ಪಕ್ಷದ ಕಾರ್ಯಾಲಯ ಕಾರ್ಯಕರ್ತರ ದೇವಾಲಯ - ರವೀಶ ತಂತ್ರಿ ಕುಂಟಾರ್.
ಜುಲೈ 14, 2025
0
ಪಕ್ಷದ ಕಾರ್ಯಾಲಯ ಕಾರ್ಯಕರ್ತರ ದೇವಾಲಯ - ರವೀಶ ತಂತ್ರಿ ಕುಂಟಾರ್.
ವರ್ಕಾಡಿ: ಕಾರ್ಯಕರತರ ಶ್ರಮಕ್ಕೆ ಬೆಲೆ ಸಿಗುತ್ತೆ, ಕಾರ್ಯಕರ್ತರು ನಾಯಕರಾಗಿ ಬೆಳೆಯಬೇಕು, ಸಂಘಟನೆ ಕಾರ್ಯಕರ್ತರುಗಳಿಗೆ ಪಕ್ಷದ ಕಾರ್ಯಾಲಯ ದೇವಾಲಯದಂತೆ ಪವಿತ್ರವಾದದ್ದು ಎಂದು ವರ್ಕಾಡಿ ಪಂಚಾಯತ್ ಬಿಜೆಪಿ ಪಕ್ಷದ ನೂತನ ಕಾರ್ಯಾಲಯ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶ್ರೀ ರವೀಶ್ ತಂತ್ರಿ ಕುಂಟರು ನುಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಧ್ವಜಾರೋಹಣ ಮಾಡಿದರು. ನೇತಾರರಾದ: ಭಾಸ್ಕರ್ ಪೊಯ್ಯೇ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಮುಖಂಡರಾದ ವಿಜಯ್ ಕುಮಾರ್ ರೈ, ಸುಧಾಮ ಗೊಸಾಡ, ದೂಮಪ್ಪ ಶೆಟ್ಟಿ, ಹರಿಶ್ಚಂದ್ರ ಮಂಜೇಶ್ವರ, ಸತಿಶ್ಚಂದ್ರ ಭಂಡಾರಿ, ಕೆ.ವಿ ಭಟ್, ಯತೀರಾಜ್ ಶೆಟ್ಟಿ, ತುಳಸಿ ಕುಮಾರಿ, ಆನಂದ ತಚ್ಚಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ಮಾತನಾಡಿದರು,
ಗೋಪಾಲ್ ಶೆಟ್ಟಿ, ನಾಗಪ್ಪ, ಜೀವನ್, ವಿವೇಕಾನಂದ, ಜಗದೀಶ್ ಚೆಂಡ್ಲಾ, ನೇತೃತ್ವ ನೀಡಿದರು. ಜನಪ್ರತಿನಿದಿಗಳು, ಹಿರಿಯ ನೇತಾರರು, ಕಾರ್ಯಕರ್ತರು ಉಪಸ್ಥಿತರಿದ್ದರು. ಗೋಪಿನಾಥ್ ವಂದೇ ಮಾತರಂ ಹಾಡಿದರು, ರಕ್ಷನ್ ಅಡಕಲಾ ಸ್ವಾಗತಿಸಿ, ನಾಗೇಶ್ ಬಳ್ಳೂರ್ ವಂದಿಸಿದರು.




