ಕನಿಯಾಲ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ M.L ಅಶ್ವಿನಿ ಪರ ಚುನಾವಣಾ ವಾಹನ ಪ್ರಚಾರಣ ಜಾಥ.
ಏಪ್ರಿಲ್ 18, 2024
0
ಕನಿಯಾಲ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ M.L ಅಶ್ವಿನಿ ಪರ ಚುನಾವಣಾ ವಾಹನ ಪ್ರಚಾರಣ ಜಾಥ.
ಪೈವಳಿಕೆ: ಕನಿಯಾಲ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ML ಅಶ್ವಿನಿ ಯವರ ಚುನಾವಣಾ ವಾಹನ ಪ್ರಚಾರಣ ಜಾಥ ವನ್ನು ಬಿಜೆಪಿ ಅನ್ ಮಂಡಲಧ್ಯಕ್ಷ ಆದರ್ಶ ಬಿ ಎಂ, ಉದ್ಘಾಟಿಸಿದರು. ಅವರು ಮಾತನಾಡಿ ದೇಶದ ಸಮಗ್ರ ಬೆಳವಣಿಗೆ ಮುಂದುವರಿಕೆಗೆ ಮೋದಿ ಮತ್ತೆ ಪ್ರಧಾನಿ ಯಾಗಬೇಕಾದದ್ದು ದೇಶದ ಅಗತ್ಯತೆ ಎಂದು ಹೇಳಿದರು. ದೇಶದ ಪ್ರತಿ ಪ್ರಜೆಯು ಕೇಂದ್ರ ಸರಕಾರದ ಒಂದಲ್ಲ ಒಂದು ಯೋಜನೆಗಳ ಫಲಾನುಭವಿಗಳು ಎಂದು ಹೇಳಿದರು. ವಿಘ್ನೇಶ್ವರ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು, ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಂದಿಸಿದರು.
ಅಭ್ಯರ್ಥಿ ಅಶ್ವಿನಿ ಮಾತಾಯಾಚನೆ ನಡೆಸಿದರು.
ಗೋಪಾಲ್ ಶೆಟ್ಟಿ ಅರಿಬೈಲ್, ಸುಧಾಮ್ ಗೊಸಾಡ, ವಸಂತ ಮಯ್ಯ, ಹರಿಶ್ಚಂದ್ರ ಎಂ, ಸತೀಸ್ಚಂದ್ರ ಭಂಡಾರಿ, ಸದಾಶಿವ ಚೇರಲ್, ಎ.ಕೆ ಕಯ್ಯಾರು ಮೊದಲದವರು ಉಪಸ್ಥಿತರಿದ್ದರು



