Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾ ಏಪ್ರಿಲ್ 19 ಕ್ಕೆ.

ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾ ಏಪ್ರಿಲ್ 19 ಕ್ಕೆ.
ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನಿನಲ್ಲಿ ರಸ್ತೆ ದಾಟಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲ್ಯಕ್ಷವನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರದ ಭಾಗವಾಗಿ ಎಪ್ರಿಲ್ 19 ರಂದು ಸಂಜೆ ನಾಲ್ಕು ಗಂಟೆಗೆ ಉದ್ಯಾವರದಿಂದ ಮಂಜೇಶ್ವರ ತನಕ ಬೃಹತ್ ಜನಕೀಯ ಪ್ರತಿಭಟನಾ ಮೆರವಣಿಗೆ ಹಮ್ಮಿ ಕೊಂಡಿರುವುದಾಗಿ ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮಂಜೇಶ್ವರ ಅತಿಥಿಗೃಹದಲ್ಲಿ ಕರೆದ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದ್ದಾರೆ. ಷಟ್ಪಥ ರಸ್ತೆ ಕಾಮಗಾರಿ ಆರಂಭವಾಗುವ ಮುನ್ನವೇ ಜನರ ಬೇಡಿಕೆಗೆ ಕಿಂಚತ್ತೂ ಬೆಲೆ ಕಲ್ಪಿಸದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ನಾಡಿನ ಜನತೆಯ ಪ್ರತಿಭಟನೆಗೆ ಕಾರಣವಾಗಿದ್ದು ಎಪ್ರಿಲ್ 19 ರಂದು ರಾಜಕೀಯ ಜಾತಿ ಮತ ಭೇಧವನ್ನು ಮರೆತು ನಡೆಯಲಿರುವ ಬೃಹತ್ ಸಮಾವೇಶ ಇದಕ್ಕೆ ಸಾಕ್ಷಿಯಾಗಲಿರುವುದಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತಿಳಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಲ್ಲ ಸಲ್ಲದ ಕಾರಣ ನೀಡಿ ಲೋಪ ಮರೆಮಾಚಲು ಯತ್ನಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಶೇ.100ರಷ್ಟು ಪೂರ್ಣಗೊಂಡ ಪ್ರದೇಶಗಳಲ್ಲಿ ಅಂಡರ್ ಪಾಸ್ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗಿದ್ದರೆ ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಸಂಜೀವ ಶೆಟ್ಟಿ ಮಾಡ, ಅಶ್ರಫ್ ಬಡಾಜೆ, ಜಬ್ಬಾರ್ ಬಹರೈನ್, ಎಸ್.ಎಂ.ಬಶೀರ್, ಹನೀಫ ಸುರಭಿ. ಮಜೀದ್ ಕುನ್ನು, ಝಕರಿಯಾ ಮಂಜೇಶ್ವರ. ಸಾದಿಕ್ ಕುನ್ನು, ಅಬ್ದುಲ್ ರವೂಫ್ ಮೊದಲಾದವರು ಪಾಲ್ಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.