ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ. ಪುತ್ತೂರು ನರೇಂದ್ರ ಕಾಲೇಜ್ ನ ವಿದ್ಯಾರ್ಥಿನಿ, ಪುತ್ತೂರು ಗುಡ್ಡೆಮನೆ ನಿವಾಸಿ ಕು. ಭೂಮಿಕಾ ಆಚಾರ್ಯರಿಗೆ 589 (98.16%) ಅಂಕ. ರಾಜ್ಯದಲ್ಲಿ ಒಂಬತ್ತನೇ ಸ್ಥಾನ. ತಾಲೂಕಿಗೆ ದ್ವಿತೀಯ ಸ್ಥಾನ.
ಏಪ್ರಿಲ್ 12, 2024
0
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ. ಪುತ್ತೂರು ನರೇಂದ್ರ ಕಾಲೇಜ್ ನ ವಿದ್ಯಾರ್ಥಿನಿ, ಪುತ್ತೂರು ಗುಡ್ಡೆಮನೆ ನಿವಾಸಿ ಕು. ಭೂಮಿಕಾ ಆಚಾರ್ಯರಿಗೆ 589 (98.16%) ಅಂಕ. ರಾಜ್ಯದಲ್ಲಿ ಒಂಬತ್ತನೇ ಸ್ಥಾನ. ತಾಲೂಕಿಗೆ ದ್ವಿತೀಯ ಸ್ಥಾನ.
ಪುತ್ತೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ 9 ನೇ ಸ್ಥಾನವನ್ನು ಪುತ್ತೂರಿನ ನರೇಂದ್ರ ಪದವಿ ಪೂರ್ವ ಕಾಲೇಜ್ ಪಡೆದುಕೊಂಡಿದ್ದು, ಪ್ರಸ್ತುತ ವಿದ್ಯಾ ಸಂಸ್ಥೆಯ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕು. ಭೂಮಿಕಾ ಜಿ. ಆಚಾರ್ಯ 589 (98.16%) ಅಂಕವನ್ನು ಗಳಿಸಿ, ರಾಜ್ಯದಲ್ಲಿ ಒಂಬತ್ತನೇ ಸ್ಥಾನ ಪಡೆದು, ಪುತ್ತೂರು ತಾಲೂಕಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಾರಾಡಿ ಗುಡ್ಡೆಮನೆ ನಿವಾಸಿ ಗಣೇಶ್ ಆಚಾರ್ಯ - ಚಂದ್ರಕಲಾ ದಂಪತಿಯ ಪುತ್ರಿಯಾಗಿರುವ ಭೂಮಿಕಾ ಕಲಿಕೆಯ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಸಕ್ರಿಯರಾಗಿದ್ದು, ಚಿತ್ರಕಲೆ, ಸಂಗೀತ, ನಾಟಕ, ಯಕ್ಷಗಾನ, ನೃತ್ಯ, ಭರತನಾಟ್ಯ ಮುಂತಾದ ಕಲಾ ಪ್ರಕಾರಗಳಲ್ಲಿ ಮಿಂಚುವ ಪ್ರತಿಭಾನ್ವಿತ ಕಲಾವಿದೆಯಾಗಿರುವಳು. ಭೂಮಿಕಾ ಜಿ. ಯ ಸಾಧನೆಯನ್ನ ಮೆಚ್ಚಿ ವಿದ್ಯಾ ಸಂಸ್ಥೆಯ ವತಿಯಿಂದ ಹೆತ್ತವರ ಸಮ್ಮುಖದಲ್ಲಿ ಗೌರವಿಸಲಾಯಿತು. ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿ ಸಾಧನೆ ತೋರಿದ ಭೂಮಿಕಾ ಜಿ ಯ ಮುಂದಿನ ವಿದ್ಯಾರ್ಥಿ ಜೀವನದ ಉಜ್ವಲ ಭವಿಷ್ಯಕ್ಕೆ ಗುಡ್ಡೆಮನೆ ಕುಟುಂಬಸ್ಥರು ಅಭಿನಂದಿಸಿದ್ದಾರೆ.