Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ವರ್ಕಾಡಿ ಬೋಳದಪದವು ಶ್ರೀ ಬ್ರಹ್ಮ ಮೊಗೇರ ಮತ್ತು ಕೊರಗಜ್ಜ ಗುಳಿಗ ದೈವಗಳ ಸಾನಿಧ್ಯದಲ್ಲಿ ಶ್ರೀ ಬ್ರಹ್ಮ ಮೊಗೇರ ದೈವಗಳ "ಪವಿತ್ರ ಕಲ್ಲನ್ನು" ಮೂಲಸ್ಥಾನದಿಂದ ಆರಾಧನಾ ಸ್ಥಳಕ್ಕೆ ಸ್ಥಳಾಂತರಿಸುವ ಶೋಭಾಯಾತ್ರೆಯು ಈ ತಿಂಗಳ 31 ರಂದು.

ವರ್ಕಾಡಿ ಬೋಳದಪದವು ಶ್ರೀ ಬ್ರಹ್ಮ ಮೊಗೇರ ಮತ್ತು ಕೊರಗಜ್ಜ ಗುಳಿಗ ದೈವಗಳ ಸಾನಿಧ್ಯದಲ್ಲಿ ಶ್ರೀ ಬ್ರಹ್ಮ ಮೊಗೇರ ದೈವಗಳ "ಪವಿತ್ರ ಕಲ್ಲನ್ನು" ಮೂಲಸ್ಥಾನದಿಂದ ಆರಾಧನಾ ಸ್ಥಳಕ್ಕೆ ಸ್ಥಳಾಂತರಿಸುವ ಶೋಭಾಯಾತ್ರೆಯು ಈ ತಿಂಗಳ 31 ರಂದು.
ಮಂಜೇಶ್ವರ: ಮಂಜೇಶ್ವರ: ವರ್ಕಾಡಿ ಬೋಳದಪದವು ಶ್ರೀ ಬ್ರಹ್ಮ ಮೊಗೇರ ಮತ್ತು ಕೊರಗಜ್ಜ ಗುಳಿಗ ದೈವಗಳ ಸಾನಿಧ್ಯದಲ್ಲಿ ಶ್ರೀ ಬ್ರಹ್ಮ ಮೊಗೇರ ದೈವಗಳ ಪವಿತ್ರ ಕಲ್ಲನ್ನು ಮೂಲಸ್ಥಾನದಿಂದ ಆರಾಧನಾ ಸ್ಥಳಕ್ಕೆ ಸ್ಥಳಾಂತರಿಸುವ ಶೋಭಾಯಾತ್ರೆಯು ಈ ತಿಂಗಳ 31 ರಂದು ಬೆಳಗ್ಗೆ 8 ಕ್ಕೆ ನಡೆಯಲಿದೆ. ಬೋಳದ ಪದವಿನ ಮೊಗೇರ ಸಮುದಾಯದವರು ಅನಾಧಿಕಾಲದಲ್ಲಿ ಪಾವೂರು ಗ್ರಾಮದ ಬಲ್ಲೂರು ಎಂಬ ಪ್ರದೇಶದಲ್ಲಿ ನೆಲೆಸಿದ್ದರು. ಅಲ್ಲಿಯೇ ಶ್ರೀ ಬ್ರಹ್ಮ ಮುಗೇರ ದೈವಗಳ ಆರಾಧನೆಯನ್ನು ಮಾಡಿಕೊಂಡು ಬರುತ್ತಿದ್ದರು. ಕಾಲಕ್ರಮೇಣ ಅವರ ವಾಸ ಸ್ಥಳವನ್ನು ಬೋಳದ ಪದವಿಗೆ ಸ್ಥಳಾಂತರಸಿದ್ದರು. ಈ ಸಮಯದಲ್ಲಿ ಆರಾಧಿಸಿ ಕೊಂಡು ಬರುತ್ತಿದ್ದ
ಶ್ರೀ ದೈವಗಳ ಪವಿತ್ರ ಕಲ್ಲನ್ನು ಮೂಲದಲ್ಲಿಯೇ ಬಿಟ್ಟು ಬೋಳದ ಪದವಿನಲ್ಲಿ ಗುಡಿಯನ್ನು ನಿರ್ಮಿಸಿ ಆರಾಧಿಸಿಕೊಂಡು ಬರುತ್ತಿದ್ದರು. ಕಾಲಕ್ರಮೇಣ ಶ್ರೀ ದೈವಗಳ ಗುಡಿಯು ಅಜೀರ್ಣಾವಸ್ಥೆಗೆ ತಲುಪಿ ಸಮುದಾಯದವರಿಗು ದೋಷಗಳು ಕಂಡುಬಂದಿರುವುದರಿಂದ ಪ್ರಶ್ನೆ ಚಿಂತನೆ ನಡೆಸಿದಾಗ ಶ್ರೀದೈವಗಳ ಶಕ್ತಿಯನ್ನು ಮೂಲದಲ್ಲಿ ಬಿಟ್ಟು ಬಂದಿರುವುದರಿಂದ ಇಷ್ಟೆಲ್ಲಾ ಅನಾಹುತಗಳು ನಡೆಯಲು ಕಾರಣ, ಆ ಪವಿತ್ರ ಕಲ್ಲನ್ನು ಮೂಲ ಸ್ಥಾನದಿಂದ ಆರಾಧನ ಸ್ಥಳಕ್ಕೆ ತಂದರೇ ದೋಷವು ಪರಿಹಾರವಾಗುವುದೆಂದು ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಿರುತ್ತದೆ. ಆ ಪ್ರಕಾರ ವರ್ಕಾಡಿ ಶ್ರೀ ದಿನೇಶ್ ಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಮೂಲ ಸ್ಥಾನದಿಂದ ಈ ತಿಂಗಳ 31 ರಂದು ಆದಿತ್ಯವಾರ ಬೆಳಿಗ್ಗೆ 8:00 ಗೆ ಬಹಳ ವೈಭವಯುತವಾಗಿ ಶೋಭಾ ಯಾತ್ರೆಯ ಮೂಲಕ ಪವಿತ್ರ ಕಲ್ಲನ್ನು ಬೋಳದ ಪದವಿಗೆ ತರುವುದೆಂದು ತೀರ್ಮಾನಿಸಲಾಗಿದೆ. ಶ್ರೀ ದೈವಗಳ ಪವಿತ್ರ ಕಲ್ಲನ್ನು ಶೋಭ ಯಾತ್ರೆಯಲ್ಲಿ ಬ್ಯಾಂಡ್, ವಾದ್ಯ, ಭಜನೆ, ಕುಣಿತ ಭಜನೆಗಳ ಮೂಲಕ ಮುಡಿಮಾರು, ಕೆದುಂಬಾಡಿ, ನೆತ್ತಿಲಪದವು, ಬಾವಳಿಗುಳಿ, ದಾರಿಯಾಗಿ ಬೋಳದ ಪದವಿಗೆ ತರುವುದು, ಭಕ್ತಾಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶೋಭಾ ಯಾತ್ರೆಯನ್ನು ವೈಭವಯುತವಾಗಿ ನಡೆಸಬೇಕೆಂದು ಜೀರ್ಣೋದ್ಧಾರ ಸಮಿತಿ ಮತ್ತು ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.