Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ದ 17 ನೇ ಸಂಸ್ಥಾಪನಾ ದಿನಾಚರಣೆ. ಬಂಗ್ರಮಂಜೇಶ್ವರದಲ್ಲಿ ಧ್ವಜಾರೋಹಣದೊಂದಿಗೆ ಸರಕಾರಿ ಶಾಲೆಗೆ ತೆರಳುವ ಹದೆಗೆಟ್ಟ ರಸ್ತೆಯಲ್ಲಿ ಶ್ರಮದಾನ.

ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ದ 17 ನೇ ಸಂಸ್ಥಾಪನಾ ದಿನಾಚರಣೆ. ಬಂಗ್ರಮಂಜೇಶ್ವರದಲ್ಲಿ ಧ್ವಜಾರೋಹಣದೊಂದಿಗೆ ಸರಕಾರಿ ಶಾಲೆಗೆ ತೆರಳುವ ಹದೆಗೆಟ್ಟ ರಸ್ತೆಯಲ್ಲಿ ಶ್ರಮದಾನ.
ಮಂಜೇಶ್ವರ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ದ 17 ನೇ ಸಂಸ್ಥಾಪನಾ ದಿನಾಚರಣೆಯನ್ನು (ಜೂನ್ 21) ಇಂದು ದೇಶದಾಧ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿದ್ದು, "ಸ್ವಾಭಿಮಾನಿ ರಾಜಕೀಯದ ಹದಿನೇಳು ವರ್ಷಗಳು" ಎಂಬ ಘೋಷಣೆಯೊಂದಿಗೆ 'ಸ್ವತಂತ್ರ ರಾಜಕಾರಣದತ್ತ ಮುನ್ನಡೆಯೋಣ' ಎಂಬ ಸಂಕಲ್ಪದೊಂದಿಗೆ ಈ ದಿನವನ್ನು ರಾಷ್ಟ್ರಾದ್ಯಂತ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಕಾಸರಗೋಡು ಜಿಲ್ಲೆಯಲ್ಲಿ ಬೂತ್ ಮಟ್ಟದಿಂದ ಜಿಲ್ಲಾ ಸಮಿತಿಯ ವರೆಗಿನ ಎಲ್ಲಾ ಸ್ಥರಗಳಲ್ಲೂ ಪಕ್ಷದ ಧ್ವಜಾರೋಹಣ, ಸಿಹಿತಿಂಡಿ ವಿತರಣೆ, ಸಾರ್ಜಿಜನಿಕ ರಸ್ತೆ, ಚರಂಡಿ, ಶಾಲಾ ವಠಾರ, ಆಸ್ಪತ್ರೆ ವಠಾರ ಸ್ವಚ್ಚತೆ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವುದು, ಆರೋಗ್ಯ ಶಿಬಿರ, ಬಡವರಿಗೆ ಆಹಾರ ಕಿಟ್ ವಿತರಣೆಯಂತಹ ಸಾಮಾಜಿಕ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಎಸ್.ಡಿ.ಪಿ.ಐ ಬಂಗ್ರ ಮಂಜೇಶ್ವರ ಬ್ರಾಂಚ್ ಸಮಿತಿ ವತಿಯಿಂದ ನಡೆದ ಸ್ಥಾಪನಾ ದಿನಾಚರಣೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ವೇಲ್ಪೆರ್ ಸ್ಟ್ಯಾಂಡಿಂಗ್ ಕಮಿಟಿ ಚೆಯರ್ ಮೆನ್ ಹಮೀದ್ ಹೊಸಂಗಡಿ ಧ್ವಜಾರೋಹಣಗೊಳಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಡಾಮರಿಕರಣಗೊಳ್ಳದೆ ಹದೆಗೆಟ್ಟ ಬಂಗ್ರಮಂಜೇಶ್ವರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ತೆರಳುವ ರಾಮತ್ತ ಮಜಾಲ್ ನಿಂದ ಬಂಗ್ರಮಂಜೇಶ್ವರದ ವರೆಗಿನ ರಸ್ತೆಯನ್ನು, ಬ್ಯುಲ್ದೊಜರ್ ಬಳಸಿ, ಶ್ರಮದಾನದ ಮೂಲಕ ಸಂಚಾರ ಯೋಗ್ಯಗೊಳಿಸಿದರು.
ವಾಹನ ಸಂಚಾರಕ್ಕೆ ಹಾಗೂ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ತೊಡಕುಂಟಾಗುವ ರೀತಿಯಲ್ಲಿ ರಸ್ತೆಯ ಅಕ್ಕ ಪಕ್ಕದಲ್ಲಿ ಬೆಳೆದಿರುವ ಕಾಡು ಪೊದೆಗಳನ್ನು ಕಡಿದು ತೆರವುಗೊಳಿಸಿದರು.
ಶ್ರಮದಾನಲ್ಲಿ ಬ್ರಾಂಚ್ ಅಧ್ಯಕ್ಷರಾದ ನಿಸಾರ್ ರಾಮತ್ತ ಮಜಾಲ್, ಪಧಾದಿಕಾರಿಗಳಾದ: ಯಾಕೂಬ್ ಹೊಸಂಗಡಿ, ರಿನಾಬ್ ಕಜೆ, ಖಲೀಲ್, ಅನ್ಸಾರ್, ಬದ್ರುದ್ದಿನ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.