Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಆವರಣ ಗೋಡೆ ಕುಸಿದು ಬಿದ್ದು ಎರಡೂವರೆ ವರ್ಷ ಪ್ರಾಯದ ಮಗು ಗಂಭೀರ.

ಆವರಣ ಗೋಡೆ ಕುಸಿದು ಬಿದ್ದು ಎರಡೂವರೆ ವರ್ಷ ಪ್ರಾಯದ ಮಗು ಗಂಭೀರ.
ಮಂಜೇಶ್ವರ: ಆಟವಾಡುತ್ತಿದ್ದ ಎರಡೂವರೆ ವರ್ಷ ಪ್ರಾಯದ ಮಗುವಿನ ಮೇಲೆ ಆವರಣ ಗೋಡೆಯೊಂದು ಕುಸಿದು ಬಿದ್ದು ಮಗುವನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ 3 ನೇ ವಾರ್ಡಿನ ಕುಂಜತ್ತೂರು ಸನ್ನಡ್ಕದಲ್ಲಿ ವಾಸವಾಗಿರುವ ಅನ್ಯರಾಜ್ಯ ಕಾರ್ಮಿಕ ಉತ್ತರ ಪ್ರದೇಶ ನಿವಾಸಿ ಮಹಮ್ಮದ್ ಅಮೀನ್ ಎಂಬವರ ಪುತ್ರ ಎರಡೂವರೆ ವರ್ಷದ ಬಾಲಕ ಶೆರ್ಶಾಝ್ ಶಾ ಗಂಭೀರ ಗಾಯಗೊಂಡಿದ್ದಾನೆ. ಸಮೀಪ ವಾಸವಾಗಿರುವ ಖಾದರ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ. ವಾರ್ಡ್ ಸದಸ್ಯ ಹಾಗೂ ಸ್ಥಳೀಯರ ನೆರವಿನೊಂದಿಗೆ ಮಗುವನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.