Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಪುತ್ತೂರಿನಲ್ಲಿ ಮೇಳೈಸಿದ ಸಾಹಿತ್ಯ,ಗಾನ ನೃತ್ಯ ವೈಭವ. ಸಾಹಿತಿ, ಸಂಘಟಕಿ, ಶಿಕ್ಷಕಿ ಬೊಳುವಾರು ನಿವಾಸಿ ಡಾ. ಶಾಂತಾ ಪುತ್ತೂರುರವರಿಗೆ "ಪೊಟ್ಟಿಪ್ಪಲ ನಾರಾಯಣ ಭಟ್ ಆಶುಕವಿ ಪ್ರಶಸ್ತಿ" ಪ್ರದಾನ.

ಪುತ್ತೂರಿನಲ್ಲಿ ಮೇಳೈಸಿದ ಸಾಹಿತ್ಯ,ಗಾನ ನೃತ್ಯ ವೈಭವ. ಸಾಹಿತಿ, ಸಂಘಟಕಿ, ಶಿಕ್ಷಕಿ ಬೊಳುವಾರು ನಿವಾಸಿ ಡಾ. ಶಾಂತಾ ಪುತ್ತೂರುರವರಿಗೆ "ಪೊಟ್ಟಿಪ್ಪಲ ನಾರಾಯಣ ಭಟ್ ಆಶುಕವಿ ಪ್ರಶಸ್ತಿ" ಪ್ರದಾನ.
ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು, ಶಿವಮಣಿ ಕಲಾ ಸಂಘ ಪುತ್ತೂರು ಸಹಯೋಗದೊಂದಿಗೆ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಶತ ಸಂಭ್ರಮ ಪೊಟ್ಟಿಪ್ಪಲ ಆಶುಕವಿ ಕೀರ್ತಿ ಶೇಷ ನಾರಾಯಣ ಭಟ್ ರವರಿಗೆ ನುಡಿನಮನ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಭಜನೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಹಿತಿ, ಸಂಘಟಕಿ, ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಬೊಳುವಾರು ನಿವಾಸಿ ಡಾ. ಶಾಂತಾ ಪುತ್ತೂರುರವರಿಗೆ "ಪೊಟ್ಟಿಪ್ಪಲ ನಾರಾಯಣ ಭಟ್ ಆಶುಕವಿ ಪ್ರಶಸ್ತಿ" ನೀಡಿ ಗೌರವಿಸಲಾಯಿತು.ಇದೇ ವೇದಿಕೆಯಲ್ಲಿ ಜಯಾನಂದ ಪೆರಾಜೆ, ರಾಣಿ ಪುಷ್ಪಲತಾ ದೇವಿ, ಗಂಗಾಧರ ಗಾಂಧಿ ಯವರನ್ನು ಗೌರವಿಸಲಾಯಿತು. ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ದೀಪ ಪ್ರಜ್ವಲನೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷರಾದ ಉಮೇಶ್ ನಾಯಕ್ ಪುತ್ತೂರುರವರು ಶತ ಸಂಭ್ರಮ ಉದ್ಘಾಟನೆ ಮಾಡಿದರು. ಡಾ.ವೆಂಕಟ ಗಿರೀಶ್ ಪ್ರಕೃತಿ ಆಯುರ್ವೇದ ಆಸ್ಪತ್ರೆ ಚೂರಿಪಳ್ಳ ಸಭಾಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರೇಮಲತಾರಾವ್, ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ಅಧ್ಯಕ್ಷೆ ಡಾ.ವಾಣಿ ಶ್ರೀ ಕಾಸರಗೋಡು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಡಾ.ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು. ಡಾ.ವಾಣಿಶ್ರೀ ಕಾಸರಗೋಡು ಸ್ವಾಗತಿಸಿದರು, ಮನುಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜಶೇಖರ ದಾವಣಗೆರೆ ಕಾರ್ಯಕ್ರಮ ನಿರೂಪಿಸಿದರು. ಅಚ್ಚುತ ಭಟ್ ಧನ್ಯವಾದವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.