ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿಯವರಿಂದ ಮಂಗಳೂರಿನಲ್ಲಿ ಯಶಸ್ವಿ ಕಂಡ "ರೋಡ್ ಶೋ". ಮುಗಿಲು ಮುಟ್ಟಿತು ಸಾವಿರಾರು ಅಭಿಮಾನಿಗಳ ಜೈಕಾರ.
ಏಪ್ರಿಲ್ 14, 2024
0
ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿಯವರಿಂದ ಮಂಗಳೂರಿನಲ್ಲಿ ಯಶಸ್ವಿ ಕಂಡ "ರೋಡ್ ಶೋ". ಮುಗಿಲು ಮುಟ್ಟಿತು ಸಾವಿರಾರು ಅಭಿಮಾನಿಗಳ ಜೈಕಾರ.
ಮಂಗಳೂರು, ಏಪ್ರಿಲ್ 14: ರಾಜ್ಯದ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಮೈಸೂರಿನಿಂದ ತಮ್ಮ ಯಾತ್ರೆ ಆರಂಭಿಸಿದ್ದು, ಇದೀಗ ರಾತ್ರಿ ಮಂಗಳೂರಿನಲ್ಲಿ ರೋಡ್ಶೋ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ನಾರಾಯಣಗುರು ವೃತ್ತದಿಂದ ನವಭಾರತ ವೃತ್ತದವರೆಗೆ ಅಂದರೆ ಸುಮಾರು 2 ಕಿ.ಮೀ. ರೋಡ್ಶೋ ನಡೆಸುತ್ತಿದ್ದಾರೆ. ಉತ್ಸಾಹದಿಂದ ಮೋದಿಗಾಗಿ ಲಾಲ್ಬಾಗ್ ಜಂಕ್ಷನ್ನಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿ, ಮೋದಿ.. ಮೋದಿ.. ಎಂದು ಜೈಕಾರ ಹಾಕುತ್ತಾ ಕೂಗಿ ಕರೆಯುತ್ತಿರುವುದು ಕಂಡು ಬಂದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮತ್ತು ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದಾರೆ.ಎಡಿಜಿಪಿ ಚಂದ್ರಶೇಖರ್, ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಅಂತಿಮ ಹಂತದ ಭದ್ರತೆಯಲ್ಲಿ ರೋಡ್ ಶೋ ನಡೆಯುತ್ತಿದೆ.



