾದ ರಾಜೇಶ್ ಸಿ.ಪಿ ವಿವರಿಸಿದರು. ಕಾರ್ಯಕ್ರಮದಲ್ಲಿ ಅಗ್ನಿಶಾಮಕದಳ ಉಪ್ಪಳ ಠಾಣೆಯ ಠಾಣಾಧಿಕಾರಿ ರಾಜೇಶ್. ಸಿ. ಪಿ, ಸಹಾಯಕ ಅಧಿಕಾರಿಗಳಾದ ವಿಷ್ಣು, ವಿಪಿನ್, ಪ್ರಶಾಂತಿ ಸೇವಾ ಟ್ರಸ್ಟ್ ಉಪಾಧ್ಯಕ್ಷರಾದ ಪೆಲತ್ತಡ್ಕ ರಾಮಕೃಷ್ಣ ಭಟ್, ಸಂಯೋಜಕರಾದ ಎಚ್ ಮಹಾಲಿಂಗ ಭಟ್, ಶಾಲಾ ಪ್ರಾಂಶುಪಾಲರಾದ ವಾಮನನ್ ಉಪಸ್ಥಿತರಿದ್ದರು. ಅಗ್ನಿ ದುರಂತ ಹಾಗೂ ಇತರ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಾಗಳ ಕುರಿತು ಮಾಹಿತಿಯ ಜತೆ, ಅಗ್ನಿ ದುರಂತದ ಸಂದರ್ಭದಲ್ಲಿ ಕೈಗೊಳ್ಳಲಾಗುವ ಕಾರ್ಯಾಚರಣೆಗಳ ಅಣಕು ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಕನ್ನಡ ಅನ್ ಶಿಕ್ಷಕರಾಗಿರುವ ನಿತ್ಯಾನಂದ ಕೆ.ಆರ್ ನಿರೂಪಣೆಯೊಂದಿಗೆ, ಸ್ವಾಗತಿಸಿ, ಪ್ರಾಂಶುಪಾಲರಾದ ವಾಮನನ್ ಪ್ರಾಸ್ತಾವಿಕ ನುಡಿಯೊಂದಿಗೆ ಧನ್ಯವಾದವಿತ್ತರು. ವಿದ್ಯಾರ್ಥಿಗಳ ಜತೆ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದರು.











