Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಉದ್ಯೋಗ ಭರವಸೆ ನೀಡಿ, ಲಕ್ಷಾಂತರ ರೂ ವಂಚನೆ ಮಾಡಿರುವ ಡಿ.ವೈ.ಎಫ್. ಐ ನೇತಾರೆ ಸಚಿತಾ ರೈ ಪ್ರಕರಣ ಸಮಗ್ರ ತನಿಖೆ ಆಗಬೇಕು - ಬಿಜೆಪಿ ಮಂಜೇಶ್ವರ.

ಉದ್ಯೋಗ ಭರವಸೆ ನೀಡಿ, ಲಕ್ಷಾಂತರ ರೂ ವಂಚನೆ ಮಾಡಿರುವ ಡಿ.ವೈ.ಎಫ್. ಐ ನೇತಾರೆ ಸಚಿತಾ ರೈ ಪ್ರಕರಣ ಸಮಗ್ರ ತನಿಖೆ ಆಗಬೇಕು - ಬಿಜೆಪಿ ಮಂಜೇಶ್ವರ.
ಮಂಜೇಶ್ವರ: ಉದ್ಯೋಗ ಭರವಸೆ ನೀಡಿ ಲಕ್ಷಾಂತರ ರೂ ವಂಚನೆ ಮಾಡಿರುವ ಡಿ.ವೈ.ಎಫ್. ಐ ನೇತಾರೆ ಸಚಿತಾ ರೈ ಅವರ ವಂಚನೆ ಪ್ರಕರಣ ಸಮಗ್ರ ತನಿಖೆ ಆಗಬೇಕು. ಇದರ ಹಿಂದೆ ಇರುವ ವ್ಯವಸ್ಥಿತ ಜಾಲ ಬಯಲಿಗೆ ತರಬೇಕು. ಕೇರಳದಲ್ಲಿ ಆಡಳಿತದಲ್ಲಿ ಸರಕಾರದ ಕೈಗೊಂಬೆ ಆಗಿರುವ ಇಲಾಖೆ ತನಿಖೆ ನಡೆಸಿದರೆ ಷಡ್ಯಂತ್ರ ಹೊರಬರಲು ಸಾಧ್ಯವಿಲ್ಲ ಮತ್ತು ಪ್ರಕಾರಣವನ್ನೇ ಮುಚ್ಚಿಹಾಕುವ ಪ್ರಯತ್ನವು ಆಡಳಿತ ಪಕ್ಷದ ಕಡೆಯಿಂದ ಆಗಬಹುದು ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಹೇಳಿದರು. ಹಣ ಕೊಟ್ಟು ವಂಚನೆಗೆ ಇಡದವರು ಕೂಡಲೇ ಸಮೀಪದ ಪೊಲೀಸ್ ಠಾಣೆಗಳಲ್ಲಿ ಕಾನೂನು ಕ್ರಮಕ್ಕೆ ಅಗ್ರಹಿಸಬೇಕು ಎಂದು ಬಿಜೆಪಿ ಅಗ್ರಹಿಸಿದೆ. ಸಚಿತಾರಿಗೆ ಸರಕಾರಿ ಉದ್ಯೋಗ ಸಿಕ್ಕಿದ ಬಗೆಯೂ ಸಂಶಯಗಳಿವೆ. ತರಗತಿಯಲ್ಲಿ ಮಕ್ಕಳ ಮುಂದೆ ರೀಲ್ಸ್ ಮಾಡುವುದನ್ನೇ ಕಾಯಕ ವಾಗಿಸಿದ ಸಚಿತಾ ರೈ ಅಧ್ಯಾಪಕಿ ಆಗುವ ಯೋಗ್ಯತೆ ಇಲ್ಲ. ಕೇರಳ ಆಡಳಿತ ಸರಕಾರದ ಉನ್ನತ ಮಟ್ಟದಲ್ಲಿ ಬಾಂಧವ್ಯ ಇರುವ ಇವರ ವಂಚನ ಜಾಲ ತನಿಖೆಯನ್ನು ಕೇಂದ್ರ ತಂಡದಿಂದ ಮಾಡಬೇಕು ಎಂದು ಬಿಜೆಪಿ ಅಗ್ರಹಿಸಿದೆ. ಇಷ್ಟೆಲ್ಲಾ ವಂಚನೆ ಬಯಲಿಗೆ ಬಂದರೂ, ಬಂಧಿಸದೆ ಇರುವ ಪೊಲೀಸ್ ಇಲಾಖೆಯ ಕ್ರಮ ಖಂಡನಿಯ, ಬಿಜೆಪಿ ಮಂಜೇಶ್ವರ, ಪೈವಳಿಕೆ, ಮೀoಜ, ವರ್ಕಾಡಿ ಪಂಚಾಯತ್ ಸಮಿತಿಗಳು ತನಿಖೆಗೆ ಅಗ್ರಹಿಸಿದೆ. ಪುತ್ತಿಗೆ ಪಂಚಾಯತ್ ಸಮಿತಿ ಸಚಿತಾ ರೈ ಮನೆಗೆ ಪ್ರತಿಭಟನೆ ಧರಣಿ ನಡೆಸುವ ಯೋಜನೆ ಇದೆ ಎಂದು ಪುತ್ತಿಗೆ ಬಿಜೆಪಿ ನೇತಾರ ಪದ್ಮನಾಭ ಆಚಾರ್ಯ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.