Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸಿ.ಪಿ.ಐ ಪಕ್ಷದ ಸೀತಾಂಗೋಳಿ ಶಾಖೆಯ ಹಿರಿಯ ಕಾರ್ಯಕರ್ತ ಅಪ್ಪಯ್ಯ ಪಾಟಾಳಿ (65) ನಿಧನ. ಸಿಪಿಐ ಸಂತಾಪ.

ಸಿ.ಪಿ.ಐ ಪಕ್ಷದ ಸೀತಾಂಗೋಳಿ ಶಾಖೆಯ ಹಿರಿಯ ಕಾರ್ಯಕರ್ತ ಅಪ್ಪಯ್ಯ ಪಾಟಾಳಿ (65) ನಿಧನ. ಸಿಪಿಐ ಸಂತಾಪ.
ಪುತ್ತಿಗೆ: ಮುಖಾರಿಕಂಡ ಕೋಡಿಮೂಲೆಯ ದಿವಂಗತ ಶಂಕರ ಪಾಟಾಳಿ ಹಾಗೂ ತೇಯಿ ಹೆಂಗ್ಸು ದಂಪತಿ ಪುತ್ರ, ಸೀತಾಂಗೋಳಿ ಪೇಟೆಯಲ್ಲಿ ಗೂಡಂಗಡಿ ವ್ಯಾಪಾರಿಯಾಗಿದ್ದ ಸಿಪಿಐ ಪಕ್ಷದ ಸೀತಾಂಗೋಳಿ ಶಾಖೆಯ ಹಿರಿಯ ಕಾರ್ಯಕರ್ತ ಅಪ್ಪಯ್ಯ ಪಾಟಾಳಿ (65) ಅಲ್ಪ ಕಾಲದ ಅನಾರೋಗ್ಯದಿಂದ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಸಹೋದರ ರವಿ, ಮಕ್ಕಳಾದ ಪವಿತ್ರಾ, ಪ್ರವೀಣ, ನವೀನ, ಸೊಸೆ ಸೌಮ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಪ್ಪಯ್ಯ ಪಾಟಾಳಿ ನಿಧನಕ್ಕೆ ಸಿಪಿಐ ರಾಜ್ಯ ಸಹ ಕಾರ್ಯದರ್ಶಿ, ಮಾಜಿ ಕಂದಾಯ ಸಚಿವ ಇ. ಚಂದ್ರಶೇಖರನ್, ರಾಜ್ಯ ಸಮಿತಿ ಸದಸ್ಯರುಗಳಾದ ಗೋವಿಂದನ್ ಪಳ್ಳಿಕಾಪಿಲ್, ಟಿ. ಕೃಷ್ಣನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ ರಾಜನ್, ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್, ಎ.ಐ.ಟಿ.ಯು.ಸಿ ಯ ಮುಸ್ತಫಾ ಕಡಂಬಾರ್ ಮೊದಲಾದವರು ಗಾಢ ಸಂತಾಪ ವ್ಯಕ್ತಪಡಿಸಿದರು. ಪಕ್ಷದ ನೇತಾರರಾದ ಕೃಷ್ಣ ಆಳ್ವ ನಾವೂರು, ಪುಷ್ಪಾಕರ ಮಾಜಿ ಪಂಚಾಯತ್ ಸದಸ್ಯ ಚಂದ್ರ ಮುಖಾರಿ ಮೃತರ ನಿವಾಸಕ್ಕೆ ತೆರಳಿ ಕುಟುಂಬವನ್ನು ಸಂತೈಸಿ, ಸಂತಾಪ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.