Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

D.Y.F.I ಕೇರಳದಲ್ಲಿ ಹಮ್ಮಿಕೊಂಡಿದೆ 'ಹೃದಯಪೂರ್ವಕ' (ಪೊದಿಚ್ಚೋರ್) ಊಟದ ಪೊಟ್ಟಣ ವಿತರಣೆ. ಪ್ರಥಮ ಬಾರಿಗೆ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ "ಬಾಳೆ ಎಲೆಯಲ್ಲಿ ಮನೆ ಊಟ" ನೀಡುವ ಮೂಲಕ ಸಾರ್ಥಕಗೊಂಡ ಪ್ರಯೋಗ.

D.Y.F.I ಕೇರಳದಲ್ಲಿ ಹಮ್ಮಿಕೊಂಡಿದೆ 'ಹೃದಯಪೂರ್ವಕ' (ಪೊದಿಚ್ಚೋರ್) ಊಟದ ಪೊಟ್ಟಣ ವಿತರಣೆ. ಪ್ರಥಮ ಬಾರಿಗೆ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ "ಬಾಳೆ ಎಲೆಯಲ್ಲಿ ಮನೆ ಊಟ" ನೀಡುವ ಮೂಲಕ ಸಾರ್ಥಕಗೊಂಡ ಪ್ರಯೋಗ.
ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ "ಪೊದಿ ಚ್ಚೋರ್" ಯೋಜನೆಯು ಡಿ. ವೈ.ಎಫ್.ಐ ಸಂಘಟನೆಯಿಂದ ಕಾರ್ಯಾರಂಭಗೊಂಡಿದೆ. DYFI ಯ ಕಾಸರಗೋಡಿನ 64 ಪ್ರಾದೇಶಿಕ (ಮೇಘಲಾ) ಸಮಿತಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಇಂದು 8 ನೇ ದಿನಕ್ಕೆ ಕಾಲಿರಿಸಿದೆ.
ಇಂದು ಡಿ.ವೈ. ಎಫ್. ಐ ಮಧೂರು ಘಟಕದ ವತಿಯಿಂದ ಕಾಸರಗೋಡು ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಮನೆಯಲ್ಲಿ ತಯಾರಿಸಿ, ಬಾಳೆ ಎಲೆಯಲ್ಲಿ ಕಟ್ಟಿ ತಂದ ಬಿಸಿ ಬಿಸಿ ಮಧ್ಯಾಹ್ನದ ಊಟವನ್ನು ನೀಡಲಾಯಿತು. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮಧೂರಿನ ಯುವಜನ ಸಂಗಾತಿಗಳು ದಿನಗಳ ಹಿಂದೆ ಸಹೃದಯರನ್ನು ಭೇಟಿಯಾಗಿ ತಮ್ಮ ಯೋಜನೆಯನ್ನು ವಿವರಿಸಿದರು.
ಯುವಜನರ ಆಶಯಕ್ಕೆ ವಲಯದ ಜನರು ಸಂತೋಷದಿಂದಲೇ ಕೈ ಜೋಡಿಸಿದರು. ಇಂದು ಬೆಳಗ್ಗೆ ಮನೆ - ಮನೆಗಳಲ್ಲಿ ಬಾಳೆ ಎಲೆಯಲ್ಲಿ ಕಟ್ಟಿದ ಊಟದ ಪೊಟ್ಟಣಗಳು ಸಿದ್ಧವಾದವು.
ಹುರುಪಿನಿಂದಲೇ ಯುವಜನರು ಪೊಟ್ಟಣಗಳನ್ನು ಎಲ್ಲಾ ಮನೆಗಳಿಂದ ಶೇಖರಿಸಿ, ಒಟ್ಟು ಸೇರಿಸಿ ಕಾಸರಗೋಡಿನ ಹೃದಯ ಭಾಗದ ಜನರಲ್ ಆಸ್ಪತ್ರೆಯತ್ತ ಸಾಗಿದರು. ಕಾತರದಿಂದ ಕಾಯುತ್ತಿದ್ದ ರೋಗಿಗಳ ಬಂಧುಗಳಿಗೆ ಪೊಟ್ಟಣಗಳನ್ನು 'ಹೃದಯಪೂರ್ವಕ' ವಿತರಿಸುವಾಗ ಆಹಾರ ನೀಡಿದವರ ಹಾಗೂ ಪಡೆದವರ ಹೃದಯಗಳಲ್ಲಿ ಧನ್ಯತೆಯ ಭಾವನೆ ಮೂಡಿತು. ಸಂಘಟನೆಯ ಕಾರ್ಯದರ್ಶಿ ಸತೀಶ್ ಶೆಟ್ಟಿ, ಅಧ್ಯಕ್ಷ ಕಿಶೋರ್, ಫೈಸಲ್, ಬಶೀರ್, ಶರತ್ ಕಾಲ್ಯಂಗಾಡ್, ಕಬೀರ್, ಬಾಸೀತ್, ಮುಹಾದ್, ಮ್ಯಾಥ್ಯೂಸ್ ಮುಂತಾದವರು ಈ ಯೋಜನೆಗೆ ನೇತೃತ್ವ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.