ಕುಂಜತೂರು: ಮಂಜೇಶ್ವರ ವಿ ಸಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಯಾಗಿ ಘೋಷಣೆ ಯಾದ ಬಳಿಕ ಕೆ ಸುರೇಂದ್ರನ್ ಮಂಜೇಶ್ವರ ತೂಮಿನಾಡು ನಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಭರ್ಜರಿ ಸ್ವಾಗತ ನೀಡಲಾಯಿತು.
ಹುಲಿ ವೇಷದ ತಾಸೆ ಯೊಂದಿಗೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.
ಸಭೆಯನ್ನು ಉದ್ದೇಶಿಸಿ ಕೆ ಸುರೇಂದ್ರನ್ ಮಾತನಾಡಿ ಮಂಜೇಶ್ವರ ದ ಸಮಗ್ರ ಅಭಿವೃದ್ಧಿ ಬಿಜೆಪಿ ಯಿಂದ ಮಾತ್ರ ಸಾಧ್ಯ.
ಕಳೆದ 40ವರ್ಷ ಗಳಿಂದ ಮಂಜೇಶ್ವರ ದಲ್ಲಿ ಗೆದ್ದವರೆಲ್ಲ ಮಂಜೇಶ್ವರ ವನ್ನು ಅಭಿವೃದ್ಧಿ ಇಲ್ಲದ, ಪ್ರದೇಶವನ್ನಾಗಿ ಮಾಡಿದ್ದಾರೆ.
ಕೇಂದ್ರೀದಲ್ಲಿ ಮೋದಿ ಬಿಜೆಪಿ ಆಡಳಿತ ಇರುವಾಗ ಮಂಜೇಶ್ವರ ದಲ್ಲಿ ಬಿಜೆಪಿ ಶಾಸಕ ಇದ್ರೆ ಅದು ಮಂಜೇಶ್ವರ ದ ಸಮಗ್ರ ಅಭಿವೃದ್ಧಿ ಗೆ ಬೇಕಾದ ಆಧುನಿಕ, ಉದ್ಯೋಗ ಆಧಾರಿತ, ಸ್ಥಳೀಯ ಕನ್ನಡ ಭಾಷಾ ಮಾತನಾಡುವ ಜನರ ಬೇಡಿಕೆಗಳಿಕೆ ಸ್ಪಂದಿಸುವ ಕಾರ್ಯ ಬಿಜೆಪಿ ಮಾಡಲಿದೆ ಮಂಜೇಶ್ವರದ ಸಮಗ್ರ ಅಭಿವೃದ್ಧಿ ಗೆ ಬೇಕಾದ ಪ್ರಾಜೆಕ್ಟ್ ಬಿಜೆಪಿ ಜನರ ಮುಂದೆ ಇಡಲಿದೆ ಎಂದು ಅವರು ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಶಾಸಕ ಅಶ್ರಫ್ ಅವರ ಬೇಜವಾಬ್ದಾರಿ ತನ, ಕಳೆದ 5ವರ್ಷ ಮಂಜೇಶ್ವರ ಕ್ಕೆ ತಟ್ಟಿದ ಶಾಪ ಮೋಕ್ಷ ಕ್ಕೆ ಬಿಜೆಪಿ ಗೆ ಮತ ನೀಡಿ ಎಂದು ಕರೇ ಕೊಟ್ಟರು.
ಮುಖಂಡರಾದ ಯಾದವ ಬಡಾಜೆ ಪದ್ಮನಾಭ ಕಡಪರ ನ್ಯಾ ನವೀನ್ ರಾಜ್, ಸುರೇಶ್ ಶೆಟ್ಟಿ, ಕಾರ್ತಿಕ್ ಶೆಟ್ಟಿ,ಪವನ್ ಅಂಜರೆ,ಆಶಾಲತಾ, ಸಂತೋಷ್ ಅಡ್ಕ, ಮೊದಲದವರು ಉಪಸ್ಥಿತಿ ಇದ್ದರು.
