ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಧರ್ಮನಗರ ತಿಮ್ಮಂಗೂರು ಅಣೆ ಅಂಗನವಾಡಿಯ ನೂತನ ಕಟ್ಟಡದ ಉದ್ಘಾಟನೆ.
ಫೆಬ್ರವರಿ 06, 2024
0
ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಧರ್ಮನಗರ ತಿಮ್ಮಂಗೂರು ಅಣೆ ಅಂಗನವಾಡಿಯ ನೂತನ ಕಟ್ಟಡದ ಉದ್ಘಾಟನೆ.
ವರ್ಕಾಡಿ: ವರ್ಕಾಡಿ ಗ್ರಾಮ ಪಂಚಾಯತ್ ಹಾಗೂ ಮಂಜೇಶ್ವರ ಬ್ಲಾಕ್ ಪಂಚಾಯತ್ 2022-2023 ನೇ ವಾರ್ಷಿಕ ಯೋಜನೆ ಪ್ರಕಾರ ನಿರ್ಮಿಸಿದ ಧರ್ಮನಗರ ತಿಮ್ಮಂಗೂರು ಅಣೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಮೀನಾ ಟೀಚರ್ ನೆರವೇರಿಸಿದರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಉಪಾಧ್ಯಕ್ಷ ಶ್ರೀ ಅಬೂಬಕ್ಕರ್ ಸಿದ್ದಿಕ್ ಪಾಡಿ, ಬ್ಲಾಕ್ ಪಂಚಾಯತ್ ಸದಸ್ಯ ಶ್ರೀ ಮೊಯ್ದೀನ್ ಕುಂಞ, ಪಂಚಾಯತ್ ಸದಸ್ಯ ಶ್ರೀ ರಾಜ್ ಕುಮಾರ್, ಪಂಚಾಯತ್ ಯೋಜನಾ ಸಮಿತಿ ಉಪಾಧ್ಯಕ್ಷ ಶ್ರೀ ಮೊಹಮ್ಮದ್ ಮಜಾಲ್, ಅನಿಲ್ ಕುಮಾರ್, ಐ ಸಿ ಡಿ ಎಸ್ ಸೂಪರ್ ವೈಸರ್ ಶ್ರೀಮತಿ ಸಫೀದ ತಾಜುದ್ದೀನ್, ಪ್ರೇರಕ್ ರವಿಶಂಕರ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಪಂಚಾಯತ್ ಸದಸ್ಯರಾದ ಶ್ರೀ ಇಬ್ರಾಹಿಂ ಧರ್ಮನಗರ ಸ್ವಾಗತಿಸಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪುಷ್ಪಾವತಿ ವಂದಿಸಿದರು.




