Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ ಶಾಸಕರ ಉಪ್ಪಳ ಕಛೇರಿಗೆ ಎಸ್. ಡಿ.ಪಿ.ಐ ಯಿಂದ ಪ್ರತಿಭಟನಾ ಮಾರ್ಚ್.

ಮಂಜೇಶ್ವರ ಶಾಸಕರು ಮಂಜೇಶ್ವರದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು - ಇಕ್ಬಾಲ್ ಹೊಸಂಗಡಿ.
ಮಂಜೇಶ್ವರ: ಕೇವಲ ಪೊಳ್ಳು ಭರವಸೆಗಳನ್ನು ನೀಡಿ, ಯೋಜನೆ ಜಾರಿಯಲ್ಲಿ ಪಕ್ಷಪಾತ ಮಾಡುವ ಮೂಲಕ ಮಂಜೇಶ್ವರ ಶಾಸಕರು ಜನತೆಯನ್ನು ವಂಚಿಸುತ್ತಿದ್ದಾರೆಂದು ಎಸ್.ಡಿ.ಪಿ‌.ಐ ಮಂಜೇಶ್ವರ ಮಂಡಲಾಧ್ಯಕ್ಷರಾದ ಅಶ್ರಫ್ ಬಡಾಜೆ ಹೇಳಿದರು. ಪಕ್ಷದ ವತಿಯಿಂದ ಉಪ್ಪಳದಲ್ಲಿರುವ ಶಾಸಕರ ಕಚೇರಿಗೆ ನಡೆಸಿದ ಮಾರ್ಚ್ ನಲ್ಲಿ ಅವರು ಮಾತನಾಡುತ್ತಿದ್ದರು.
ಬೆಳಗ್ಗೆ ಉಪ್ಪಳ ಪೇಟೆಯಿಂದ ಆರಂಭವಾದ ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾದರು. ಎಸ್. ಡಿ.ಪಿ.ಐ ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ ಹೊಸಂಗಡಿ ಮಾರ್ಚ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಶಾಸಕರು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಂತೆ ತಿಳಿಸಿದರು. ಈಡೇರಿಲ್ಲವಾದರೆ ಹಾಗೂ ಮತ್ತೆ ಎಂದಿನಂತೆ ಪಕ್ಷಪಾತ ಧೋರಣೆ ಮುಂದುವರಿದರೆ, ಮುಂಬರುವ ಚುನಾವಣೆಯಲ್ಲಿ ಜನತೆಯೇ ಸ್ಪಷ್ಟ ಉತ್ತರ ನೀಡಲಿದ್ದಾರೆಯೆಂದೂ ಅವರು ತಿಳಿಸಿದರು.
ಎಸ್. ಡಿ.ಪಿ.ಐ ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಅಧ್ಯಕ್ಷತೆ ವಹಿಸಿದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಚೇರ್ಮಾನ್ ಹಮೀದ್ ಹೊಸಂಗಡಿ, ಮಂಡಲ ಕಾರ್ಯದರ್ಶಿ ಶಬೀರ್ ಪೊಸೋಟ್, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಅನ್ವರ್ ಆರಿಕ್ಕಾಡಿ, ಉಪಾಧ್ಯಕ್ಷ ಶರೀಫ್ ಪಾವೂರು ಮಾತನಾಡಿದರು. ಕೋಶಾಧಿಕಾರಿ ಅನ್ಸಾರ್ ಗಾಂಧಿನಗರ, ಮೀಂಜ ಗ್ರಾಮ ಪಂಚಾಯತ್ ಸದಸ್ಯರಾದ ರಝಾಕ್ ಗಾಂಧಿನಗರ ಹಾಗೂ ವಿವಿಧ ಪಂಚಾಯತ್ ಗಳಿಂದ ಆಗಮಿಸಿದ ನೇತಾರರಾದ ತಾಜುದೀನ್ ಉಪ್ಪಳ, ನಾಸರ್ ಬಂಬ್ರಾಣ, ಇಕ್ಬಾಲ್ ಕುಂಜತ್ತೂರು, ಮುಸ್ತಫಾ ಕೋಡಿ ಮೊದಲಾದವರು ಪ್ರತಿಭಟನೆಗೆ ನೇತೃತ್ವ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.