ದೇಶದಲ್ಲಿ ಪ್ರತಿದಿನ ಇಬ್ಬರು ಕ್ರೈಸ್ತರು ಅಕ್ರಮಿಸಲ್ಪಡುವಾಗ, ಕೇರಳದಲ್ಲಿ ಒಬ್ಬನೇ ಒಬ್ಬ ಅಕ್ರಮಿಸಲ್ಪಡದಿರುವುದನ್ನು ಕ್ರೈಸ್ತ ಸಮಾಜ ತಿಳಿದುಕೊಳ್ಳಬೇಕಾಗಿದೆ. ಬಿ.ವಿ ರಾಜನ್
ಜನವರಿ 08, 2024
0
ದೇಶದಲ್ಲಿ ಪ್ರತಿದಿನ ಇಬ್ಬರು ಕ್ರೈಸ್ತರು ಅಕ್ರಮಿಸಲ್ಪಡುವಾಗ, ಕೇರಳದಲ್ಲಿ ಒಬ್ಬನೇ ಒಬ್ಬ ಅಕ್ರಮಿಸಲ್ಪಡದಿರುವುದನ್ನು ಕ್ರೈಸ್ತ ಸಮಾಜ ತಿಳಿದುಕೊಳ್ಳಬೇಕಾಗಿದೆ. ಬಿ.ವಿ ರಾಜನ್
ಮಂಜೇಶ್ವರ: ದೇಶದಲ್ಲಿ ಪ್ರತಿದಿನ ಇಬ್ಬರು ಕ್ರೈಸ್ತರು ಆಕ್ರಮಣಕೊಳಗಾಗುತ್ತಿದ್ದು, ಕೇರಳದಲ್ಲಿ ಮಾತ್ರ ಇದುವರೆಗೂ ಒಬ್ಬನೇ ಒಬ್ಬ ಕ್ರೈಸ್ತ ಆಕ್ರಮಿಸಲ್ಪಟ್ಟಿಲ್ಲವೆಂದು ಯುನೈಟೆಡ್ ಕ್ರಿಶ್ಚನ್ ಫಾರ್ಮ್ ಬಹಿರಂಗ ಪಡಿಸಿದ ವಿಷಯದಿಂದ ತಿಳಿದು ಬಂದಿದ್ದು ಕೇರಳದ ಎಡರಂಗ ಸರಕಾರದ ಮಹತ್ವ ಎಷ್ಟೆಂಬುದನ್ನು ಕ್ರೈಸ್ತ ಬಾಂಧವರು ಮನದಟ್ಟು ಮಾಡಿ ಕೊಳ್ಳಬೇಕೆಂದು ಎಲ್.ಡಿ.ಎಫ್ ಮಂಜೇಶ್ವರ ಮಂಡಲ ಕನ್ವೀನರ್ ಬಿ.ವಿ ರಾಜನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಅತೀ ಹೆಚ್ಚು ಆಕ್ರಮಣಗಳು ನಡೆದದ್ದು ಉತ್ತರ ಪ್ರದೇಶ, ಛತ್ತೀಸ್ ಗಡ್, ಜಾರ್ಖಾಂಡ್, ಹರಿಯಾಣ ಎಂಬೀ ರಾಜ್ಯಗಳಲ್ಲಾಗಿದೆ. ನಮ್ಮ ನೆರೆಯ ರಾಜ್ಯವಾದ ಕರ್ನಾಟಕದಲ್ಲಿ (21) ಇತರ ರಾಜ್ಯಗಳಾದ ಮಧ್ಯಪ್ರದೇಶ (35) ಪಂಜಾಬ್(18) ಬಿಹಾರ(14) ಆಕ್ರಮಣಗಳು ನಡೆದಿದೆ.
2014 ರಿಂದ 2023 ರ ತನಕದ ವರುಷಗಳಲ್ಲಿ ನಡೆದ ಅಕ್ರಮಣದ ವಿವರ ಈ ರೀತಿ ಇದೆ.
ಯುನೈಟೆಡ್ ಕ್ರಿಶ್ಚನ್ ಫಾರ್ಮ್ ಹೊರಬಿಟ್ಟ ಲೆಕ್ಕ
ದೇಶದಲ್ಲಿ ಪ್ರತಿ ದಿನ ಇಬ್ಬರು ಕ್ರೈಸ್ತರು ಆಕ್ರಮಣಕ್ಕೊಳಗಾಗುತ್ತಿದ್ದಾರೆ.
ಕೇರಳದಲ್ಲಿ ಒಬ್ಬನೇ ಒಬ್ಬ ಕ್ರೈಸ್ತ ಅಕ್ರಮಿಸಲ್ಪಟ್ಟಿಲ್ಲ
2014- 147
2015 - 177
2016 - 208
2017 - 240
2018 - 292
2019 - 328
2020 - 279
2021 - 505
2022 - 599
2023 - 720
ಎಂಬೀ ಲೆಕ್ಕಾಚಾರವನ್ನು ಗಮನಿಸಬೇಕಾಗಿದೆ ಎಂದು ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ.


