ವೀರ ಮಂಗಲದ ಕುಮಾರಧಾರ ನದಿ ತಟದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ. ವಾರ್ಷಿಕ ಜಾತ್ರೆಗೆ ತೆರೆ.
ಏಪ್ರಿಲ್ 19, 2024
0
ವೀರ ಮಂಗಲದ ಕುಮಾರಧಾರ ನದಿ ತಟದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ. ವಾರ್ಷಿಕ ಜಾತ್ರೆಗೆ ತೆರೆ.
ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು ಮುಂಜಾನೆ ದೇವರ ಅವಭೃತ ಸ್ನಾನ ವೀರ ಮಂಗಲದ ಕುಮಾರಧಾರ ನದಿ ತಟದಲ್ಲಿ ನಡೆಯಿತು. ಸುಮಾರು 2500 ಕ್ಕಿಂತಲೂ ಅಧಿಕ ಮಂದಿ ಭಕ್ತರ ಉಪಸ್ಥಿತಿ ಈ ಬಾರಿ ಕಂಡದ್ದು, ವಿಶೇಷವಾಗಿತ್ತು. ನಿನ್ನೆ ಸಂಜೆ ದೇವರ ಅವಭೃತ ಸವಾರಿ ಕ್ಷೇತ್ರದಿಂದ ಹೊರಟಿದ್ದು, ಸುಮಾರು 15 ಕಿಲೋ ಮೀಟರ್ ಅಂತರದಲ್ಲಿ ಹಲವಾರು ಕಡೆಗಳಲ್ಲಿ ಕಟ್ಟೆ ಪೂಜೆ ನಡೆಯಿತು. ಅಲ್ಲದೆ ಸವಾರಿಯಲ್ಲಿ ಸಾಗುವ ಸಾವಿರಾರು ಮಂದಿ ಭಕ್ತರಿಗೆ ಅಲ್ಲಲ್ಲಿ ಪಾನಕ, ಕಬ್ಬಿನ ಹಾಲು, ನೀರು, ಜ್ಯೂಸ್, ಶರಬತ್ತು ಗಳು ವಿವಿಧ ನಮೂನೆಯ ಉಪಹಾರಗಳನ್ನ ಊರವರು ವ್ಯವಸ್ಥಿತಗೊಳಿಸಿ, ಭಕ್ತರಿಗೆ ವಿತರಿಸಿ, ಆಯಾಸ ಹಾಗೂ ಹಸಿವನ್ನು ನಿವಾರಿಸಿದರು. ಇಂದು ಬೆಳಗ್ಗೆ ದೇವರು ಕ್ಷೇತ್ರಕ್ಕೆ ಆಗಮಿಸಿದ ಬಳಿಕ ಧ್ವಜಾವರೋಹಣಗೊಂಡಿತು.
ಛಾಯಚಿತ್ರ / ವಿಡಿಯೋ: ಯೋಶಿತ್ ಆಚಾರ್ಯ ಬನ್ನೂರು.


