ಡಿ. 25 ರಿಂದ ಉಡುಪಿ ಪಡು ಕುತ್ಯಾರು ಆನೆಗುಂದಿ ಮಠದಲ್ಲಿ "ಯಕ್ಷಗಾನ ತಾಳಮದ್ದಲೆ ಸಪ್ತಾಹ 2023"
ಡಿಸೆಂಬರ್ 21, 2023
0
ಆನೆಗುಂದಿ ಮಠ : ಡಿ.25ರಿಂದ ಯಕ್ಷಗಾನ ತಾಳಮದ್ದಲೆ ಸಪ್ತಾಹ 2023
ಪಡುಕುತ್ಯಾರು: ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ 2023 ದಶಂಬರ 25ರಿಂದ ದಶಂಬರ 31ರ ವರೆಗೆ ತೃತೀಯ ವರ್ಷದ ಯಕ್ಷಗಾನ ತಾಳಮದ್ದಲೆ ಸಪ್ತಾಹ 2023 ನಡೆಯಲಿದೆ. ಪಡುಕುತ್ಯಾರಿನ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ನಡೆಯುವ ಯಕ್ಷಗಾನ ಸಪ್ತಾಹದಲ್ಲಿ
ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ ಮತ್ತು ಪೂರ್ಣಾನುಗ್ರಹದೊಂದಿಗೆ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುವ 2023ರ ದಶಂಬರ 25 ರಂದು ಅಪರಾಹ್ನ 2.30ಕ್ಕೆ ಯಕ್ಷಗಾನ ಸಪ್ತಾಹ 2023 ರ ಉದ್ಘಾಟನೆಯನ್ನು ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪ ಪ್ರಜ್ವಲನದ ಮೂಲಕ ನೆರವೇರಿಸುವರು. ಆನೆಗುಂದಿ ಪ್ರತಿಷ್ಠಾನ ಮುಂಬಯಿ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ
ಶ್ರೀ ಜಿ.ಟಿ. ಆಚಾರ್ಯ ಮುಂಬೈ ದಿಕ್ಸೂಚಿ ಭಾಷಣ ಮಾಡುವರು. ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ವಿಧಾನ ಸಭಾ ಕ್ಷೇತ್ರ ಶಾಸಕ ಹಾಗೂ ಯಕ್ಷಗಾನ ಕಲಾ ಪೋಷಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಭಾಗವಹಿಸುವರು. ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ಕಳಿ ಚಂದ್ರಯ್ಯ ಆಚಾರ್ಯ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಜನಾರ್ದನ ಆಚಾರ್ಯ ಕೆ. ಉಪಸ್ಥಿತರಿರುವರು. ದಶಂಬರ 31 ಅಪರಾಹ್ನ 2.30ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ
ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ ವಾಸುದೇವ ರಾವ್ ಸುರತ್ಕಲ್, ರುದ್ರಯ್ಯ ಆಚಾರ್ಯ ಕೋಟ, ಸದಾಶಿವ ಆಚಾರ್ಯ ಬೈಲೂರು, ಶಂಕರ ಆಚಾರ್ಯ ಕೊಳ್ಯೂರು, ಭಾಸ್ಕರ್ ಜಿ. ಪೂಜಾರಿ ಕಟಪಾಡಿ, ರಾಘು ಎಸ್., ಗುಜರನ್ ಉಚ್ಚಿಲ, ವಾಮನ ಆಚಾರ್ಯ ಬೋವಿಕ್ಕಾನ ಕಾಸರಗೋಡು ಎಂಬೀ 7 ಮಂದಿ ಕಲಾವಿದರಿಗೆ ಗೌರವಾರ್ಪಣೆ ನಡೆಯಲಿದೆ. ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಸಂಪನಗೊಳ್ಳುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿ. ಶ್ರೀಧರ ಆಚಾರ್ಯ, ವಡೇರಹೋಬಳಿ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರು, ಹಾಗೂ ಯಕ್ಷಗಾನ ಕಲಾ ಪೋಷಕರಾದ ಶ್ರೀ ಎಂ. ಮಿಥುನ್ ರೈ, ಮಂಗಳೂರು ಭಾಗವಹಿಸುವರು. ಅಸೆಟ್ ಅಧ್ಯಕ್ಷ ಶ್ರೀ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ ,ಶ್ರೀ ಸರಸ್ವತೀ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಶ್ರೀ ಬೆಳುವಾಯಿ ಸುಂದರ ಆಚಾರ್ಯ, ಮಂಗಳೂರು, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷ ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಆನೆಗುಂದಿ ಪ್ರತಿಷ್ಠಾನದ ಹಿರಿಯ ವಿಶ್ವಸ್ಥರಾದ ಶ್ರೀ ಪಿ.ವಿ. ಗಂಗಾಧರ ಆಚಾರ್ಯ ಉಡುಪಿ, ಆನೆಗುಂದಿ ಪ್ರತಿಷ್ಠಾನದ ಕೋಶಾಧಿಕಾರಿ ಶ್ರೀ ಅರವಿಂದ ವೈ. ಆಚಾರ್ಯ ಬೆಳುವಾಯಿ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ಶ್ರೀ ಸರಸ್ವತೀ ಪೂರ್ವ ವಿದ್ಯಾರ್ಥಿ ವೃಂದದ ಅಧ್ಯಕ್ಷ ಶ್ರೀ ಕೇಶವ ಶರ್ಮಾ ಇರುವೈಲು ಉಪಸ್ಥಿತರಿರುವರು. ಯಕ್ಷಗಾನ ತಾಳಮದ್ದಲೆ ಸಪ್ತಾಹ 2023 ಸಂಯೋಜಕ ಶ್ರೀ ಜನಾರ್ಧನ ಆಚಾರ್ಯ ಕನ್ಯಾನ, ಆನೆಗುಂದಿ ಶ್ರೀ ಸರಸ್ವತೀ ಗೋವು - ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ (ರಿ.) ಪ್ರಧಾನ ಕಾರ್ಯದರ್ಶಿ, ಶ್ರೀ ಡಿ. ಸುರೇಶ್ ಆಚಾರ್ಯ, ಕಟಪಾಡಿ , ಅಸೆಟ್ ಪ್ರಧಾನ ಕಾರ್ಯದರ್ಶಿ ಶ್ರೀ ಗುರುರಾಜ ಆಚಾರ್ಯ ಕೆ.ಜೆ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ಶ್ರೀ ಸರಸ್ವತೀ ಪೂರ್ವ ವಿದ್ಯಾರ್ಥಿ ವೃಂದದ ಸಹ ಕಾರ್ಯದರ್ಶಿ ಶ್ರೀ ಮನೋಜ್ ಶರ್ಮಾ, ಪಡುಕುತ್ಯಾರು ,
ಶ್ರೀಮತಿ ರಮಾ ನವೀನ್ ಆಚಾರ್ಯ ಕಾರ್ಕಳ, ಪ್ರಧಾನ ಕಾರ್ಯದರ್ಶಿ, ಶ್ರೀ ಸರಸ್ವತೀ ಮಾತೃಮಂಡಳಿ ಪಡುಕುತ್ಯಾರು ನಿರ್ವಹಣೆ : ಶ್ರೀ ಐ. ಲೋಲಾಕ್ಷ ಶರ್ಮಾ ಪ್ರಧಾನ ಕಾರ್ಯದರ್ಶಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ, ಪಡುಕುತ್ಯಾರು ಇವರು ಪ್ರತಿ ದಿನಗಳ ಕಾರ್ಯಕ್ರಮದ ವ್ಯವಸ್ಥೆಯ ನೇತೃತ್ವವನ್ನು ನೀಡುವರು.
ಯಕ್ಷಗಾನ ತಾಳಮದ್ದಳೆ ಸಪ್ತಾಹ 2023 ವಿವರ ಇಂತಿದೆ
ದಿನಾಂಕ: 25.12.2023
ಅಪರಾಹ್ನ ಘಂಟೆ 3.00
ತಾಳಮದ್ದಲೆ :ಪ್ರಸಂಗ ‘ಕಚದೇವಯಾನಿ’
ಹಿಮ್ಮೇಳ : ಭಾಗವತರು : ಶ್ರೀ ಕೆ.ಜೆ. ಗಣೇಶ್, ಮದ್ದಳೆ : ಶ್ರೀ ಕೆ.ಜೆ. ಸುದೀಂದ್ರ, ಚೆಂಡೆ : ಶ್ರೀ ಕೆ.ಜೆ. ಕೃಷ್ಣ
ಕಲಾವಿದರು : ಸರ್ಪಂಗಳ ಶ್ರೀ ಈಶ್ವರ ಭಟ್, ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ಎಂ.ಕೆ. ರಮೇಶ ಆಚಾರ್ಯ, ಶ್ರೀ ವಾಸುದೇವ ಆಚಾರ್ಯ ಕುಳಾಯಿ, ಶ್ರೀ ಗಂಗಾಧರ ಕಳತ್ತೂರು
ದಶಂಬರ 26 : ತಾಳಮದ್ದಲೆ :ಪ್ರಸಂಗ
ವಾಲಿ ಮೋಕ್ಷ’ ಹಿಮ್ಮೇಳ : ಭಾಗವತರು : ಗಣೇಶ್ ಬಿಲ್ಲಾಡಿ, ಮದ್ದಳೆ : ಕೆ.ಜೆ. ಸುದೀಂದ್ರ, ಚೆಂಡೆ : ಕೆ.ಜೆ. ದೀಪ್ತ ಕಲಾವಿದರು : ಶ್ರೀಮತಿ ಸುಲೋಚನಾ ವಿ. ರಾವ್, ಶ್ರೀಮತಿ ಸುಮಿತ್ರಾ ಶಶಿಕಾಂತ ಕಲ್ಲೂರಾಯ, ಶ್ರೀ ಎಸ್. ವಾಸುದೇವ ರಾವ್, ಶ್ರೀ ಅಶೋಕ ನಾಯಕ್ ಸಾಂತೂರು, ಕೆ. ಜನಾರ್ದನ ಆಚಾರ್ಯ
ದಶಂಬರ 27 : ತಾಳಮದ್ದಲೆ :ಪ್ರಸಂಗ
'ಚೂಡಾಮಣಿ’
ಹಿಮ್ಮೇಳ : ಭಾಗವತರು : ಶ್ರೀ ಕೆ.ಜೆ. ಗಣೇಶ್, ಮದ್ದಳೆ : ಶ್ರೀ ಕೆ.ಜೆ. ಸುದೀಂದ್ರ, ಚೆಂಡೆ : ಶ್ರೀ ಕೆ.ಜೆ. ಕೃಷ್ಣ ಕಲಾವಿದರು : ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ಎಂ.ಕೆ. ರಮೇಶ ಆಚಾರ್ಯ, ಶ್ರೀ ಗಣೇಶ್ ಶೆಟ್ಟಿ ಕನ್ನಡಿ ಕಟ್ಟೆ, ಶ್ರೀ ಕೆ. ಜನಾರ್ದನ ಆಚಾರ್ಯ, ಶ್ರೀ ಅಶೋಕ ನಾಯಕ್ ಸಾಂತೂರು
ದಶಂಬರ 28 : ತಾಳಮದ್ದಲೆ :ಪ್ರಸಂಗ
‘ರಾವಣ ವಧೆ’
ಹಿಮ್ಮೇಳ : ಭಾಗವತರು : ಶ್ರೀ ಆನಂದ ಪೂಜಾರಿ ಕಟಪಾಡಿ, ಮದ್ದಳೆ : ಚಂದ್ರ ಶೇಖರ ಆಚಾರ್ಯ, ಚೆಂಡೆ : ಪ್ರಭಾಕರ ಹೇರೂರು ಕಲಾವಿದರು : ಶ್ರೀ ಶಂಬು ಶರ್ಮಾ ವಿಟ್ಲ, ರಾಧಾಕೃಷ್ಣ ಕಲ್ಚಾರ್, ಶ್ರೀ ಎಂ.ಕೆ. ರಮೇಶ ಆಚಾರ್ಯ, ಶ್ರೀ ರಂಗನಾಥ ಭಟ್
ದಶಂಬರ 29 : ತಾಳಮದ್ದಲೆ :ಪ್ರಸಂಗ
ಶಿವಭಕ್ತ ವೀರಮಣಿ’ ಹಿಮ್ಮೇಳ : ಭಾಗವತರು: ಶ್ರೀ ದೇವರಾಜ ಆಚಾರ್ಯ ಐಕಳ, ಮದ್ದಳೆ: ಶ್ರೀ ಯೋಗೀಶ್ ಆಚಾರ್ಯ ಉಲೇಪಾಡಿ, ಚೆಂಡೆ : ಶ್ರೀ ಅಶೋಕ ಆಚಾರ್ಯ ಉಲೇಪಾಡಿ ಕಲಾವಿದರು : ಶ್ರೀಮತಿ ಪದ್ಮಾ ಕೆ. ಆಚಾರ್ಯ, ಶ್ರೀಮತಿ ಜಯಲಕ್ಷ್ಮೀ ವಿ. ಭಟ್, ಶ್ರೀಮತಿ ಶುಭಾ ಪಿ. ಆಚಾರ್ಯ, ಶ್ರೀಮತಿ ಹಿರಾ ಉದಯ, ಶ್ರೀಮತಿ ಪ್ರೇಮಾ ನೂರಿತ್ತಾಯ
ದಶಂಬರ 30: ತಾಳಮದ್ದಲೆ :ಪ್ರಸಂಗ
ಕೃಷ್ಣ ಸಂಧಾನ
ಹಿಮ್ಮೇಳ : ಭಾಗವತರು : ಶ್ರೀ ಮೋಹನ ಕಲಂಬಾಡಿ, ಮದ್ದಳೆ: ರವಿರಾಜ್ ಜೈನ್, ಚೆಂಡೆ : ವಿಕಾಸ್ ಅಜೆಕಾರ್ ಕಲಾವಿದರು : ಶ್ರೀ ವಾಸುದೇವ ಆಚಾರ್ಯ ಕುಳಾಯಿ, ಶ್ರೀ ಚಂದ್ರಶೇಖರ ಕೊಡಿಪಾಡಿ, ಶ್ರೀ ಕೆ. ಜನಾರ್ದನ ಆಚಾರ್ಯ ದಶಂಬರ 31 ಘಂಟೆ 3.30ರಿಂದ ತಾಳಮದ್ದಲೆ :ಪ್ರಸಂಗ : ಸುಧನ್ವಾರ್ಜುನ ಹಿಮ್ಮೇಳ : ಭಾಗವತರು : ಶ್ರೀ ಕೆ.ಜೆ. ಗಣೇಶ್, ಮದ್ದಳೆ : ಶ್ರೀ ಕೆ.ಜೆ. ಸುದೀಂದ್ರ, ಚೆಂಡೆ : ಶ್ರೀ ಕೆ.ಜೆ. ಕೃಷ್ಣ. ಕಲಾವಿದರು : ಶ್ರೀ ಶಂಬು ಶರ್ಮಾ ವಿಟ್ಲ, ಶ್ರೀ ಸದಾಶಿವ ಆಳ್ವ ತಲಪಾಡಿ, ಶ್ರೀ ಎಂ.ಕೆ. ರಮೇಶ ಆಚಾರ್ಯ, ಶ್ರೀ ಶಂಕರ ಆಚಾರ್ಯ, ಕೊಳ್ಯೂರು
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ನೇತೃತ್ವದಲ್ಲಿ
ಜಗದ್ಗುರುಗಳವರ ಆಶಯದಂತೆ ಮಹಾಸಂಸ್ಥಾನದಿಂದ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಮತ್ತು ಕಲಾ ಸಾಹಿತ್ಯ ಸಾಂಸ್ಕೃತಿಕ ಪ್ರತಿಭೆಗಳ ಗುರುತಿಸುವಿಕೆ ಮತ್ತು ಪ್ರೋತ್ಸಾಹ ನೀಡುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮಹಾ ಸಂಸ್ಥಾನದಲ್ಲಿ ಸಮಾಜದ ಹಿರಿಯ ಮತ್ತು ಕಿರಿಯ ಬಂಧುಗಳಲ್ಲಿ ಸುಪ್ತವಾಗಿರುವ ಸಂಗಿತ, ನಾಟ್ಯ, ಸಾಹಿತ್ಯ, ಶಿಲ್ಪ, ಲಲಿತಕಲೆ, ಜಾನಪದ, ಯಕ್ಷಗಾನ, ಭಜನೆ ಮುಂತಾದ ಪ್ರಕಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಲಾ ಸಾಹಿತ್ಯ ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ತರಬೇತಿ ನೀಡುವ ಯೋಜನೆಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಇದೀಗಾಗಲೇ ತಿಂಗಳ ಮೂರನೇ ಗುರುವಾರ ಅಪರಾಹ್ನ ಯಕ್ಷಗಾನ ತಾಳಮದ್ದಲೆಯು ನಡೆಯುತ್ತಿದೆ. 2021ರಿಂದ ಯಕ್ಷಗಾನ ಸಪ್ತಾಹವನ್ನು ಮಹಾಸಂಸ್ಥಾನದಲ್ಲಿ ಆರಂಭಗೊಂಡಿದ್ದು ಪ್ರತಿ ವರ್ಷ ಯಕ್ಷಗಾನವನ್ನು ಉಳಿಸುವ ಮತ್ತು ಬೆಳೆಸುವ ಹಾಗೆಯೇ ಕಲಾವಿದರನ್ನು ಗುರುತಿಸಿ ಗೌರವಿಸುವ ಯಕ್ಷ ಸೇವೆಯನ್ನು ಮಹಾಸಂಸ್ಥಾನದಿಂದ ನಡೆಸಲಾಗುತ್ತಿದೆ. ಇದೀಗ 3 ನೇ ವರ್ಷದಲ್ಲಿ
ಈ ವರ್ಷ ಮಹಾಭಾರತ - ರಾಮಾಯಣ ಸಮ್ಮಿಲನದ ಯಕ್ಷಗಾನ ತಾಳಮದ್ದಳೆ ಸಪ್ತಾಹ 2023 ನ್ನು ನಡೆಸಲಾಗುತ್ತಿದೆ. ಆನೆಗುಂದಿ ಕಲಾ ಸಾಹಿತ್ಯ ಸಾಂಸ್ಕೃತಿಕ ಅಭಿಯಾನಗಳಿಗೆ ಸರ್ವ ರೀತಿಯಲ್ಲಿಯೂ ಪ್ರೋತ್ಸಾಹ ನೀಡಬೇಕಾಗಿ ಆನೆಗುಂದಿ ಪ್ರತಿಷ್ಠಾನ ಕಟಪಾಡಿ ಪಡುಕುತ್ಯಾರುವಿನ ಪ್ರಧಾನ ಕಾರ್ಯದರ್ಶಿ ಶ್ರೀ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



