ಕಾಳು ಮೆಣಸು ಕೊಯ್ಯುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಕಡಂಬಾರ್ ಅರಿಮಲೆ ನಿವಾಸಿ ಸಮೀರ್ (32) ಹಾಸನದಲ್ಲಿ ಸಾವು.
ಏಪ್ರಿಲ್ 09, 2024
0
ಕಾಳು ಮೆಣಸು ಕೊಯ್ಯುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಕಡಂಬಾರ್ ಅರಿಮಲೆ ನಿವಾಸಿ ಸಮೀರ್ (32) ಹಾಸನದಲ್ಲಿ ಸಾವು.
ಮಂಜೇಶ್ವರ: ಕಾಳು ಮೆಣಸು ಕೊಯ್ಯುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಕಡಂಬಾರ್ ಅರಿಮಲೆ ನಿವಾಸಿ ಸಮೀರ್ (32) ಹಾಸನದಲ್ಲಿ ಸಾವಿಗೀಡಾದ ಘಟನೆ ನಡೆದಿದೆ. ಹೊಸಂಗಡಿ ಬಳಿಯ ಕಡಂಬಾರ್ ಅರಿಮಲೆ ನಿವಾಸಿಯಾಗಿರುವ ಸಮೀರ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೊಡ್ಡಸಾಲವರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಹುಕ್ಕುಂ ಚಂದ್ ರವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಮೀರ್ ಕಾಳು ಮೆಣಸು ಕೊಯ್ಯುತ್ತಿದ್ದಾಗ ಅವಘಡ ನಡೆದಿದೆ. ಇವರು ಕಬ್ಬಿಣದ ಎಣಿಯನ್ನು ಬಳಸಿ ಕಾಳು ಮೆಣಸು ಕೊಯ್ಯುತ್ತಿದ್ದಾಗ, ವಿದ್ಯುತ್ ತಂತಿಯಿಂದ ಶಾಕ್ ತಗುಲಿತ್ತು. ಸ್ಥಳದಲ್ಲೇ ಗಂಭೀರ ಗಾಯಗೊಂಡು ಕರಟಿ ಹೋಗಿದ್ದಾರೆ. ಸ್ಥಳಕ್ಕೆ ಹಾಸನದ ಅರೆಹಳ್ಳಿಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಎಸ್ಟೇಟ್ ಮಾಲಕನ ನಿರ್ಲಕ್ಷ್ಯದ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಕಡು - ಬಡ ಕುಟುಂಬದ ಆಧಾರ ಸ್ಥಂಬವಾಗಿದ್ದ ಸಮೀರ್ ರ ಮೃತದೇಹವನ್ನು ಊರಿನ ಸಾಮಾಜಿಕ ಕಾರ್ಯಕರ್ತರು ಸೇರಿಕೊಂಡು ಕಡಂಬಾರ್ ನ ಅರಿಮಲೆಯಲ್ಲಿರುವ ಮನೆಗೆ ತರಿಸಿ, ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಸಿದರು. ಮೃತರು ತಂದೆ, ತಾಯಿ, ಪತ್ನಿ, ಪುತ್ರ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.


