ಪುತ್ತಿಗೆ ಆಚಾರಿಮೂಲೆ ನಿವಾಸಿ, ಬಡಗಿ, ಗೋಪಾಲಕೃಷ್ಣ ಆಚಾರ್ಯ ಯಾನೆ ಮಾಲಿಂಗ ಆಚಾರ್ಯ (75) ನಿಧನ.
ಡಿಸೆಂಬರ್ 02, 2023
0
ಪುತ್ತಿಗೆ ಆಚಾರಿಮೂಲೆ ನಿವಾಸಿ, ಬಡಗಿ, ಗೋಪಾಲಕೃಷ್ಣ ಆಚಾರ್ಯ ಯಾನೆ ಮಾಲಿಂಗ ಆಚಾರ್ಯ (75) ನಿಧನ.
ಕುಂಬಳೆ: ಪುತ್ತಿಗೆ ಆಚಾರಿ ಮೂಲೆ ನಿವಾಸಿ ದಿ. ಪುರೋಹಿತ ಅಪ್ಪಣ್ಣ ಆಚಾರ್ಯ - ದಿ. ಲಕ್ಷ್ಮಿ ದಂಪತಿಯ ಪುತ್ರ, ಬಡಗಿ ವೃತ್ತಿ ಮಾಡುತ್ತಿದ್ದ ಗೋಪಾಲಕೃಷ್ಣ ಆಚಾರ್ಯ ಯಾನೆ ಮಾಲಿಂಗ ಆಚಾರ್ಯ (75) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ಅಪರಾಹ್ನ 12:30 ಗಂಟೆಗೆ ಸ್ವ - ಗೃಹದಲ್ಲಿ ನಿಧನರಾದರು. ಮಧೂರು ಶ್ರೀ ಕಾಳಿಕಾಂಬ ಮಠದ ಸಮಿತಿ ಸದಸ್ಯರಾಗಿದ್ದ ಮೃತರು, ಪತ್ನಿ ವೇದಾವತಿ, ಮಕ್ಕಳಾದ ಮಮತಾ, ಮಧೂರು ಶ್ರೀ ಕಾಳಿಕಾಂಬ ಮಠದ ಅರ್ಚಕ ಪುರೋಹಿತ ಮೌನೇಶ್ ಆಚಾರ್ಯ ಪುತ್ತಿಗೆ (ಕವಿ), ಬಾಲಸುಬ್ರಹ್ಮಣ್ಯ ಆಚಾರ್ಯ, ಹರಿಣಾಕ್ಷಿ, ಅಳಿಯಂದಿರಾದ ಜನಾರ್ಧನ ಆಚಾರ್ಯ ಪುತ್ತಿಗೆ, ಸತೀಶ್ ಆಚಾರ್ಯ ಬದಿಯಡ್ಕ, ಏಕ ಸಹೋದರಿ ರೋಹಿಣಿ ಆಚಾರ್ಯ ಗುಡ್ಡೆಮನೆ ಪುತ್ತೂರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಏಕ ಸಹೋದರ ಸೀತಾರಾಮ ಆಚಾರ್ಯ ಪುತ್ತಿಗೆ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ 5:30 ಗಂಟೆಗೆ ಮನೆ ಪರಿಸರದಲ್ಲಿ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ. ಮೃತರ ನಿಧನಕ್ಕೆ ಮಧೂರು ಶ್ರೀ ಕಾಳಿಕಾಂಬ ಮಠದ ಆಡಳಿತ ಸಮಿತಿ, ಮಹಿಳಾ ಸಂಘ, ಭಜನಾ ಸಂಘ, ಯುವಕ ಸಂಘ, ಪುತ್ತಿಗೆಯ ವಿಶ್ವಕರ್ಮ ಸಮಾಜ ಬಾಂಧವರು ಸಂತಾಪ ಸೂಚಿಸಿದ್ದಾರೆ.


