Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮೀಂಜ ಪಂಚಾಯತ್ ನ ಮಾಜಿ ಸದಸ್ಯ, ಮಜಿಬೈಲ್ ಸಿ. ಪಿ. ಐ. ಎಂ. ಬ್ರಾಂಚ್ ಸದಸ್ಯ, ನಿವೃತ್ತ ಪಂಚಾಯತ್ ಸ್ಪೆಷಲ್ ಗ್ರೇಡ್ ಕಾರ್ಯದರ್ಶಿ, ಮಜಿಬೈಲ್ ನಿವಾಸಿ ಎಂ. ಜಗನ್ನಾಥ್ (73) ನಿಧನ.

ಮೀಂಜ ಪಂಚಾಯತ್ ನ ಮಾಜಿ ಸದಸ್ಯ, ಮಜಿಬೈಲ್ ಸಿ. ಪಿ. ಐ. ಎಂ. ಬ್ರಾಂಚ್ ಸದಸ್ಯ, ನಿವೃತ್ತ ಪಂಚಾಯತ್ ಸ್ಪೆಷಲ್ ಗ್ರೇಡ್ ಕಾರ್ಯದರ್ಶಿ, ಮಜಿಬೈಲ್ ನಿವಾಸಿ ಎಂ. ಜಗನ್ನಾಥ್ (73) ನಿಧನ.
ಮಂಜೇಶ್ವರ: ಮೀಂಜ ಪಂಚಾಯತ್ ನ ಮಾಜಿ ಸದಸ್ಯರು, ಮಜಿಬೈಲ್ ಸಿ. ಪಿ. ಐ. ಎಂ. ಬ್ರಾಂಚ್ ಸದಸ್ಯರೂ , ನಿವೃತ್ತ ಪಂಚಾಯತ್ ಕಾರ್ಯದರ್ಶಿ ಗಳೂ ಆಗಿದ್ದ, ಮಜಿಬೈಲ್ ನಿವಾಸಿ ಎಂ. ಜಗನ್ನಾಥ್ (73) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ನಿನ್ನೆ ಸಂಜೆ ನಿಧನರಾದರು. ಮೃತರು ದಿ. ಕುಕ್ಕ - ದಿ. ಕೊರಪೋಳು ದಂಪತಿಯ ಪುತ್ರರಾಗಿದ್ದು, ಪತ್ನಿ: ಗಿರಿಜಾ, ಮಕ್ಕಳಾದ: ಮಮತಾ, ರಮ್ಯಾ, ಅಳಿಯಂದಿರಾದ: ಡೊಂಬಯ್ಯ ಇಡ್ಕಿದು ಪುತ್ತೂರು, ಧರ್ಮಧೀರ ಕಾಸರಗೋಡು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಮೀಂಜ, ಪೈವಳಿಕೆ, ಮುಂತಾದ ಕಡೆಗಳಲ್ಲಿ ಪಂಚಾಯತ್ ಕಾರ್ಯದರ್ಶಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತಿಯ ವೇಳೆ ಮಂಜೇಶ್ವರ ಗ್ರಾಮ ಪಂಚಾಯತ್ ನಲ್ಲಿ ಸ್ಪೆಶಲ್ ಗ್ರೇಡ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಳಿಕ ಮೀಂಜ ಗ್ರಾಮ ಪಂಚಾಯತ್ ನ ಕುಳೂರು ವಾರ್ಡ್ ನಲ್ಲಿ ಚುನಾವಣೆಗೆ ಸ್ಪರ್ಧಿಸಿ, ಪಂಚಾಯತ್ ಸದಸ್ಯರಾಗಿ, ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾದರು. ಈ ವೇಳೆ ಮಂಗಲ್ಪಾಡಿ - ಪೈವಳಿಕೆ ಅರ್ಬನ್ ಕೋ - ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರಾಗಿದ್ದರು. ಮೃತರ ನಿಧನಕ್ಕೆ ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಸಿಪಿಐ ಮೀಂಜ ಲೋಕಲ್ ಕಾರ್ಯದರ್ಶಿ: ಗಂಗಾಧರ ಕೊಡ್ಡೆ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.